ಡಯಾಬಿಟಿಸ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಹಾಗೂ ನಿರ್ವಹಿಸಲು ರಕ್ತದಲ್ಲಿನ ಶುಗರ್ ಲೆವಲ್ ತುಂಬಾ ಮುಖ್ಯವಾಗಿವೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ರಕ್ತದಲ್ಲಿನ ಶುಗರ್ ಅತ್ಯಗತ್ಯವಾಗಿದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿದ್ದರೆ ಹಾಗೂ ತುಂಬಾ ಕಡಿಮೆಯಿದ್ದರೆ, ಅನಿಯಂತ್ರಿತವಾಗಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಮಧುಮೆಹ ಅಥವಾ ಬ್ಲಡ್ ಶುಗರ್ ಇದ್ದಾಗ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೇವೆ, ರಾತ್ರಿ ಊಟಕ್ಕೆ ಏನನ್ನು ಸೇವಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅನುಸರಿಸಬೇಕಾದ ಮುಖ್ಯ ಹೆಜ್ಜೆಯೇ ಇದು. ಈ ಪ್ರಕಾರ ರಾತ್ರಿ ಊಟಕ್ಕೆ ಇದೊಂದು ತರಕಾರಿಯನ್ನು ಸೇವಿಸಿದರೆ ಬೆಳಗ್ಗೆ ಆಗುವ ವೇಳೆಗೆ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ ಎಂದು ಹೇಳಲಾಗುತ್ತದೆ. ಪುಟ್ಟದಾಗಿ ಕಾಣುವ ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶದಂತಹ ಗುಣಗಳು ಹೇರಳವಾಗಿ ಕಂಡುಬರುತ್ತವೆ.
ತೊಂಡೆಕಾಯಿಯಲ್ಲಿ ಕಡಿಮೆ ಮಟ್ಟದ ಗ್ಲೈಸೆಮಿಕ್ ಇಂಡೆಕ್ಸ್ ಇರುತ್ತದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೊಂಡೆಕಾಯಿಯಲ್ಲಿ ಫೈಬರ್ ಅಂಶ ಕೂಡಾ ಹೇರಳವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಮೂಲಕ ಕೂಡಾ ತೊಂಡೆಕಾಯಿ ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಲು ಸಹಾಯ ಮಾಡುತ್ತದೆ.
ಈ ತರಕಾರಿಯನ್ನು ಹಾಗೆಯೇ ತಿನ್ನಬೇಕು, ಹೀಗೆಯೇ ತಿನ್ನಬೇಕು ಎಂದೇನಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ಈ ತರಕಾರಿಯನ್ನು ಸೇವಿಸಬಹುದು.