ಬೆಂಗಳೂರು: ಸಂಸತ್ತಿನಲ್ಲಿ ವಕ್ಫ್ ಮಂಡಳಿಯ ಕಾನೂನು ತಿದ್ದುಪಡಿ ವಿಚಾರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿದೆ, ಸಂಪೂರ್ಣ ಅಲ್ಪಸಂಖ್ಯಾತರ ವಿರುದ್ಧವಾಗಿದೆ. ಎನ್ ಡಿ ಎ ಸರ್ಕಾರ ಸಂಪೂರ್ಣ ಅಲ್ಪಸಂಖ್ಯಾತರ ವಿರುದ್ಧವಾಗಿದೆ. ಅವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದಾರೆ. ಅವರು ಜಾತ್ಯಾತೀತರಲ್ಲ, ಅವರು ಕೋಮುವಾದಿಗಳು, ಪ್ಯಾಸಿಸ್ಟ್ ಮನೋಭಾವದವರು ಅದಕ್ಕಾಗಿ ಈ ತಿದ್ದುಪಡಿ ತರ್ತಿದ್ದಾರೆ.
Flower Show: ಇಂದಿನಿಂದ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ: ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ, ಇದೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು, ಚೆಕ್ ಮೂಲಕ ಹಣ ಪಡೆದಿದ್ದರು. ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ, ಪ್ರಭಾವ ಬೀರಿಲ್ಲ. ಎಂದು ಹೇಳಿದರು.
ಪಾದ ಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಬಿಎಸ್ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.