ಬೆಂಗಳೂರು: ರಾತ್ರೋ ರಾತ್ರಿ ಬೂದಿಗೆರೆ ಕೆರೆ ನೀರು ಮುಳುಗಡೆ ಪ್ರದೇಶ ಒತ್ತುವರಿ ಮಾಡಿದ್ದವರ ವಿರುದ್ಧ ಸುದ್ದಿ ಪ್ರಸಾರ ಮಾಡಿದ್ದ ಬೆನ್ನಲ್ಲೇ ಅಧಿಕಾರಿಗಳು ಎಚ್ಛೆತ್ತುಕೊಂಡಿದ್ದಾರೆ …ಅಂದಹಾಗೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬೂದಿಗೆರೆ ಯ ಕೆರೆ ಯಲ್ಲಿ ರಿಯಲ್ ಎಸ್ಟೇಟ್ ಮಾಫಿಯ ದ ಭಾಸ್ಕರ್ ರೆಡ್ಡಿ ಅಂಡ್ ಪಟಾಲಂ ನಿಂದ ಸುಮಾರು ಎರಡು ಎಕರೆ ಕೆರೆ ನೀರು ಮುಳುಗಡೆ ಪ್ರದೇಶವನ್ನು ಒತ್ತುವರಿ ಮಾಡಲಾಗಿತ್ತು,
Chanakya Niti: ಮಹಿಳೆಯರ ಈ ಅಭ್ಯಾಸಗಳೇ ಇಡೀ ಕುಟುಂಬದ ನಾಶಕ್ಕೆ ಕಾರಣವಂತೆ..!
ನಮ್ಮಲ್ಲಿ ಸುದ್ದಿ ಪ್ರಚಾರ ವಾಗಿತ್ತಿದ್ದಂತೆ ಬೆಳ್ಳಂ ಬೆಳೆಗ್ಗೆ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ನೇತೃತ್ವದಲ್ಲಿ ಕಂದಾಯ, ಸರ್ವೇ ಹಾಗೂ ಪೋಲೀಸ್ ಇಲಾಖೆಯ ಜಂಟಿ ಕಾರ್ಯಚರಣೆಯಿಂದ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ಮತ್ತು ತೆಂಗಿನ ಮರಗಳನ್ನು ತೆರವು ಮಾಡಿದ್ದಾರೆ ಹಾಗೂ ಒತ್ತುವರಿದಾರರ ವಿರುದ್ಧ ಎಫ್ಐಆರ್ ಸಹ ದಾಖಲು ಮಾಡಿದ್ದಾರೆ..