ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು ಹಲವು ವಿಷಯಗಳ ಬಗ್ಗೆ ಚರ್ಚೆಯಾಯ್ತು.ವಕ್ಫ್ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದ್ವು. ಇದ್ರಿಂದ ಕೆಲಕಾಲ ಸದನದಲ್ಲಿ ಸದ್ದುಗದ್ದಲ ಉಂಟಾಯ್ತು.ಇದೇ ವೇಳೆ ಬಿಜೆಪಿಯವರು ಸದನದ ಬಾವಿಗಿಳಿದು ಪ್ರತಿಭಟಿಸಿದ್ರು.. ಇನ್ನು. ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕಿದ ಬಗ್ಗೆಯೂ ಪ್ರಸ್ತಾಪವಾಯ್ತು..ಅದಕ್ಕೆ ಸರ್ಕಾರ ಉತ್ತರವನ್ನ ಕೊಡ್ತು.
ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ.. ಮೊದಲ ದಿನದ ಕಲಾಪದಲ್ಲೇ ವಕ್ಫ್ ನೊಟೀಸ್ ಗದ್ದಲ ಶುರುವಾಯ್ತು.ರಾಜ್ಯಾದ್ಯಂತ ರೈತರು ವಕ್ಫ್ ನೊಟೀಸ್ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಹೋಗಬೇಕು ಹಾಗಾಗಿ ವಕ್ಫ್ ನೊಟೀಸ್ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ರು.ಈ ವೇಳೆ ಸದನದಲ್ಲಿ ಸದನದಲ್ಲಿ ಸದ್ದುಗದ್ದಲ ಶುರುವಾಯ್ತು.
ನಮ್ಮಅವಧಿಯಲ್ಲಿ ರೈತರಿಗೆ ನೊಟೀಸ್ ಕೊಡ್ತಿದ್ದೀರ ಅಂತ ರಾಜಕಾರಣ ಮಾಡ್ತಿದ್ದೀರ, ಅತಿ ಹೆಚ್ಚಿನ ನೊಟೀಸ್ ಕೊಟ್ಟಿದ್ದು ನಿಮ್ಮಅವಧಿಯಲ್ಲಿ,ಇದರ ಬಗ್ಗೆ ಯಾಕೆ ಮಾತನಾಡ್ತಿಲ್ಲ ಅಂತ ಸಚಿವ ಕೃಷ್ಣಬೈರೇಗೌಡ ಆಕ್ರೋಶ ಹೊರಹಾಕಿದ್ರು. ನಾವು ಇದ್ರಿಂದ ಹೊರಹೋಗಲ್ಲ, ಚರ್ಚೆಗೆ ಅವಕಾಶ ಕೊಡ್ತೇವೆ, ನಿಮಗೆ ಮೊದಲ ದಿನವೇ ಗಲಾಟೆ ಬೇಕಿದೆ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಿಮಗೆ ಚರ್ಚೆ ಬೇಕಿಲ್ಲ ಅಂತ ಅಸಮಾಧಾನ ಹೊರಹಾಕಿದ್ರು.
ಇನ್ನು ಕಲಾಪದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ ವಿಚಾರ ಚರ್ಚೆಗೆ ಬಂತು.ಮೀಸಲಾತಿ ನಮ್ಮಸಮುದಾಯದ ಹೋರಾಟಕ್ಕಿಳಿದಿದೆ. ಆದರೆ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲವೆಂದು ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಹೊರಹಾಕಿದ್ರು.ಇದಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರ ಕೊಟ್ರು.. ೫೦೦೦ ಟ್ರ್ಯಾಕ್ಟರ್ ಮೂಲಕ ಮುತ್ತಿಗೆಗೆ ಹಾಕೋಕೆ ತೀರ್ಮಾನಿಸಿದ್ರು.ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಲಿದೆ ಅನ್ನೋ ಕಾರಣಕ್ಕೆ ತಡೆಯಲಾಗಿದೆ.. ಆದ್ರೆ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೆ ಇದೆ,ಅವರ ಹೋರಾಟಕ್ಕೆ ನಾವು ಅಡ್ಡಿ ಮಾಡಲ್ಲ ಅಂತ ಹೇಳಿದ್ರು.ಈ ವೇಳೆ ಹಿಂದಿನ ಸರ್ಕಾರ ೨-ಎ ಮೀಸಲಾತಿ ಕೇಳಿದ್ದಕ್ಕೆ ೨-ಡಿ ಮೀಸಲಾತಿಯನ್ನ ಕೊಡ್ತು..
