ಯಾರಿಗೆ ತಾನೇ ತಾವು ಸದಾ ಯಂಗ್ ಆಗಿ ಕಾಣಬೇಕೆಂದು ಅನ್ನಿಸುವುದಿಲ್ಲ ಹೇಳಿ? ಎಲ್ಲರೂ ಬಯಸುವುದು ತಮಗೆ ಎಷ್ಟೇ ವಯಸ್ಸಾದರೂ ಸಹ ಸದಾ ಯಂಗ್ ಆಗಿ ಕಾಣಬೇಕು ಅಂತ. ವಯಸ್ಸಾಗಿದೆ ಅಂತ ಮೊದಲಿಗೆ ನೋಡಿದ ತಕ್ಷಣವೇ ತಿಳಿಯುವುದೇ ನಮ್ಮ ಮುಖದ ಚರ್ಮದಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ.
Kalaburgi: ಸಿಎಂ ಏಟು, ವಿಜಯೇಂದ್ರ ಎದಿರೇಟು: ಜೋರಾಗಿದೆ ಕೈ ಕಮಲದ ಮಾತಿನ ಫೈಟು!
ಜನರು ಆರೋಗ್ಯಕ್ಕಿಂತ ಹೆಚ್ಚು ಯಂಗ್ ಆಗಿ ಕಾಣಲು ಪರಿಹಾರಗಳನ್ನು ಹುಡುಕುತ್ತಿರುತ್ತಾರೆ. ವಯಸ್ಸಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಈ ಪ್ರಕ್ರಿಯೆಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದಕ್ಕೆ ಹಾಕಬಹುದು.
ಮುಖಕ್ಕೆ ಆಂಟಿ ಏಜಿಂಗ್ ಕ್ರೀಂಗಳು, ಮಾಸ್ಕ್ಗಳು ಮತ್ತು ಸೀರಮ್ಗಳನ್ನು ಹಚ್ಚುವುದು ಒಳ್ಳೆಯ ಪರಿಹಾರ ಎಂದು ಎನಿಸಿದರೂ ಕೂಡ ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು ಎಂಬುದನ್ನು ಮರೆಯಬೇಡಿ.
* ಪೋಷಕಾಂಶ ಹೆಚ್ಚಾಗಿರುವಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ನೆರಿಗೆಗಳು ಕಡಿಮೆಯಾಗಿ ಮೈಬಣ್ಣ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಹಂಚಿ ಕೊಂಡಿದ್ದಾರೆ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ದೇಹದ ಜೀವಕೋಶಗಳು ಆರೋಗ್ಯವಾಗಿರುವುದರಿಂದ ನೈಸರ್ಗಿಕವಾಗಿ ಚರ್ಮಕ್ಕೆ ಹೊಳಪು ಬರುತ್ತದೆ.
* ಹಾಗಾಗಿ ದೈನಂದಿನ ಆಹಾರದಲ್ಲಿ ಸೇರಿಸಬೇಕಾದ ಆಹಾರಗಳನ್ನು ಪಟ್ಟಿಮಾಡಿ ಅದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಸಸ್ಯ ಆಹಾರವು ಪಾಲಿಫಿನಾಲ್ಗಳಿಂದ ಸಮೃದ್ಧವಾಗಿದ್ದು, ಇವು ಆ್ಯಂಟಿ ಏಜಿಂಗ್ ಗುಣಗಳನ್ನು ಹೊಂದಿವೆ.
ಹಾಗೇ ಇವುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಹೇರಳವಾಗಿರುವ ಕಾರಣ ಅವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುವ ಮೂಲಕ ಸಹಕಾರಿ ಯಾಗಿದೆ.
ಎಲೆಕೋಸು ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಈ ತರಕಾರಿಯನ್ನು ಬಳಸುವುದು ಬಹಳ ಕಡಿಮೆ. ಆದರೆ ಎಲೆಕೋಸಿನಲ್ಲಿ ಇಂಡೋಲ್-3-ಕಾರ್ಬಿನಾಲ್ ಸಮೃದ್ಧವಾಗಿದೆ, ಇದು ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಇದು ಹೆಚ್ಚು ಆ್ಯಂಟಿ ಏಜಿಂಗ್ ಗುಣಗಳನ್ನು ಹೊಂದಿದೆ. ಎಲೆಕೋಸಿನಲ್ಲಿರುವ ವಿಟಮಿನ್ ಎ, ವಿಟಮಿನ್ ಡಿ ಚರ್ಮದ ಕೋಶಗಳು ಹಾನಿಗೊಳಗಾಗುವುದನ್ನು ತಡೆಯುತ್ತದೆ ಮತ್ತು ಹಾನಿಕಾರಕ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ಕ್ಯಾರೆಟ್:- ಇವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಬಹಳ ಪ್ರಯೋಜನಕಾ ರಿಯಾಗಿದೆ. ಕ್ಯಾರೆಟ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೇ ಕ್ಯಾರೆಟ್ನಲ್ಲಿ ಬೀಟಾ-ಕ್ಯಾರೋಟಿನ್ ಹೇರಳವಾಗಿದ್ದು, ಇದನ್ನು ದೇಹವು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ.
