ಈ ಬಾರಿಯ ದೀಪಾವಳಿ ಹಬ್ಬಕ್ಕೆ ಮನೆಮಂದಿಯೆಲ್ಲಾ ಟ್ರಡಿಷನಲ್ ಆಗಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದರೆ ಈಗಾಗಲೇ ವಿವಿಧ ವಿನ್ಯಾಸದ ಸಾಂಪ್ರದಾಯಿಕ ಲುಕ್ ನೀಡುವ ಉಡುಗೆಗಳು ಲಭ್ಯವಿದೆ. ನಿಮಗೆ ಒಪ್ಪುವ ಬಣ್ಣದ ಉಡುಗೆಯನ್ನೇ ಖರೀದಿ ಹಬ್ಬದ ದಿನ ಸುಂದರವಾಗಿ ಕಾಣಿಸಿಕೊಳ್ಳಬಹುದು.
ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು: ಎನ್.ಚಲುವರಾಯಸ್ವಾಮಿ
ಹಬ್ಬಕ್ಕೆ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆಗಳು
ಸೀರೆ : ಭಾರತೀಯ ಹೆಣ್ಣು ಮಕ್ಕಳ ಫೇವರಿಟ್ ಎಂದರೆ ಅದುವೇ ಸೀರೆ. ಯಾವುದೇ ಹಬ್ಬ ಹರಿದಿನಗಳಿರಲಿ, ಶುಭ ಕಾರ್ಯಗಳಿರಲಿ ಮೊದಲ ಆಯ್ಕೆಯೇ ಸೀರೆಯಾಗಿರುತ್ತದೆ. ದೀಪಾವಳಿ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಲು ಬಯಸಿದರೆ ರೇಷ್ಮೆ ಸೀರೆ ಸೇರಿದಂತೆ ವಿವಿಧ ವಿನ್ಯಾಸದ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಒಪ್ಪುವ ಆಭರಣಗಳನ್ನು ಧರಿಸಿದರೆ ಹಬ್ಬಕ್ಕೆ ಪರ್ಫೆಕ್ಟ್ ಲುಕ್ ಸಿಕ್ಕಂತಾಗುತ್ತದೆ.
ಅರ್ನಾಕಲಿ : ಹಬ್ಬಕ್ಕೆ ಸಿಂಪಲ್ ಆಗಿ ಕಾಣಬೇಕೆನ್ನುವವರು ಅರ್ನಾಕಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಾ ರೀತಿಯ ಮೈಕಟ್ಟು ಹೊಂದಿರುವವರಿಗೆ ಒಪ್ಪುವಂತಹ ಉಡುಪಾಗಿದ್ದು, ಈ ರೀತಿಯ ಉಡುಗೆಗಳು ಸಾಂಪ್ರದಾಯಿಕ ನೋಟವನ್ನು ತಂದುಕೊಡುತ್ತದೆ.
ಚೂಡಿದಾರ್ : ಎಲ್ಲರಿಗೂ ಸೂಟ್ ಆಗುವಂತಹ ಉಡುಗೆಯಲ್ಲಿ ಚೂಡಿದಾರ್ ಕೂಡ ಒಂದು. ಗ್ರ್ಯಾಂಡ್ ಲುಕ್ ಇರುವ ಚೂಡಿದಾರ್ ಹಬ್ಬಕ್ಕೆ ಹೇಳಿ ಮಾಡಿಸಿದ್ದಾಗಿದೆ. ಈಗಾಗಲೇ ವಿವಿಧ ವಿನ್ಯಾಸದ ಚೂಡಿದಾರ್ ಗಳು ಲಭ್ಯವಿದ್ದು ನಿಮಗೆ ಒಪ್ಪುವಂತಹ ಬಣ್ಣದ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳಿ.