ಉಳಿತಾಯ ಮಾಡುವುದಾದರೂ ಹೇಗೆ ಅಂತೀರಾ? ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ – ಈ ಟಿಪ್ಸ್ ಫಾಲೋ ಮಾಡಿ
ಇದನ್ನಾದ್ರೂ ನಮಗೆ ಕೊಡಿ,ಒಬಿಸಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸು ಮಾಡಿ ಅಂತ ಯತ್ನಾಳ್ ಒತ್ತಾಯಿಸಿದ್ರು.ಇದಕ್ಕೆ ಉತ್ತರಿಸಿದ ಸಿಎಂ ವೀರಶೈವ ಲಿಂಗಾಯತರು ೩-ಬಿಯಲ್ಲಿ ಬರ್ತಾರೆ.ಇಂದಿರಾ ಸಹಾನಿಕೇಸ್ ನಲ್ಲಿ ಒಂದು ಕಮಿಷನ್ ಮಾಡಲಾಗಿದೆ.ಮೀಸಲಾತಿ ಬೇಕಾದವರು ಆಯೋಗಕ್ಕೆ ಅರ್ಜಿ ಹಾಕಬೇಕು. ಹಿಂದೆ ಇದ್ದ ಬಿಜೆಪಿ ಸರ್ಕಾರ ೨-ಎ ಮೀಸಲಾತಿಗೆ ಸೇರಿಸಲಿಲ್ಲ.ಮುಸಲ್ಮಾನರಿಗೆ ಕೊಟ್ಟ ೪% ಮೀಸಲಾತಿ ಕಿತ್ತು ನೀಡಿತ್ತು.ಇದು ಸುಪ್ರೀಂ ಕೋರ್ಟ್ ನಲ್ಲಿರೋದ್ರಿಂದ ಯಥಾಸ್ಥಿತಿ ಮುಂದುವರಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ರು. ಈ ವೇಳೆಯೂ ಕೆಲ ಕಾಲಸದನದಲ್ಲಿ ಗದ್ದಲಕ್ಕೆ ಕಾರಣವಾಯ್ತು..
ನ್ನು ಕಲಾಪ ಪ್ರಾರಂಭದಲ್ಲೇ ಇತ್ತೀಚೆಗೆ ಆಯ್ಕೆಯಾದ ಮೂವರು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ರು.ಸಂಡೂರು ಅನ್ನಪೂರ್ಣ,ಶಿಗ್ಗಾಂವಿಯ ಯಾಸಿರ್ ಪಠಾಣ್ ಹಾಗೂ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಗೆ ಸ್ಪೀಕರ್ ಖಾದರ್ ಪ್ರತಿಜ್ಙಾವಿದಿ ಭೋದಿಸಿದ್ರು.. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಯೋಗೇಶ್ವರ್ ಬಿಜೆಪಿ ಶಾಸಕರಾದ ಆರ್.ಅಶೋಕ್, ಅಶ್ವಥ್ ನಾರಾಯಣ್,ಬೆಲ್ಲದ್ ಸೇರಿ ಹಲವರ ಬಳಿ ತೆರಳಿ ಕೈ ಕುಲುಕಿದ್ರು.. ಇದು ಬೇರೆಯದೇ ಸಂದೇಶವನ್ನ ರವಾನಿಸ್ತು.
ಇನ್ನು ವಿಧಾನಸಭೆ ಆವರಣದಲ್ಲಿ ಅನುಭವ ಮಂಟಪ ಪೋಟೋ ಅನಾವರಣ ಬಗ್ಗೆ ಸದನದಲ್ಲಿ ಚರ್ಚೆಯಾಯ್ತು.ಒಟ್ನಲ್ಲಿ ಮೊದಲದಿನದ ಕಲಾಪದಲ್ಲಿ ವಕ್ಫ್ ವಿಚಾರದಲ್ಲಿ ಸ್ವಲ್ಪ ಗದ್ದಲ ಬಿಟ್ಟರೆ ಮತ್ತಿನ್ನೇನು ಆಗಲಿಲ್ಲ.. ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ,ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಡ್ಡಿ ಮಾಡಿದ ವಿಚಾರಗಳು ಪ್ರಸ್ತಾಪವಾದ್ವು.. ಅಲ್ಲಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ಕುಟುಕುವ ಪ್ರಯತ್ನಗಳು ನಡೆದ್ವು.