ದ್ರಾಕ್ಷಿ ಹಣ್ಣು ತಿನ್ನವಾಗ ಕೆಲವೊಮ್ಮೆ ಹುಳಿ ಎನಿಸಬಹುದು. ಅಂದಮಾತ್ರಕ್ಕೆ ದ್ರಾಕ್ಷಿಹಣ್ಣನ್ನು ತಿನ್ನುವುದನ್ನೇ ಬಿಟ್ಟು ಬಿಡಬೇಡಿ. ಯಾಕೆಂದರೆ ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿವೆ.
ಇದು ನಿಮ್ಮ ದೇಹದಲ್ಲಿನ ಜೀವಕೋಶಗಳಿಗೆ ಹಾನಿ ಮಾಡುವಂತಹ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ದ್ರಾಕ್ಷಿ ಚರ್ಮದಲ್ಲಿ ಕಂಡು ಬರುವಂತಹ ರೆಸ್ವೆರಾಟ್ರಾಲ್, ಉರಿಯೂತವನ್ನು ತೊಡೆದು ಹಾಕುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮಕ್ಕೆ ಹಾನಿಯಾ ಗದಂತೆ ರಕ್ಷಣೆ ನೀಡುತ್ತದೆ.
ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಅಡುಗೆಯ ಸ್ವಾದವನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಇದನ್ನು ಕೂದಲಿನ ಆರೈಕೆಯಲ್ಲಿ ಬಳಸುತ್ತಾರೆ. ಅಲ್ಲದೇ ಇದು ಚರ್ಮದ ಆರೋಗ್ಯಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ.
ಇದು ರಕ್ತವನ್ನು ತೆಳುವಾಗಿಸಲು, ಮತ್ತು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದರಲ್ಲಿ ಕ್ವೆರ್ಸೆಟಿನ್ ಅಂಶ ಸಮೃದ್ಧವಾಗಿದ್ದು, ಇದು ಉತ್ತಮವಾದ ಉರಿಯೂತದ ಏಜೆಂಟ್ ಆಗಿದೆ. ಬೆಳ್ಳುಳ್ಳಿಯಂತೆಯೇ, ಈರುಳ್ಳಿಯು ಕೂಡ ಚರ್ಮಕ್ಕೆ ಆಂಟಿ ಏಜಿಂಗ್ ಪ್ರಯೋಜನಗಳನ್ನು ನೀಡುತ್ತದೆ.
ಟೊಮೆಟೊ ಎಲ್ಲರೂ ಹೆಚ್ಚು ಬಳಸುವಂತಹ ತರಕಾರಿ. ಯಾಕೆಂದರೆ ಟೊಮೆಟೊ ಇಲ್ಲದೇ ಹೆಚ್ಚಿನ ಅಡುಗೆ ಮಾಡಲು ಸಾಧ್ಯವಿಲ್ಲ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
ಅಷ್ಟೇ ಅಲ್ಲದೇ ಈ ತರಕಾರಿಯಲ್ಲಿ ಲೈಕೋಪೀನ್ ಹೇರಳವಾಗಿದೆ. ಇದು ಮೆದುಳಿನ ಆರೋಗ್ಯವನ್ನು ಕಾಪಾಡುವಂತಹ ಉತ್ಕರ್ಷಣ ನಿರೋಧಕವಾಗಿದೆ. ಟೊಮೆಟೊ ತಿನ್ನುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು ಜೊತೆಗೆ ಇದು ಆ್ಯಂಟಿ ಏಜಿಂಗ್ ಗುಣಗಳನ್ನು ಹೊಂದಿರುವುದರಿಂದ ಇದು ಚರ್ಮದಲ್ಲಿ ನೆರಿಗೆ ಮೂಡುವುದನ್ನು ಸಹ ಕಡಿಮೆ ಮಾಡುತ್ತದೆ.
ಸೊಪ್ಪು ಎಂದಾಕ್ಷಣ ಮುಖ ತಿರುಗಿಸುವವರೇ ಹೆಚ್ಚು. ಆದರೆ ಪಾಲಕ್ ಸೊಪ್ಪಿನಲ್ಲಿರುವ ಲ್ಯೂಟಿನ್ ಆ್ಯಂಟಿ ಏಜಿಂಗ್ ಗುಣಗಳನ್ನು ಹೊಂದಿದೆ ಮತ್ತು ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಪಾಲಕ್ ಸೊಪ್ಪಿನಲ್ಲಿ ಫೋಲಿಕ್ ಆಮ್ಲವು ಸಮೃದ್ಧವಾಗಿದೆ, ಇದು ಡಿಎನ್ಎ ದುರಸ್ತಿ ಕಾರ್ಯವನ್ನು ಮಾಡುತ್ತದೆ, ಇದರಿಂದ ಚರ್ಮದಲ್ಲಿ ವಯಸ್ಸಾಗುವ ಪ್ರಕ್ರಿಯೆ ನಿಧಾನವಾಗುತ್ತದೆ.
ಈ ಎಲ್ಲಾ ಮಾಹಿತಿಯನ್ನು ತಿಳಿದನಂತರ ಸಸ್ಯಾಹಾರಿ, ಮಾಂಸಾಹಾರಿ, ಹೆಚ್ಚಿನ ಪ್ರೋಟೀನ್ ಮುಂತಾದವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೂ ಕೂಡ , ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಪ್ರತಿದಿನ ಊಟದಲ್ಲಿ ತರಕಾರಿಗಳನ್ನು ತಿನ್ನುವುದು ಅತ್ಯಗತ್ಯ ಎಂಬುದು ತಿಳಿಯುತ್ತದೆ.