ಬೆಂಗಳೂರು: ಕಾಫಿ ಪ್ರಿಯರೇ ನಿಮಗೆ ಕಾಫಿ ಕುಡಿಯುವುದಷ್ಟೇ ಗೊತ್ತಾ ಇಲ್ವಾ ಅದು ಹೇಗೆ ಉತ್ಪತ್ತಿಯಾಗುತ್ತೆ ಎಲ್ಲಿಂದ ಬರುತ್ತೆ ಹಾಗೆ ಅದರ ಬಗ್ಗೆ ಅಧ್ಯಯನ ನಡೆಸಲು ಇಲ್ಲಿದೆ ಒಂದು ಸದಾವಕಾಶ ಇನ್ಮುಂದೆ ಬೆಂಗಳೂರಲ್ಲೇ ಶುರುವಾಗುತ್ತಿದೆ ಕಾಫಿ ತಯಾರಿಸುವ ಕೋರ್ಸ್ ನಿಮಗೂ ಆಸಕ್ತಿ ಇದ್ರೆ ಬಂದು ಕಲಿಯಬಹುದು.
ಭಾರತೀಯ ಕಾಫಿ ಮಂಡಳಿ ಇಂಥದ್ದೊಂದು ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ. ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಾಫಿ’ಯಲ್ಲಿ ಕಾಫಿ ಕುರಿತ ಕಿರು ಅವಧಿ ಕೋರ್ಸ್ಗಳನ್ನು ಆರಂಭಿಸಲು ಕಾಫಿ ಮಂಡಳಿ ಉದ್ದೇಶಿಸಿದೆ.
‘ಕಾಫಿ ಕ್ವಾಲಿಟಿ ಮ್ಯಾನೇಜ್ಮೆಂಟ್ನಲ್ಲಿ ನಾವು ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸುತ್ತಿದ್ದೇವೆ. ಇದಕ್ಕೆ ಬಹಳ ಬೇಡಿಕೆ ಇದೆ. ಬೆಂಗಳೂರಿನ ಕಾಫಿ ಕ್ವಾಲಿಟಿ ಇನ್ಸ್ಟಿಟ್ಯೂಟ್ನ್ಲಿ ಈ ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಚಿಕ್ಕಮಗಳೂರಿನಲ್ಲಿರುವ ಸೆಂಟ್ರಲ್ ಕಾಫಿ ರಿಸರ್ಚ್ ಇನ್ಸ್ಟಿಟ್ಯೂಟ್ಗೆ (ಸಿಸಿಅರ್ಐ) ಮೂರು ತಿಂಗಳ ಭೇಟಿ ನೀಡಿ ಕಲಿಯಬಹುದು
ಈಗ ಕಾಫಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆಗೆ ಮಂಡಳಿ ಪ್ರಸ್ತಾಪ ಮಾಡಿದೆ. ವಿಶೇಷ ಕಾಫಿ ಕೇಂದ್ರ ಹಾಗೂ ಕಾಫಿ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ಕಾಫಿ ಮಂಡಳಿಯ ಎಕ್ಸ್ಪೆಂಡಿಚರ್ ಫೈನಾನ್ಸ್ ಕಮಿಟಿ ಪ್ರಸ್ತಾಪಿಸಿದೆ
ಬೆಂಗಳೂರಿನಲ್ಲಿ ಕಾಫಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆ ಮಾಡುವುದಾಗಿ ಭಾರತೀಯ ಕಾಫಿ ಮಂಡಳಿ ಪಸ್ತಾವನೆ ಸಲ್ಲಿಸಿದೆ. ಕಾಫಿ ಮಂಡಳಿ ಬೆಂಗಳೂರಿನಲ್ಲಿ ಕಾಫಿ ಕ್ವಾಲಿಟಿ ಮ್ಯಾನೇಜ್ಮೆಂಟ್ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ. ಪಿಜಿ ಡಿಪ್ಲೊಮಾ ಕೋರ್ಸ್ಗೆ ಸದ್ಯ 15 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದೆ.