ಬೊಜ್ಜಿನಿಂದ ಹೃದಯ, ಯಕೃತ್ತು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಆರೋಗ್ಯಕರ ಆಹಾರ ಮತ್ತು ಸರಿಯಾದ ಪೋಷಣೆಯನ್ನು ಕಾಪಾಡಿಕೊಳ್ಳುವುದು ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಲು ಸಹಕಾರಿ ಆಗಿದೆ. ಅದರಲ್ಲೂ ಈ ಆಯುರ್ವೇದ ಗಿಡಮೂಲಿಕೆಗಳು ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಲು ಪ್ರಯೋಜನಕಾರಿ ಆಗಿದೆ.
Pejavara Swamiji: ದೇವಸ್ಥಾನದ ಆಸ್ತಿಗಳನ್ನು ದೇವರ ಹೆಸರಿನಲ್ಲಿ ನೋಂದಣಿ ಮಾಡಬೇಕು: ಪೇಜಾವರ ಶ್ರೀಗಳು
ಆಯುರ್ವೇದದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುವ ಹಲವಾರು ಗಿಡಮೂಲಿಕೆಗಳಿವೆ. ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ, ಬೊಜ್ಜು ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗಾದ್ರೆ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಲು ಸಹಾಯಕವಾಗಿರುವ ಗಿಡ ಮೂಲಿಕೆಗಳು ಯಾವುವು ಎಂಬುವುದರ ಬಗ್ಗೆ ತಿಳಿಯೋಣ ಬನ್ನಿ.
ತ್ರಿಫಲ: ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ತ್ರಿಫಲ ತುಂಬಾ ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸುತ್ತದೆ. ತ್ರಿಫಲ ತೂಕ ಇಳಿಕೆಯಷ್ಟೇ ಅಲ್ಲ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ತ್ರಿಫಲ ಹೊಟ್ಟೆಯ ಕರಗಿಸುವಲ್ಲಿ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಮಲಬದ್ಧತೆ, ಬೊಜ್ಜು, ಅಜೀರ್ಣ, ವಾಯು, ಕಾಮಾಲೆ, ರಕ್ತಹೀನತೆ, ಅಸ್ತಮಾ, ಗಂಟಲು ಸೋಂಕು, ಕೂದಲಿನ ಸಮಸ್ಯೆ, ಹಲ್ಲುನೋವು ಇತ್ಯಾದಿಗಳಿಗೆ ಈ ಪುಡಿಯೇ ಉತ್ತಮ ಔಷಧವಾಗಿದೆ.
ದಾಲ್ಚಿನ್ನಿ: ದಾಲ್ಚಿನ್ನಿ ನಮ್ಮ ಮನೆಯ ಅಡುಗೆಮನೆಯಲ್ಲಿ ಯಾವಾಗಲೂ ಇರುವ ಒಂದು ಪದಾರ್ಥವಾಗಿದೆ. ಇದು ಆಹಾರಕ್ಕೆ ಪರಿಮಳ ಮತ್ತು ರುಚಿಯನ್ನು ನೀಡುವುದಷ್ಟೇ ಅಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಚಯಾಪಚಯವನ್ನು ಸುಧಾರಿಸುವವರೆಗೆ ದಾಲ್ಚಿನ್ನಿ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ, ಈ ಆರೊಮ್ಯಾಟಿಕ್ ಮಸಾಲೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಶುಂಠಿ: ತೂಕ ಇಳಿಕೆಗೆ ಶುಂಠಿ ತುಂಬಾ ಉಪಯುಕ್ತವಾಗಿದೆ. ಶುಂಠಿಯು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಮೂಲಕ ಹಸಿವನ್ನು ನಿಯಂತ್ರಿಸುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ ನಂತರ ಬಿಸಿ ನೀರು ಕುಡಿದರೆ ಬೊಜ್ಜು ಕರಗುತ್ತದೆ.
ಅರಿಶಿನ: ಅರಿಶಿನವು ತೂಕ ನಷ್ಟ, ಚಯಾಪಚಯವನ್ನು ಉತ್ತೇಜಿಸುವುದು, ಹಸಿವನ್ನು ನಿಗ್ರಹಿಸುವುದು ಮತ್ತು ಕೊಬ್ಬನ್ನು ಸುಡುವುದನ್ನು ಉತ್ತೇಜಿಸುವುದು ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಸಂಯುಕ್ತವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಚಯಾಪಚಯವನ್ನು ಸುಧಾರಿಸುತ್ತದೆ, ಹಸಿವನ್ನು ನಿಗ್ರಹಿಸುತ್ತದೆ ಮತ್ತು ದೇಹದ ತೂಕವನ್ನು ಇಳಿಸುತ್ತದೆ.
ಮೆಂತ್ಯ: ಮೆಂತ್ಯವು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯವು ನೀರಿನಲ್ಲಿ ಕರಗುವ ಗ್ಯಾಲಕ್ಟೋಮನ್ನನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ನಿಮ್ಮ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿಡುತ್ತದೆ. ಇದಲ್ಲದೇ, ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.