ಬೆಂಗಳೂರು: ರಾಜ್ಯದ ಜನರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಇಲಾಖೆ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಈ ಹಿನ್ನಲೆ ಆಹಾರ ಪದಾರ್ಥಗಳಿಗೆ ಬಳಸುವ ಕೃತಕ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ದೃಷ್ಟಿಯಿಂದ ರಾಜ್ಯದಲ್ಲಿ ಕೃತಕ ಬಣ್ಣಗಳಿಗೆ ನಿಷೇದ ಹೇರಿದೆ. ಸರ್ಕಾರದ ಈ ನಿರ್ಧಾರಕ್ಕೆ ಹೋಟೆಲ್ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋಬಿ ಹಾಗೂ ಕಾಟನ್ ಕ್ಯಾಂಡಿಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನಲೆ ರಾಜ್ಯ ಆರೋಗ್ಯ ಇಲಾಖೆ ಕೂಡ ಗೋಬಿ ಹಾಗೂ ಕಾಟನ್ ಕ್ಯಾಂಡಿಗಳ ಮಾದರಿ ಪರೀಕ್ಷೆ ನಡೆಸಿ, ಅವುಗಳಿಗೆ ಬಳಸುವ ಕೃತಕ ಬಣ್ಣಗಳಿಗೆ ಬ್ರೇಕ್ ಹಾಕಿದೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸದಂತೆ ನೀಷೆದ ಹೇರಿದೆ. ಆರೋಗ್ಯ ಇಲಾಖೆಯ ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಹೌದು ರಾಜ್ಯದ ಜನತೆಯ ಆರೋಗ್ಯ ದೃಷ್ಟಿಯಿಂದ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಬಳಸದಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಗೋಬಿ, ಕಾಟನ್ ಕ್ಯಾಂಡಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳಿಗೆ ಹಾನಿಕಾರಕ ಬಣ್ಣಗಳ ಬಳಸುವಂತಿಲ್ಲಾ ಎಂಬ ಆರೋಗ್ಯ ಇಲಾಖೆಯ ನಿರ್ಧಾರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ವಿರೋಧ ವ್ಯಕ್ತವಾಗುತ್ತಿದೆ. ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿ ಸಮಂಜಸವಲ್ಲಾ ಹಾಗೂ ಇದು ಅವೈಜ್ಞಾನಿಕ ನಿರ್ಧಾರ ಎಂಬ ವಾದ ಹೋಟೆಲ್ ಮಾಲೀಕರ ಸಂಘಟನೆಗಳಿಂದ ಕೇಳಿಬರುತ್ತಿದೆ.
ಇನ್ನೂ ಸರ್ಕಾರದಿಂದ ರೆಡ್,ಬ್ಲೂ,ಗ್ರೀನ್, ಯಲ್ಲೋ ಕಲರ್ ಬಳಸದಂತೆ ಮಾರ್ಗಸೂಚಿ ಹೊರಡಿಸಿದೆ ಆದ್ರೆ ಇದಕ್ಕೆ ಹೋಟೆಲ್ ಮಾಲೀಕರು ತಕರಾರು ಎತ್ತಿದ್ದಾರೆ. ಇನ್ನೂ ಸದ್ಯ ಈ ಎಲ್ಲಾ ಬಣ್ಣಗಳು FSSAI ನಿಂದ ಪರ್ಮಿಸೆಬಲ್ ಆಗಿದ್ದು ಯಾವ ಆಧಾರದ ಮೇಲೆ ಸರ್ಕಾರ ಈ ಬಣ್ಣಗಳಿಗೆ ನಿಷೇಧ ಹೇರಿದೆ ಎಂಬ ಪ್ರಶ್ನೆಗಳು ಹೋಟೆಲ್ ಮಾಲೀಕರಲ್ಲಿ ಉದ್ಬವವಾಗಿದೆ. ಇನ್ನು ಕೃತಕ ಆಹಾರ ಪದಾರ್ಥಗಳ ಬಣ್ಣ ತಯಾರಕರು ಹಾಗೂ ಗ್ರಾಹಕರ ಬಳಿ ಚರ್ಚಿಸದೆ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದ್ದು. ಸರ್ಕಾರದ ಮಾರ್ಗಸೂಚಿ ವಾಪಸ್ ಪಡೆಯುವಂತೆ ಮನವಿ ಹೋಟೆಲ್ ಮಾಲೀಕರು ಮನವಿ ಮಾಡಿಕೊಳ್ಳುತ್ತಿದ್ದು ಅಗತ್ಯವಿದ್ದರೆ ಸರ್ಕಾರದ ಜೊತೆ ಚರ್ಚೆ ನಡೆಸಲು ಸಜ್ಜಾಗಿದ್ದಾರೆ.
ಒಟ್ನಲ್ಲಿ ಆರೋಗ್ಯ ಇಲಾಖೆಯ ನಿರ್ಧಾರದ ವಿರುದ್ದ ಜಟಾಪಟಿ ಆರಂಭವಾಗಿದ್ದು, ಸರ್ಕಾರ ಮಾರ್ಗಸೂಚಿಯನ್ನು ಸ್ವಾಗತಿಸದೇ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದು ಸರ್ಕಾರ ತಮ್ಮ ನಿಲುವನ್ನು ಬದಲಾಯಿಸುತ್ತಾ ಇಲ್ಲಾ ಹೋಟೆಲ್ ಮಾಲೀಕರ ಮನವಿಗೆ ಕಿವಿಗೊಡದೆ ಸುಮ್ಮನಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