ಬೆಳ್ಳಗೆ ಪಳಪಳನೆ ಹೊಳೆಯುತ್ತಿದ್ದ ನಿಮ್ಮ ಹಲ್ಲುಗಳು ಇದ್ದಕ್ಕಿದ್ದಂತೆ ಬಣ್ಣ ಬದಲಿಸಲು ಹಲವಾರು ಕಾರಣಗಳಿವೆ.. ದಿನನಿತ್ಯ ತಿನ್ನುವ ಆಹಾರ, ಹಣ್ಣುಗಳು, ಕುಡಿಯುವ ಪಾನೀಯಗಳು ಅಂದರೆ ಕಾಫಿ ಚಹಾ, ಹಣ್ಣಿನ ಜ್ಯೂಸ್ ಇತ್ಯಾದಿ
ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ: ಚಾರ್ಜ್ ಶೀಟ್ ಸಲ್ಲಿಸಿದ SIT
ಹಲ್ಲಿನ ಆರೋಗ್ಯಕ್ಕಾಗಿ ದಿನಕ್ಕೆರಡು ಬಾರಿ ಹಲ್ಲುಜ್ಜಬೇಕು. ನಿಮ್ಮ ಹಲ್ಲುಗಳನ್ನು ತುಂಬಾ ಗಟ್ಟಿಯಾಗಿ ಸ್ಕ್ರಬ್ ಮಾಡದೇ ನಿಧಾನವಾಗಿ ಹಲ್ಲುಜ್ಜುವುದು ಉತ್ತಮ.
ಏಕೆಂದರೆ ತುಂಬಾ ಜೋರಾಗಿ ಹಲ್ಲುಜ್ಜುವುದರಿಂದ ಹಲ್ಲಿನ ದಂತಕವಚ ಮತ್ತು ಒಸಡುಗಳಿಗೆ ಹಾನಿ ಉಂಟಾಗುತ್ತದೆ. ನಿಮ್ಮ ಹಲ್ಲುಗಳನ್ನು ಉಜ್ಜಿದ ನಂತರ, ಶೇಷವನ್ನು ತೆಗೆದುಹಾಕಲು ನಿಮ್ಮ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.
ಅಲ್ಲದೇ ಕೆಲವರು ಹಲ್ಲುಜ್ಜಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ದುರ್ಬಲ ಹಲ್ಲುಗಳಿಗೆ ಕಾರಣವಾಗಬಹುದು. ಆದ್ದರಿಂದ, ಕನಿಷ್ಠ 2 ರಿಂದ 5 ನಿಮಿಷಗಳ ಕಾಲ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಬೇಕು. ಸದ್ಯ ಪಾಚಿಗಟ್ಟಿದ ಹಳದಿ ಹಲ್ಲುಗಳನ್ನು ಹೋಗಲಾಡಿಸಲು ಮತ್ತು ಶುದ್ಧ ಹಾಗೂ ಬಿಳುಪಾದ ಹಲ್ಲುಗಳನ್ನು ಪಡೆಯಲು ನಾವು ಏನು ಮಾಡಬೇಕೆಂದು ವಿವರವಾಗಿ ತಿಳಿಯೋಣ ಬನ್ನಿ.
ಬೇವಿನ ಎಲೆ: ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿವೆ. ಹಾಗಾಗಿ ಇದನ್ನು ಜಗಿಯುವುದರಿಂದ ಹಲ್ಲಿನ ಮೇಲಿನ ಹಳದಿ ಬಣ್ಣ ಹೋಗಲಾಡಿಸಿ ಹಲ್ಲುಗಳನ್ನು ಬಿಳುಪಾಗಿಸುತ್ತದೆ.
ಅರಿಶಿನ: ಪ್ರತಿನಿತ್ಯ ಅರಿಶಿನದಿಂದ ಹಲ್ಲುಜ್ಜುವುದರಿಂದ ಹಲ್ಲುಗಳಲ್ಲಿರುವ ಹಳದಿ ಬಣ್ಣ ಹೋಗಲಾಡಿಸಿ ಹಲ್ಲುಗಳು ಬಿಳಿಯಾಗುತ್ತವೆ. ಏಕೆಂದರೆ ಅರಿಶಿನದಲ್ಲಿರುವ ಕರ್ಕ್ಯುಮಿನ್ ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ. ಹಲ್ಲುಗಳನ್ನು ಬಿಳುಪುಗೊಳಿಸಲು ಪೇಸ್ಟ್ನಲ್ಲಿ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ ಮತ್ತು ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ.
ಉಪ್ಪು: ಉಪ್ಪು ಹಳದಿ ಬಣ್ಣವನ್ನು ತೆಗೆದುಹಾಕುವ ಮೂಲಕ ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪೇಸ್ಟ್ಗೆ ಸ್ವಲ್ಪ ಉಪ್ಪು ಸೇರಿಸಿ ಹಲ್ಲುಜ್ಜಿದರೆ ಹಳದಿ ಬಣ್ಣ ಮಾಯವಾಗಿ ಹಲ್ಲಿ ಬಿಳಿಯಾಗುತ್ತದೆ.
ಸುಮಾರು 1 ರಿಂದ 2 ನಿಮಿಷಗಳ ಕಾಲ ನಿಮ್ಮ ಹಲ್ಲುಗಳನ್ನು ಉಪ್ಪಿನೊಂದಿಗೆ ಬ್ರಷ್ ಮಾಡಿ. ಹೀಗೆ ಪ್ರತಿನಿತ್ಯ ಮಾಡಿದರೆ ಹಲ್ಲುಗಳು ಫಳ-ಫಳ ಅಂತ ಬಿಳಿ ಬಣ್ಣದಲ್ಲಿ ಹೊಳೆಯುತ್ತದೆ.
ತುಳಸಿ: ಹಲ್ಲಿನ ಹಳದಿ ಬಣ್ಣವನ್ನು ತೊಡೆದುಹಾಕಲು ತುಳಸಿ ಸಹಾಯಕವಾಗಿದೆ. ಇದಕ್ಕಾಗಿ ಕೆಲವು ತುಳಸಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಬೇಕು. ನಂತರ ಈ ಪುಡಿಯಿಂದ ಹಲ್ಲನ್ನು ಉಜ್ಜಬೇಕು.
ಮಾವಿನ ಎಲೆಗಳು: ಮಾಗಿದ ಮಾವಿನ ಎಲೆಗಳನ್ನು ಪೇಸ್ಟ್ ಆಗಿ ರುಬ್ಬಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ಟೂತ್ ಬ್ರಶ್ ಮೇಲೆ ಹಚ್ಚಿ ಹಲ್ಲುಜ್ಜುವುದರಿಂದ ನಿಮ್ಮ ಹಲ್ಲಿನ ಮೇಲಿನ ಹಳದಿ ಕಲೆಗಳನ್ನು ಹೋಗಲಾಡಿಸಿ ಹಲ್ಲುಗಳು ಬಿಳಿಯಾಗುತ್ತವೆ.