ಇಂದಿನ ದಿನಗಳಲ್ಲಿ ನಾವೆಲ್ಲರೂ ಗಮನಿಸಿರುವ ಹಾಗೆ, ಹೆಚ್ಚಿನವರು ಕೊಲೆಸ್ಟ್ರಾಲ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅನುಸರಿಸುತ್ತಿರುವ ಜೀವನ ಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿ ನೇರ ಕಾರಣ ಎಂದು ಹೇಳಬಹುದು.
ನಿಮಗೆ ಗೊತ್ತಿರಲಿ ದೇಹದ ರಕ್ತದಲ್ಲಿ ಒಮ್ಮೆ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಹಲವಾರು ಆರೋಗ್ಯ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಶುರುವಾ ಗುತ್ತವೆ. ಪ್ರಮುಖವಾಗಿ ಹೃದಯದ ಆರೋಗ್ಯಕ್ಕೆ, ಸರಾಗವಾಗಿ ರಕ್ತ ಸಂಚಾರವನ್ನು ಪೂರೈಸಲು ಆಗದೇ, ಹೃದಯಘಾತದಂತಹ ಸಮಸ್ಯೆಗಳು ಎದು ರಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆರೋಗ್ಯ ತಜ್ಞರು ಕೂಡ ಎಚ್ಚರಿಸುತ್ತಾರೆ!
ಈ ಬಗ್ಗೆ ಆರೋಗ್ಯ ತಜ್ಞರು ಕೂಡ ಹೇಳುವ ಪ್ರಕಾರ, ಇಂದಿನ ದಿನಗಳಲ್ಲಿ ಸಣ್ಣ-ವಯಸ್ಸಿನವರಿಗೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ, ಬಹಳ ಬೇಗನೆ ಹೃದಯಾಘಾತದಿಂದ ತಮ್ಮ ಪ್ರಾಣ ಕಳೆದು ಕೊತ್ತಿದ್ದಾರೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ.
ಹೀಗಾಗಿ ಯಾವುದೇ ಕಾರಣಕ್ಕೂ ಕೂಡ, ಕೆಟ್ಟಕೊಲೆ ಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದ ಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯ ಕಾರಿ ಜೀವನ ಶೈಲಿಯನ್ನು ಅನುಸರಿಸಬೇಕು.
ಮೊದಲಿಗೆ ಇಂತಹ ಆಹಾರಗಳಿಂದ ದೂರವಿರಿ
ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಿ, ಉದಾಹರಣೆಗೆ ಕೆಂಪು ಮಾಂಸಗಳು, ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್ನಂತಹ ಆಹಾರಗಳು, ಎಣ್ಣೆಯಾಂಶ ಇರುವ ಆಹಾರಗಳು, ಚೀಸ್, ಕೆನೆ ಭರಿತ ಹಾಲು, ಸಿಹಿ ತಿಂಡಿಗಳು ಹಾಗೂ ತಂಪು ಪಾನೀಯಗಳಿಂದ ಮೊದಲು ದೂರವಿರಿ ಯಾಕೆಂದ್ರೆ, ಇವುಗಳು, ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚು ಮಾಡುವುದು ಮಾತ್ರದಲ್ಲಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗು ವಂತೆ ಮಾಡುವುದು.
ಬೆಳ್ಳುಳ್ಳಿ ಹಾಗೂ ಶುಂಠಿ
ಶುಂಠಿ-ಬೆಳ್ಳುಳ್ಳಿ ಜೋಡಿಯಿಂದ ನಮ್ಮ ದೇಹಕ್ಕೆ ಉಪ ಯೋಗ ವಾಗುವಂತಹ ಹಲವಾರು ಪ್ರಯೋಜನ ಗಳು ಸಿಗುತ್ತವೆ.
ಪ್ರಮುಖವಾಗಿ, ಈ ಎರಡು ಜೋಡಿಯಲ್ಲಿ ನಮ್ಮ ದೇಹದ ರಕ್ತದಲ್ಲಿ ಬೆರೆತಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹಾಗೂ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಶಕ್ತಿ ಇದೆ.