ಲೆಹಂಗಾ ಚೋಲಿ : ಎಲ್ಲಾ ಹೆಣ್ಣು ಮಕ್ಕಳು ಇಷ್ಟಪಟ್ಟು ಖರೀದಿಸುವ ಉಡುಗೆಯಲ್ಲಿ ಲೆಹಂಗಾ ಚೋಲಿ ಕೂಡ ಒಂದು. ಎಂಬ್ರಾಡಿಯರಿ, ಗ್ಲಾಸ್ ವರ್ಕ್ ಇರುವ ಲೆಹಂಗಾ ಚೋಲಿಗಳು ಲಭ್ಯವಿದ್ದು, ಈ ಬಾರಿಯ ಈ ದೀಪಾವಳಿ ಹಬ್ಬಕ್ಕೆ ಈ ರೀತಿಯ ಸಾಂಪ್ರದಾಯಿಕ ಲುಕ್ ನೀಡುವ ಉಡುಗೆಯನ್ನು ಧರಿಸಿ ಮಿಂಚಬಹುದು.
ಹಬ್ಬಕ್ಕೆ ಪುರುಷರು ಹಾಗೂ ಮಕ್ಕಳು ಈ ರೀತಿ ಉಡುಗೆ ಧರಿಸಿ
ಕುರ್ತಾ ಸಲ್ವಾರ್ : ಹಬ್ಬಗಳು ಶುಭ ಸಮಾರಂಭಗಳಿಗೆ ಹೇಳಿ ಮಾಡಿಸಿದ ಉಡುಗೆಯೆಂದರೆ ಕುರ್ತಾ ಸಲ್ವಾರ್. ಈ ಬಾರಿಯ ದೀಪಾವಳಿಗೆ ಹಬ್ಬಕ್ಕೆ ಈ ಉಡುಗೆಯನ್ನು ಧರಿಸಬಹುದು. ಈ ಉಡುಗೆಯಲ್ಲಿ ಸಾಂಪ್ರದಾಯಿಕವಾಗಿ ಮಾತ್ರವಲ್ಲದೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು.
ಖಾದಿ ಜಾಕೆಟ್ : ಇತ್ತೀಚೆಗಿನ ದಿನಗಳಲ್ಲಿ ತುಂಬು ತೋಳಿನ ಶರ್ಟ್ ಮೇಲೆ ಜಾಕೆಟ್ ಹಾಕುವುದು ಟ್ರೆಂಡ್ ಆಗಿದೆ. ಹೀಗಾಗಿ ನೀವು ಕೂಡ ಬೆಳಕಿನ ಹಬ್ಬಕ್ಕೆ ಶರ್ಟ್ ಮೇಲೆ ಖಾದಿ ಜಾಕೆಟ್ ಧರಿಸಿ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳಬಹುದು.
ಶೇರ್ವಾನಿ : ಮಕ್ಕಳಿಂದ ಹಿಡಿದು ಯುವಕರು ಸೇರಿದಂತೆ ಎಲ್ಲಾ ವಯೋಮಾನದವರು ಇಷ್ಟಪಡುವ ಉಡುಗೆಯಲ್ಲಿ ಶೇರ್ವಾನಿ ಕೂಡ ಒಂದಾಗಿದೆ. ಇದು ಧರಿಸಲು ಕಂಪರ್ಟ್ ಆಗಿದ್ದು, ಹಬ್ಬಕ್ಕೆ ಬೆಸ್ಟ್ ಉಡುಗೆ ಎನ್ನಬಹುದು.
ಧೋತಿ ಪ್ಯಾಂಟ್ : ಇತ್ತೀಚೆಗಿನ ದಿನಗಳಲ್ಲಿ ಧೋತಿ ಪ್ಯಾಂಟ್ ಹಾಗೂ ಗಿಡ್ಡನೆಯ ಕುರ್ತಾ ಧರಿಸುವುದನ್ನು ಎಲ್ಲರೂ ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಲು ಈ ರೀತಿಯ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಗಂಡು ಮಕ್ಕಳಿಗೆ ಧೋತಿ ಕುರ್ತಾ, ಶೇರ್ವಾನಿ, ಪಂಚೆ ಶರ್ಟ್ ಸೆಟ್ ಸಾಂಪ್ರದಾಯಿಕ ಲುಕ್ ನೀಡುವ ಉಡುಗೆಯನ್ನು ಧರಿಸಬಹುದು.