ಇತ್ತೀಚಿನ ವರ್ಷಗಳಲ್ಲಿ ಯಾವುದನ್ನಾದರೂ ಬಿಡಬಹುದು ಆದರೆ ಮೊಬೈಲ್ ಫೋನ್ ಗಳನ್ನು ಬಿಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ, ನಮ್ಮ ಜೀವನವನ್ನು ಸುಲಭ, ವೇಗ ಮತ್ತು ಅನುಕೂಲಕರವಾಗಿಸಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು, ಪ್ರಪಂಚದ ಮಾಹಿತಿ ಪಡೆಯಲು ಅಥವಾ ಯಾವುದೇ ಕೆಲಸವನ್ನು ತಕ್ಷಣ ಪೂರ್ಣಗೊಳಿಸಲು, ದೈನಂದಿನ ಅಗತ್ಯಗಳನ್ನು ಪೂರೈಸಲು ಅತ್ಯಂತ ಸಹಕಾರಿಯಾಗಿದೆ. ಇದರ ಮೂಲಕ ಇಂಟರ್ನೆಟ್ ಜೊತೆಗೆ ಅನೇಕ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಮಗೆ ಅಗತ್ಯವಿರುವ ಮಾಹಿತಿಯನ್ನು ನಾವು ಎಲ್ಲಿಯಾದರೂ, ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದೆ.
Champion Trophy: ಕಿಂಗ್ ಕೊಹ್ಲಿ ಆರ್ಭಟ: ಆಸಿಸ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ!
ಪ್ರಸಕ್ತ ದಿನಮಾನಗಳಲ್ಲಿ ಬೆಳಗ್ಗೆ ಗುಡ್ ಮಾರ್ನಿಂಗ್ ಹೇಳುವುದರಿಂದ ರಾತ್ರಿ ಗುಡ್ನೈಟ್ ತನಕ ಎಲ್ಲಾ ಕಾರ್ಯವು ಅಂಗೈ ಅಗಲದ ಫೋನ್ನಲ್ಲಿಯೇ ಮುಗಿದು ಹೋಗುತ್ತದೆ. ಅಷ್ಟರ ಮಟ್ಟಿಗೆ ಜನರು ಫೋನ್ಗೆ ಅಡಿಕ್ಟ್ ಆಗಿದ್ದಾರೆ.
ಎಷ್ಟೋ ಜನರು ಫೋನ್ ಇಲ್ಲದೆ ನಾನಿಲ್ಲ ಎಂಬಂತೆ ಬದುಕುತ್ತಿದ್ದಾರೆ. ಅದರಲ್ಲೂ ಪುಟಾಣಿ ಮಕ್ಕಳು ಕೂಡ ಸ್ಮಾರ್ಟ್ಫೋನಿಗೆ ಜೋತು ಬಿದ್ದಿರುತ್ತಾರೆ. ಆದರೆ ಒಬ್ಬ ವ್ಯಕ್ತಿ ಪ್ರತಿದಿನ ತಮ್ಮ ಮೊಬೈಲ್ ಫೋನ್ ಅನ್ನು ಎಷ್ಟು ಬಾರಿ ಚೆಕ್ ಮಾಡುತ್ತಾನೆ ಅನ್ನೋ ಮಾಹಿತಿ ಇಲ್ಲಿದೆ..
ಸ್ಮಾರ್ಟ್ಫೋನ್ ಬಳಕೆದಾರ ದಿನಕ್ಕೆ 58 ಬಾರಿ ತನ್ನ ಫೋನನ್ನು ಪರಿಶೀಲಿಸುತ್ತಾನಂತೆ. ಅದರಲ್ಲೂ ಬೇರೊಬ್ಬರ ಫೋನ್ ಸೌಂಡ್ ಆದರೆ ಸಾಕು. ತನ್ನ ಫೋನ್ ರಿಂಗ್ ಆಗುತ್ತಿದ್ದೆಯಾ? ಎಂದು ಒಂದು ಬಾರಿ ತೆರೆದು ನೋಡುತ್ತಾನೆ. ಅಷ್ಟರ ಮಟ್ಟಿಗೆ ಜನರು ಫೋನಿನ ಮೇಲೆ ಅವಲಂಬಿತರಾಗಿರುವುದಲ್ಲದೆ, ಆಗಾಗ ಪರಿಶೀಲಿಸುತ್ತಿರುತ್ತಾರೆ.
ಆ್ಯಪ್ಎನಿ 2022 ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಭಾರತೀಯರು ಪ್ರತಿದಿನ 4.9 ಗಂಟೆಗಳ ಕಾಲ ಸ್ಮಾರ್ಟ್ಫೋನ್ನಲ್ಲಿ ಸಮಯ ಕಳೆಯುತ್ತಾರಂತೆ. ಹೀಗಾಗಿ ಈ ವಿಚಾರದಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. ಇನ್ನು ಅಮೆರಿಕನ್ನರು ಸ್ಮಾರ್ಟ್ಫೋನ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ನಂತರದ ಸ್ಥಾನದಲ್ಲಿ ಚೀನಾ ಮತ್ತು ಇಂಡೋನೇಷ್ಯಾ ಜನರು ಇದ್ದಾರೆ.