ಪ್ರತಿದಿನ ನಾವು ಆಹಾರಕ್ಕೆ ಬಳಸುವ ಕೆಲ ಪದಾರ್ಥಗಳು ತೂಕ ಇಳಿಕೆಗೆ ಸಹಾಯಕವಾಗಿದೆ. ಅದರಲ್ಲೂ ಏಲಕ್ಕಿಯಿಂದ ನಿಮ್ಮ ಸೊಂಟದ ಬೊಜ್ಜನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಸಾಮಾನ್ಯವಾಗಿ ಏಲಕ್ಕಿಯನ್ನು ಎಲ್ಲರ ಮನೆಯಲ್ಲೂ ಆಹಾರಕ್ಕೆ ಬಳಸಲಾಗುತ್ತದೆ. ಇದು ತೂಕ ಇಳಿಕೆ ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿ ಸಹಾಯಕವಾಗಿದೆ.
ಸ್ಲಿಮ್ ಹೊಟ್ಟೆಯನ್ನು ಪಡೆಯಲು ಬಯಸುತ್ತಿರುವವರು ತಮ್ಮ ಆಹಾರದಲ್ಲಿ ಪ್ರತಿದಿನ ಏಲಕ್ಕಿಯನ್ನು ಸೇರಿಸಿಕೊಳ್ಳಬಹುದು. ಆದರೆ ಇದನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಲು ಮತ್ತು ತೂಕ ಇಳಿಸಿಕೊಳ್ಳಲು ಏಲಕ್ಕಿಯನ್ನು ಹೇಗೆ ಬಳಸಬೇಕು ಎಂಬುವುದರ ಬಗ್ಗೆ ಒಂದಷ್ಟು ಮಾಹಿತಿ ನಾವಿಂದು ತಿಳಿಯೋಣ.
ತೂಕ ಇಳಿಕೆಗೆ ಏಲಕ್ಕಿ ಚಹಾ ಕುಡಿಯುವುದು ಅತ್ಯುತ್ತಮ ಮಾರ್ಗವಾಗಿದೆ. ಇದು ಚಯಾಪಚಯವನ್ನು ಸುಧಾರಿಸುವುದಲ್ಲದೇ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಹುತೇಕ ಮಂದಿಗೆ ಇದು ಸಹಾಯಕವಾಗಿದೆ. ಇದಕ್ಕಾಗಿ ಏಲಕ್ಕಿಯನ್ನು 5 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ, ನಂತರ ಸೋಸಿ ಕುಡಿಯಿರಿ. ಬೊಜ್ಜನ್ನು ಕರಗಿಸುವ ಈ ಪಾನೀಯವನ್ನು ಪ್ರತಿದಿನ ಕುಡಿದರೆ ಹೊಟ್ಟೆಯ ಕೊಬ್ಬು ಕರಗುತ್ತದೆ.
ಏಲಕ್ಕಿ ಮತ್ತು ನಿಂಬೆ ನೀರು: ಏಲಕ್ಕಿ ಮತ್ತು ನಿಂಬೆ ನೀರಿನ ಮಿಶ್ರಣವನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಇದನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆಯೂ ಹೆಚ್ಚುತ್ತದೆ. ಜೊತೆಗೆ ನಿಮ್ಮ ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ. ಏಲಕ್ಕಿಯನ್ನು ರುಬ್ಬಿ, ನೀರಿನಲ್ಲಿ ಕುದಿಸಿ, ಅದಕ್ಕೆ ನಿಂಬೆ ರಸವನ್ನು ಹಿಂಡಿ ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ಕುಡಿಯುವುದರಿಂದ ಉತ್ತಮ ಫಲಿತಾಂಶವನ್ನು ಕಾಣುವಿರಿ.
ಏಲಕ್ಕಿ ಮತ್ತು ಜೇನುತುಪ್ಪ: ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ, ಏಲಕ್ಕಿ ಮತ್ತು ಜೇನುತುಪ್ಪವು ನಿಮಗೆ ಸಹಾಯಕವಾಗಿದೆ. ಏಲಕ್ಕಿ-ಜೇನುತುಪ್ಪ ಮಿಶ್ರಿತ ಪಾನೀಯವು ಹಸಿವನ್ನು ತಡೆಯುವುದು ಮಾತ್ರವಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದಕ್ಕಾಗಿ ಒಂದು ಚಮಚ ಜೇನುತುಪ್ಪದಲ್ಲಿ ಚಿಟಿಕೆ ಏಲಕ್ಕಿ ಪುಡಿಯನ್ನು ಪುಡಿ ಮಾಡಿ ಮಿಶ್ರಣ ಮಾಡಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸೊಂಟದ ಬೊಜ್ಜು ಕರಗಲು ಪ್ರಾರಂಭಿಸುತ್ತದೆ.
ಶುಂಠಿ ಮತ್ತು ಏಲಕ್ಕಿ ಚಹಾ: ಶುಂಠಿ ಮತ್ತು ಏಲಕ್ಕಿ ಇವೆರಡರ ಮಿಶ್ರಣವು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಚಹಾಕ್ಕೆ ಜಜ್ಜಿದ ಶುಂಠಿ ಮತ್ತು ಏಲಕ್ಕಿ ಸೇರಿಸಿ, ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಇದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದನ್ನು ಪ್ರತಿದಿನ ಸೇವಿಸಿದರೆ ಹೊಟ್ಟೆಯ ಕೊಬ್ಬು ಕ್ರಮೇಣ ಕಡಿಮೆಯಾಗುತ್ತದೆ.
ಏಲಕ್ಕಿಯನ್ನು ಪ್ರತಿದಿನ ನಾವು ಅನೇಕ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಹೊಟ್ಟೆಯ ಕೊಬ್ಬನ್ನು ಕರಗಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