ಕೊಪ್ಪಳ: ಮಗುವನ್ನು ಚಿವಟುವರು ಇವರೆ ತೊಟ್ಟಿಲನ್ನು ತೂಗುವುವುದು ಇವರೆ ಎಂದು ಮುಖ್ಯಮಂತ್ರಿಯವರ ಲೋಕಾಯುಕ್ತ ವಿಚಾರಣೆಯ ಕುರಿತು ಚಲುವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು. ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ
ಕೊಪ್ಪಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ಯಾವ ಹೇಳಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ನಿವೇಶನಗಳನ್ನು ಹಿಂದುರುಗಿಸಿದ್ದು ಯಾಕೆ? ಎಂದು ಪ್ರಶ್ನಿಸಿ ಅವರು ಸಂವಿಧಾನದಲ್ಲಿ ಎಲ್ಲರು ಬಗ್ಗಲೇ ಬೇಕು ಎಲ್ಲರು ಜಗ್ಗಲೇ ಬೇಕು ಎಂದು ಅವರು ಹೇಳಿದರು.
Waqf Board: ಏನಿದು ವಕ್ಫ್ ತಿದ್ದುಪಡಿ ಕಾಯ್ದೆ..? ರೈತರಿಗೆ ಹೇಗೆ ತೊಂದರೆಯಾಗುತ್ತದೆ.? ಇಲ್ಲಿದೆ ಸಂಪೂರ್ಣ ಮಾಹಿತಿ
ಮೊನ್ನೆ ನಾನು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದ ಟಿಪಿಯನ್ನು ನೋಡಿದೆ, ಅದರಲ್ಲಿ ಮುಖ್ಯಮತ್ರಿಯವರು ೭.೩೦ಕ್ಕೆ ಬೆಂಗಳೂರಿನಿಂದ ಹೊರಟು ೯.೦೦ಕ್ಕೆ ಮೈಸೂರು ತಲುಪುತ್ತಾರೆ,೧೦.೦೦ಕ್ಕೆ ಲೋಕಾಯುಕ್ತ ವಿಚಾರಣೆ ಪ್ರಾರಂಭವಾಗುತ್ತೆ ೧೨.೦೦ಕ್ಕೆ ಮೈಸೂರಿನಿಂದ ಹೋರಟು ಚುಣಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದು ಇತ್ತು, ಇದನ್ನು ನೋಡಿದರೆ ವಿಚಾರಣೆ ನಡೆಯುತ್ತಿರುವಾಗ ಅದು ಯವಾಗ ಮುಗಿಯುತ್ತೆ ಎಂದು ನಿಮಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದರು.
ವಕ್ಫ್ ಬೋರ್ಡ್ ವರು ಒಮ್ಮೆ ನೋಟೀಸ್ ನೀಡಿದರೆ ಕೋರ್ಟ್ಗೆ ಹೋಗಲು ಕೂಡ ಆಗುವುದಿಲ್ಲ, ಹಾಗೋಂದು ವೇಳೆ ನಾವು ಹೋಗುವುದಿದ್ದರೆ ನಾವು ಬೋರ್ಡ್ ನ ಮುಂದೆ ಹೋಗ ಬೇಕಾಗುತ್ತೆ ಎಂದರು. ಅದಕ್ಕೆ ಅವರು ನೊಟೀಸ್ ಕೊಟ್ಟು ದಾಖಲೆ ಇಲ್ಲದಿದ್ದರೆ, ಜಮೀನು ವಶಕ್ಕೆ ಪಡೆಯಲಾಗುತ್ತೆ ಎಂದು ಕಿಡಿಕಾರಿದರು, ನಾವು ಅವರು ಜಮೀನು ನಮ್ಮದು ಎಂದು ನೊಟೀಸ್ ಕೊಟ್ಟು ಅವರ ಮುಂದೆ ನಾವು ನ್ಯಾಯ ಕೇಳಲು ಆಗುತ್ತಾ ಎಂದರು.