ಇದರ ಜೊತೆಗೆ ಹೃದಯದ ಆರೋಗ್ಯಕ್ಕೆ, ಸರಾಗವಾಗಿ ರಕ್ತ ಸಂಚಾರವನ್ನು ಪೂರೈಸಲು ನೆರವಾಗುತ್ತದೆ. ಇದ ರಿಂದ ಹೃದಯದ ಆರೋಗ್ಯ ಚೆನ್ನಾಗಿ ಇರುವುದರ ಜೊತೆಗೆ, ರಕ್ತದೊತ್ತಡದಂತಹ ಸಮಸ್ಯೆಗಳು ಕೂಡ ದೂರವಾಗುತ್ತದೆ
ಹೀಗೆಮಾಡಿ:
ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಸ್ವಲ್ಪ ಶುಂಠಿ ಮತ್ತು ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ ಬಾಯಲ್ಲಿ ಇಟ್ಟುಕೊಂಡು, ಇದರ ರಸವನ್ನು ನಿಧಾನಕ್ಕೆ ಹೀರುತ್ತಾ ಬಂದರೆ, ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆಯಾಗುತ್ತದೆ
ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು
ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಗುವಷ್ಟು ತ್ರಿಫಲ ಚೂರ್ಣವನ್ನು ಚೆನ್ನಾಗಿ ಕದಡಿ, ಕುಡಿಯುವ ಅಭ್ಯಾಸ ಇಟ್ಟುಕೊಂಡರೆ, ದೇಹದಿಂದ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗಿ, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಬ್ಬಿನ ಅಂಶಗಳು ಅಂಶಗಳು ಕ್ರಮೇಣವಾಗಿ ದೂರ ವಾಗುತ್ತದೆ.
ನೆನೆಸಿಟ್ಟ ಬಾದಾಮಿ ಬೀಜಗಳು ಹಾಗೂ ಖರ್ಜೂರಗಳು
ಪ್ರತಿದಿನ ರಾತ್ರಿಯ ಸಮಯದಲ್ಲಿ ಐದಾರು ಬಾದಾಮಿ ಬೀಜ ಗಳನ್ನು ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಸೇವನೆ ಮಾಡಬೇಕು.
ಇಲ್ಲಾಂದ್ರೆ ಪ್ರತಿದಿನ ಎರಡು-ಮೂರು ಒಣ ಅಥವಾ ಹಸಿ ಖರ್ಜೂರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳ ಪ್ರಮಾಣ ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ.
ಓಟ್ಸ್ ಸೇವನೆ ಮಾಡಿ
ಬೆಳಗಿನ ಸಮಯದಲ್ಲಿ ಹಾಲಿನೊಂದಿಗೆ ಓಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದಕ್ಕೆ ಪ್ರಮುಖ ಕಾರಣ ಓಟ್ಸ್ ನಲ್ಲಿ ಕರಗುವ ನಾರಿನಾಂಶ ಹೆಚ್ಚಾಗಿರುವ ಕಾರಣ ನೈಸರ್ಗಿಕವಾದ ರೀತಿ ಯಲ್ಲಿ, ದೇಹದ ರಕ್ತದಲ್ಲಿ ಶೇಖರಣೆಗೊಂಡಿರುವ ಕೆಟ್ಟ ಕೊಲೆ ಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಹೃದಯದ ಆರೋ ಗ್ಯಕ್ಕೂ ಕೂಡ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳು ತ್ತದೆ.
ಬೆಣ್ಣೆಹಣ್ಣು
ಬೆಣ್ಣೆಹಣ್ಣು ಕೂಡ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೆಣ್ಣೆಹಣ್ಣು ಸೇವಿಸಿ. ಇದನ್ನು ಸಲಾಡ್ ರೀತಿ ಮಾಡಿ ಸೇವಿಸಬಹುದು.
ಉಪ್ಪು ಕಡಿಮೆ ಸೇವಿಸಿ
ಅತಿಯಾದ ಉಪ್ಪು ಸೇವನೆ ಒಳ್ಳೆಯದಲ್ಲ, ಉಪ್ಪನ್ನು ಮಿತಿಯಲ್ಲಿ ಸೇವಿಸಿ. ಸೋಡಿಯಂ ಕಡಿಮೆ ಸೇವಿಸಿದಷ್ಟೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿ.
ಮದ್ಯವನ್ನು ಮಿತಿಯಲ್ಲಿ ಸೇವಿಸಿ
ಪುರುಷರು ಹಾಗೂ ಮಹಿಳೆಯರು ಮದ್ಯವನ್ನು ಮಿತಿಯಲ್ಲಿ ಸೇವಿಸಿ. ಇದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು, ಆರೋಗ್ಯಕ್ಕೂ ಒಳ್ಳೆಯದು.