ಇಂದು ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇವುಗಳನ್ನು ಬಳಸಲು ನಾವು ಪ್ರತಿದಿನ ಚಾರ್ಜ್ ಮಾಡಬೇಕಾಗುತ್ತದೆ. ಅದ್ರಲ್ಲೂ ಹೊಸ ಹೊಸ ಸ್ಮಾರ್ಟ್ಫೋನ್ಗಳು ವಿವಿಧ ಬ್ರಾಂಡ್ಗಳೊಂದಿಗೆ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಯಾವುದೇ ಮೊಬೈಲ್ ಖರೀದಿಸುವಾಗ ಹೆಚ್ಚಿನ ಗಮನವು ಅದರ ಬ್ಯಾಟರಿ ಸಾಮರ್ಥ್ಯದ ಮೇಲೆ ಇರುತ್ತದೆ.
ಮೊಬೈಲ್ ಎಷ್ಟೇ ಚೆನ್ನಾಗಿದ್ದರೂ ಚಾರ್ಜ್ ಮಾಡದಿದ್ದರೆ ಕೆಲಸ ಮಾಡುವುದಿಲ್ಲ. ಸ್ಮಾರ್ಟ್ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು ಕಂಪನಿಗಳು ಅದರೊಂದಿಗೆ ಫಾಸ್ಟ್ ಚಾರ್ಜಿಂಗ್ ಚಾರ್ಜರ್ಗಳನ್ನು ಸಹ ನೀಡುತ್ತಿವೆ. ಕೆಲವು ಕಂಪನಿಗಳು 50 ವ್ಯಾಟ್ ಚಾರ್ಜರ್ಗಳನ್ನು, ಕೆಲವು 64 ವ್ಯಾಟ್ ಚಾರ್ಜರ್ಗಳನ್ನು ತಯಾರಿಸುತ್ತವೆ.
ಇದನ್ನು ಬಳಸಿಕೊಂಡು ಮೊಬೈಲ್ ಅನ್ನು 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಅಥವಾ 10 ನಿಮಿಷಗಳಲ್ಲಿ ಅರ್ಧ ಚಾರ್ಜ್ ಮಾಡಬಹುದು ಎಂದು ಕಂಪನಿಗಳು ಹೇಳುತ್ತವೆ. ಆದರೆ ನಿಮ್ಮ ಬಳಿ ವೇಗದ ಚಾರ್ಜರ್ ಇಲ್ಲದಿದ್ದರೂ, ಕೆಲವು ಟ್ರಿಕ್ಸ್ಗಳಿಂದ ನಿಮ್ಮ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದು.
15 ನಿಮಿಷಗಳಲ್ಲಿ ಪೂರ್ತಿ ಚಾರ್ಜ್:
ಫಾಸ್ಟ್ ಚಾರ್ಜರ್ ಬಳಸದೇ ಕೇವಲ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಮ್ಮ ಫೋನ್ ಬ್ಯಾಟರಿ ಚಾರ್ಜ್ ಮಾಡಲು ಹಲವಾರು ಮಾರ್ಗಗಳಿವೆ ಅದಕ್ಕಾಗಿ, ಸ್ಮಾರ್ಟ್ಫೋನ್ ಬಳಕೆದಾರರು ಮೊಬೈಲ್ ಚಾರ್ಜ್ ಮಾಡುವಾಗ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ. ಹೌದು, ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿದರೆ ಸ್ಮಾರ್ಟ್ಪೋನ್ ಬಹುಬೇಗ ಚಾರ್ಜ್ ಆಗುತ್ತದೆ ಎಂಬುದು ಈಗಾಗಲೇ ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರಿಗಲೆಲ್ಲಾ ತಿಳಿದಿದೆ. ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡುವುದರಿಂದ ಶೇ. 30 ಪರ್ಸೆಂಟ್ ಅಧಿಕ ವೇಗದಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ.
ಏರೋಪ್ಲೇನ್ ಮೋಡ್:
ಮೊಬೈಲ್ ಅಧಿಸೂಚನೆ ಬಾರ್ನಲ್ಲಿ ಕಾಣಿಸುವ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ ಚಾರ್ಜಿಂಗ್ ಚಾರ್ಜ್ ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ಚಾರ್ಜಿಂಗ್ ವೇಗ ಹೆಚ್ಚಾಗಲಿದೆ. ಏರೋಪ್ಲೇನ್ ಮೋಡ್ ಆನ್ ಮಾಡಿದ್ದಾಗ ನೆಟ್ವರ್ಕ್ ವ್ಯವಸ್ಥೆ ಕಟ್ ಆಗಿರುವುದರಿಂದ ಫೋನ್ ಬಹುಬೇಗ ಚಾರ್ಜ್ ಆಗುತ್ತದೆ. ಏರೋಪ್ಲೇ ಮೋಡ್ ಆನ್ ಆಫ್ ಮಾಡದಿದ್ದರೂ ಪರವಾಗಿಲ್ಲ.
