ಭೀಕರ ಕಾರು ಅಫಘಾತದ ಬಳಿಕ ಗುಣಮುಖರಾಗಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಪಾಕಿಸ್ತಾನ ತಂಡದ ಮಾಜಿ ವೇಗಿ ವಸೀಮ್ ಅಕ್ರಮ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಕೊಟ್ಟ ಬ್ಯಾಟ್ ಅತ್ಯಂತ ವಿಶೇಷ ಉಡುಗೊರೆ, ಎಂದಿಗೂ ಬಳಸುವುದಿಲ್ಲ: ಆಕಾಶ್ ದೀಪ್
ಹೌದು .. 2022ರ ಡಿಸೆಂಬರ್ 30 ರಂದು ಮುಂಜಾನೆ ರಿಷಭ್ ಪಂತ್ ಅವರ ಕಾರು ಭೀಕರ ಅಫಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರ ಅವರು ಸಂಪೂರ್ಣವಾಗಿ ಗುಣಮುಖರಾಗಲು 14 ತಿಂಗಳುಗಳ ಸಮಯವನ್ನು ತೆಗೆದುಕೊಂಡಿದ್ದರು.
ಸ್ಪೋರ್ಟ್ಸ್ಕೀಡಾ ಜತೆ ಮಾತನಾಡಿದ ವಸೀಮ್ ಅಕ್ರಮ್, “ದೊಡ್ಡ ಅವಗಢದಿಂದ ಮರಳಿ ಬಂದು ರಿಷಭ್ ಪಂತ್ ಇಂಥಾ ಅದ್ಭುತ ಪ್ರದರ್ಶನವನ್ನು ತೋರಿರುವುದು ಪವಾಡ. ಅವರು ಸೂಪರ್ ಮ್ಯಾನ್ ರೀತಿಯ ಆಟವನ್ನು ಆಡಿದ್ದಾರೆ. ಅವರು ಅಫಘಾತವಾಗಿದ್ದ ಹಾದಿಯನ್ನು ನೀಡಿದ ಬಳಿಕ ಪಾಕಿಸ್ತಾನದಲ್ಲಿ ನಮಗೆಲ್ಲಾ ತುಂಬಾ ನೋವಾಗಿತ್ತು. ಅದರಂತೆ ನಾನು ಟ್ವೀಟ್ ಕೂಡ ಮಾಡಿದ್ದೆ. ಅವರು ಕಳೆದ ಐಪಿಎಲ್ ಟೂರ್ನಿಯಲ್ಲಿ 40ರ ಸರಾಸರಿ ಹಾಗೂ 155ರ ಸ್ಟ್ರೈಕ್ ರೇಟ್ನಲ್ಲಿ 446 ರನ್ಗಳನ್ನು ಸಿಡಿಸಿದ್ದರು. ಅವರು ಪವಾಡದ ಹುಡುಗ,” ಎಂದು ಶ್ಲಾಘಿಸಿದ್ದಾರೆ.