ಹೌದು ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ಅತಿರೇಕಕ್ಕೆ ಏರಿದಂತಿದೆ, ಯಾವದೋ ಒಂದು ದೊಡ್ಡ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಒಂದು ವರ್ಷದವರೆಗೆ ಯಾವದೋ ಕೆಲಸ ಮಾಡಿ ನಾನು ಕೊಡ ಡಾಕ್ಟರ ಅಂತಾ ಹೇಳಿಕೊಂಡು ಗ್ರಾಮೀಣ ಪ್ರದೇಶದ ಮುಗ್ದ ಜನರ ಜೀವದೊಂದಿಗೆ ಆಟ ಆಡುತ್ತಿದ್ದಾರೆ.. ಇಂತಹ ನಕಲಿ ವೈದ್ಯರಿಗೆ ವಿದ್ಯಾರ್ಹತೆ ಇರುವದಿಲ್ಲ, ಇವರಿಗೆ ಇಂಜೆಕ್ಷನ್ ಮಾಡುವ ಪರವಾಣಿಗೆಯೂ ಕೂಡ ಇಲ್ಲಾ ಹೀಗಿದ್ದರೂ ಯಾವದೇ ಅಂಜಿಕೆ ಅಳಿಕಿಲ್ಲದೆ ತಮ್ಮ ದಂದೆಯಲ್ಲಿ ಮಗ್ನರಾಗಿ ಜನರಿಂದ ಹಣ ಸುಲಿಗೆ ಮಾಡುವದಲ್ಲದೆ ಜೀವಕ್ಕೆ ಕಂಟಕಪ್ರಾಯವಾಗಿದ್ದಾರೆ,
“ಈ ಅಮ್ಮನ ಕೈಗುಣ ಚಲೋ ಐತ್ತಂತೆ “ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಒಬ್ಬ ಮಹಿಳಾ ನಕಲಿ ವೈದ್ಯದೇವತೆ ಇದ್ದಾಳೆ ಇವರ ಹೆಸರು ಲಕ್ಷೀ ಹಂಜಿ ಅಂತಾ, ಇವರಿಗೆ ಹಾಗೂ ವೈದ್ಯಲೋಕಕ್ಕೆ ಯಾವ ಸಂಬಂದವು ವಿದ್ಯಾರ್ಹತೆ ಇಲ್ಲವೇ ಇಲ್ಲಾ, ಪಕ್ಕದ ಪಟ್ಟಣದ ಹಾರೂಗೇರಿಯ ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಇವಾಗ ನಾನೇ ಡಾಕ್ಟ್ರು ಅಂತಾ ಕ್ಲಿನಿಕ್ ಓಪನ್ ಮಾಡಿ 3 ವರ್ಷಗಳೇ ಮುಗಿದವು, ಅದ್ಯಾವ ಆಸ್ಪತ್ರೆ ಇವರಿಗೆ ಸರ್ವಿಸ್ ಮಾಡಲಿಕ್ಕೆ ಅನುಮತಿ ಕೊಟ್ಟು ಇವರಿಗೆ ಡಾಕ್ಟರ್ ಬಿರುದು ಕೊಟ್ರೋ ಗೊತ್ತಿಲ್ಲ, ಇವರಂತೂ ಚೆನ್ನಾಗಿ ಇಂಜೆಕ್ಷನ್ ಕೊಡ್ತಾರೆ ಮಾತ್ರೆಗಳನ್ನ ಚೆನ್ನಾಗಿ ಮಾರ್ಕೊಂಡು, ಉಚಿತ ಸಲಹೆ ಕೊಡುತ್ತಾ ಬೋರ್ಡು ಇರದ ಕ್ಲಿನಿಕ್ ನಡಿಸ್ತಾ ಚೆನ್ನಾಗಿ ಕಲೆಕ್ಷನ್ ಮಾಡ್ತಿದ್ದಾರೆ.
ಜೀವಂತ ಶವದಂತಾದ THO :
ನಕಲಿ ವೈದ್ಯರ ಕುರಿತು ಸಾಕಷ್ಟು ಮಾಹಿತಿಯನ್ನು ಇವರಿಗೆ ನೀಡಿದರು THO ಮಾತ್ರ ಮುಖಪ್ರೇಕ್ಷಕರಂತೆ ಇದ್ದಾನೆ, ಸರ್ಕಾರದ ಸುತ್ತೋಲೆಯ ಪ್ರಕಾರ ನಕಲಿ ವೈದ್ಯರ ಹಾವಳಿ ತಡೆಯಬೇಕಿದೆ ಆದ್ರೆ ಈ ಆಸಾಮಿ ಮಾತ್ರ ಆರಾಮಆಗಿ ಅದೇನು ನಡದೆ ಇಲ್ಲಾ ಅನ್ನೋವಸ್ಟು ಜೀವಂತ ಶವದ ಹಾಗೆ ವರ್ತಿಸುತ್ತಿದೆ,
ನಕಲಿ ವೈದ್ಯರ ನೆರವಿಗೆ ನಿಂತಿದ್ದಾರಾ ಅನ್ನೋ ಅನುಮಾನ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ… ಇನ್ನಾದರೂ ಈ ಮೊಂಡುತನ ಬಿಟ್ಟು ನಕಲಿ ವೈದ್ಯರ ಅಟ್ಟಹಾಸಕ್ಕೆ ಬ್ರೇಕ್ ಹಾಕಿ ಜನರ ಜೀವದ ಜೊತೆ ಆಟವಾಡುತ್ತಿರುವ ನಕಲಿ ವೈದ್ಯರಿಗೆ ನಿಮ್ಮ ಅಸಲಿಯತ್ತು ದರ್ಶನವಾಗಲಿ
ವರದಿ : ಎಂ. ಕೆ. ಸಪ್ತಸಾಗರ