ಆದರೆ, ಯಾವುದೇ ಕಾರಣಕ್ಕೂ ಸಹ ಚಾರ್ಜಿಂಗ್ ವೇಳೆ ಬ್ರೌಸಿಂಗ್ ಮಾಡಲೇಬೇಡಿ. ಏಕೆಂದರೆ ಬ್ಯಾಟರಿ ಚಾರ್ಜ್ ಆಗುತ್ತಿರುವ ಸಮಯದಲ್ಲಿ ಇಂಟರ್ನೆಟ್ ಬಳಕೆ ಮಾಡಿದರೆ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ. ಜೊತೆಗೆ ಲ್ಯಾಪ್ಟಾಪ್ನಲ್ಲಿ ಚಾರ್ಜ್ ಬೇಡುವುದು ಬೇಡ. ಏಕೆಂದರೆ, ಲ್ಯಾಪ್ಟಾಪ್ ಮೊಬೈಲ್ಗೆ ಬೇಕಾದಷ್ಟು ಪ್ರಮಾಣದಲ್ಲಿ ಶಕ್ತಿಯನ್ನು ಬಿಡುವುದಿಲ್ಲ.
ಈ ಚಾರ್ಜರ್ ಬಳಕೆ ಮಾಡಿ:
ಚಾರ್ಜಿಂಗ್ ಕೇಬಲ್ ಮತ್ತು ಸ್ಮಾರ್ಟ್ಪೋನ್ ಬ್ಯಾಟರಿಗೂ ತುಂಬ ಪ್ರಮುಖವಾದುದು. ಕಳಪೆ ಕೇಬಲ್ ಬಳಸಿ ಚಾರ್ಜ್ ಮಾಡಲು ಹೊರಟರೆ ಸರಿಯಾಗಿ ಚಾರ್ಜ್ ಆಗದಿರುವುದು, ಅತಿಯಾಗಿ ಬಿಸಿಯಾಗುವುದು, ಕೆಲವೊಮ್ಮೆ ಬೆಂಕಿ ಕಾಣಿಸಿಕೊಳ್ಳುವುದು, ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಇನ್ನು ಕಂಪೆನಿಯಿಂದಲೇ ಬಂದಿರುವ ಚಾರ್ಜರ್ ಸ್ಮಾರ್ಟ್ಫೋನ್ಗಳಿಗೆ ಅತ್ಯುತ್ತಮ ಚಾರ್ಜರ್ ಆದರೂ ಅದು ಕೂಡ ಕಲವು ದ್ವಂದ್ವಗಳನ್ನು ಉಂಟು ಮಾಡುತ್ತಿದೆ. ಹಾಗಾಗಿಯೇ, ಕಂಪೆನಿ ಚಾರ್ಜರ್ಗಳಿಗಿಂತಲೂ ಹೆಚ್ಚು ನಿಖರವಾದ ಹಾಗೂ ಇನ್ನು ಹೆಚ್ಚಿನ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್ ಚಾರ್ಜಿಂಗ್ ಕೇಬಲ್ಗಳು ಬರುತ್ತಿವೆ. ಅದನ್ನು ಉಪಯೋಗಿಸಿ.
ಯಾವಾಗ ಚಾರ್ಜ್ ಮಾಡಬೇಕು?:
ಸ್ಮಾರ್ಟ್ಫೋನ್ ಅನ್ನು ಇದೇ ಟೈಮಿನಲ್ಲಿ ಚಾರ್ಜ್ ಮಾಡಬೇಕೆಂದು ಯಾವುದೇ ರೂಲ್ಸ್ ಇಲ್ಲ. ಆದರೆ ಬ್ಯಾಟರಿ ಸಾಧ್ಯವಾದಷ್ಟು ಶೇ.50% ಟು ಶೇ.100% ಅಡುವಿನ ಅಂತರದಲ್ಲಿರಲಿ. ಅಂದರೇ 50 ಪರ್ಸೆಂಟ್ಗಿಂತ ಕಡಿಮೆಯಾದಾಗ ಚಾರ್ಜ್ ಮಾಡಬೇಕು ಮತ್ತು ಚಾರ್ಜಿಂಗ್ ಪೂರ್ಣ 100 ಪರ್ಸೆಂಟ್ ತಲುಪುವುದಕ್ಕೆ ಬಿಡಬಾರದು. 90ರ ಗಡಿ ದಾಟಿದಾಗ ಅನ್ಪ್ಲಗ್ ಮಾಡುವುದು ಒಳಿತು. ಇದು ಬ್ಯಾಟರಿಗೆ ದಕ್ಕೆ ಎನಿಸುವುದಿಲ್ಲ.
ಸ್ಮಾರ್ಟ್ಫೋನ್ಗಳ ಬ್ಯಾಟರಿ ಖಾಲಿಯಾಗುವುದು ಬಳಕೆದಾರರ ಬಳಕೆಯ ಮೇಲೆ ಅವಲಂಭಿತವಾಗಿದ್ದು, ಆದರೆ ನಿರಂತರ ಇಂಟರ್ನೆಟ್ ಆಧಾರಿತ ಆ್ಯಪ್ಗಳ ಬಳಕೆ ಮತ್ತು ಗೇಮ್ಸ್ ಆಡುವುದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಾಗಿ ನುಂಗುತ್ತದೆ. ಇದರಿಂದಾಗಿ ಪದೇ ಪದೇ ಚಾರ್ಜ್ ಹಾಕಬೇಕಾಗುತ್ತದೆ. ಕೇಲವರಂತು ಪವರ್ಬ್ಯಾಂಕ್ ಮೋರೆ ಹೋಗುತ್ತಾರೆ. ಚಾರ್ಜ್ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸುವುದು ಉತ್ತಮ.