ತುಮಕೂರು: ವಿದ್ಯಾಬ್ಯಾಸದ ಜೊತೆಗೆ ಬ್ಯುಸಿನೆಸ್ ಶುರು ಮಾಡಿದ್ದೇ ತಪ್ಪಾಯ್ತಾ..? ಹೌದು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಫೈನಲ್ ಇಯರ್ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ, ಶಿರಾ ನಗರದ ಸಂತೇಪೇಟೆಯಲ್ಲಿ ನಡೆದಿದೆ.
ವಿವೇಕ್ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಫೈನಲ್ ಇಯರ್ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದ ವಿವೇಕ್, ವಿದ್ಯಾಭ್ಯಾಸದ ಜೊತೆಗೆ ಮಶ್ರೂಮ್ ಬ್ಯುಸಿನೆಸ್ ಶುರು ಮಾಡಿದ್ದನು. ಮಶ್ರೂಮ್ ಬೇಸಾಯದ ಬಗ್ಗೆ ಹೃತ್ವಿಕ್ ಬಳಿ ಟ್ರೈನಿಂಗ್ ಪಡೆದು ನಂತರ ಬೀಜ ಖರೀದಿಸಿದ್ದನು. ಬ್ಯುಸಿನೆಸ್ ಚೆನ್ನಾಗಿ ಆಗುತ್ತಿದ್ದರಿಂದ ಹೃತ್ವಿಕ್ ಮತ್ತು ಅಂಜನ್ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.
ಹಣ ಕೊಡದಿದ್ದರೆ ನಿಮ್ಮ ತಂದೆ ಮತ್ತು ತಾಯಿಯನ್ನ ಮುಗಿಸುತ್ತೇವೆ ಎಂದು ಆಗಾಗ ಬೆದರಿಸುತ್ತಿದ್ದರು. ಮನೆಯ ಒಡವೆ ಮತ್ತು ತಾಯಿಯ ಮಾಂಗಲ್ಯ ಸರ ಗಿರವಿ ಇಟ್ಟು 40 ಸಾವಿರ ಹೊಂದಿಸಿ ವಿವೇಕ್ ಕೊಟ್ಟಿದ್ದನು. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೃತ್ವಿಕ್ ಮತ್ತು ಅಂಜನ್, ಹಣ ಕೊಡದಿದ್ದಕ್ಕೆ ವಿವೇಕ್ ಎಕ್ಸಾಮ್ ಬರೆಯೋದುನ್ನ ತಪ್ಪಿಸಿ ಅಪಹರಣ ಮಾಡಿ ರೂಮಿನಲ್ಲಿ ಕೂಡಿ ಹಾಕಿದ್ದರು.
ಇಬ್ಬರು ಆರೋಪಿಗಳು ಹೃತ್ವಿಕ್ ಹತ್ರ ಸಿಗುವುದು ಕಳಪೆ ಮಶ್ರೂಮ್ ಅಂತ ರೈತರನ್ನ ವಿವೇಕ್ ಮೇಲೆ ಎತ್ತಿಕಟ್ಟಿದ್ದರು. ಇದ್ದರಿಂದ ಬೇಸತ್ತ ವಿವೇಕ್ ಹೃತ್ವಿಕ್ ಮತ್ತು ಅಂಜನ್ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್ ಬರದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.