ಗಾಢವಾದ ಹಸಿರು ಬಣ್ಣದಿಂದ ಕೂಡಿರುವ ಹಾಗಲಕಾಯಿ ರುಚಿಯಲ್ಲಿ ಕಡು ಕಹಿ. ಅದೇ ಆರೋಗ್ಯದ ವಿಷಯದಲ್ಲಿ ನೋಡಿದರೆ ಅಮೃತಕ್ಕೆ ಸಮಾನ. ಸಮೃದ್ಧವಾಗ ಜೀವಸತ್ವ, ಖನಿಜ, ಮೆಗ್ನಿಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ವಿಟಮಿನ್ಗಳು ಇರುತ್ತವೆ. ಬ್ರೊಕೊಲಿಯಲ್ಲಿ ಇರುವ ಬೀಟಾ ಕ್ಯರೋಟಿನ್ ಹಾಗಲಕಾಯಿಯಲ್ಲಿ ಎರಡು ಪಟ್ಟು ಹೆಚ್ಚಾಗಿರುತ್ತದೆ.
ಹಾಗಲಕಾಯಿ ತಿನ್ನುವುದು ನಮ್ಮ ದೇಹದ ಎಲ್ಲಾ ಅಂಗಗಳಿಗೂ ಒಳ್ಳೆಯದು. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲನ್ನು ಉದ್ದ ಮತ್ತು ಹೊಳೆಯುವಂತೆ ಮಾಡುತ್ತದೆ
ಹಾಗಲಕಾಯಿಯಲ್ಲಿರುವ ಜೀವಕೋಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಎಂದು 2016ರ ಅಧ್ಯಯನವು ಸಾಬೀತುಪಡಿಸಿದೆ. ಚರ್ಮರೋಗ ತಜ್ಞರು ಕೂಡ ಇದನ್ನು ದೃಢಪಡಿಸಿದ್ದಾರೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ.
ಇದು ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ನೆತ್ತಿಯ ಮೇಲಿನ ಕೂದಲನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದರಲ್ಲಿರುವ ವಿಟಮಿನ್ಗಳು ಕೂದಲನ್ನು ಸುಂದರವಾಗಿ ಮತ್ತು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಇದು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲು ಸೀಳುವುದನ್ನು ತಡೆಯುತ್ತದೆ.
ಹಾಗಲಕಾಯಿ ರಸ ಕುಡಿಯಬಹುದು ಎಂದು ಭಾವಿಸುವವರು ಚಿಟಿಕೆ ಉಪ್ಪು ಸೇರಿಸಿ ಪ್ರತಿದಿನ ಕುಡಿಯಬೇಕು. ಪ್ರತಿದಿನ ಇದನ್ನು ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ಗೋಚರವಾಗುತ್ತದೆ. ಒಂದು ವಾರದಲ್ಲಿ ನಿಮ್ಮ ಕೂದಲು ಬೆಳೆಯಲು ಆರಂಭವಾಗುತ್ತದೆ.
ಹಾಗಲಕಾಯಿ ರಸದಿಂದ ಹೇರ್ ಮಾಸ್ಕ್ ಕೂಡ ತಯಾರಿಸಬಹುದು. ಇದನ್ನು ರುಬ್ಬಿ, ರಸ ತೆಗೆಯಿರಿ ಮತ್ತು ಅದನ್ನು ನೇರವಾಗಿ ನಿಮ್ಮ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಡಿ ಮತ್ತು ಸಾಮಾನ್ಯ ಶಾಂಪೂ ಬಳಸಿ ತಲೆಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಹಾಗಲಕಾಯಿ ತೆಗೆದುಕೊಂಡು ಕೂದಲಿಗೆ ಚೆನ್ನಾಗಿ ಮೂರು ನಿಮಿಷಗಳ ಕಾಲ ಉಜ್ಜಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹಾಗಲಕಾಯಿ ರಸಕ್ಕೆ ಮೊಸರು ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ಹೇರ್ ಮಾಸ್ಕ್ ಆಗಿ ಬಳಸಿ. ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ನೀರಿನಿಂದ ತೊಳೆಯಿರಿ
ಹಾಗಲಕಾಯಿ ಎಣ್ಣೆ
ಹಾಗಲಕಾಯಿಯಿಂದ ಎಣ್ಣೆಯನ್ನು ತಯಾರಿಸಬಹುದು. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಹಾಗಲಕಾಯಿ ತುಂಡುಗಳನ್ನು ಹಾಕಿ ಮತ್ತು ಕೆಲವು ದಿನಗಳವರೆಗೆ ಇರಿಸಿ, ನಂತರ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಹಾಗಲಕಾಯಿಯನ್ನು ನಿಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದು ಉತ್ತಮ