ಆಪಲ್ (Apple) ಕಂಪನಿ ಬಹು ನಿರೀಕ್ಷಿತ ಐಫೋನ್ 16 ಸೀರಿಸ್ (iPhone) ಫೋನ್ಗಳು ಬಿಡುಗಡೆಯಾಗಿದೆ. ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 4 ಹೊಸ ಐಫೋನ್ಗಳನ್ನು ವಿಶ್ವಕ್ಕೆ ಪರಿಚಯಿಸಿದೆ..
ಭಾರತದಲ್ಲಿ ಸೆ.13 ಸಂಜೆ 5:30ರಿಂದ ಐಫೋನ್ ಪ್ರಿ ಆರ್ಡರ್ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಶುರುವಾಗಲಿದೆ.
ಭಾರತ
ಐಫೋನ್ 16 – 79,900 ರೂ.
ಐಫೋನ್ 16 ಪ್ಲಸ್ – 89,900 ರೂ.
ಐಫೋನ್ 16 ಪ್ರೋ – 1,19,900 ರೂ.
ಐಫೋನ್ 16 ಪ್ರೋ ಮ್ಯಾಕ್ಸ್ -1,44,900 ರೂ. (256 ಜಿಬಿ ಸ್ಟೋರೇಜ್)
ಐಫೋನ್ 16 – 799 ಡಾಲರ್(67,090 ರೂ.)
ಐಫೋನ್ 16 ಪ್ಲಸ್ – 899 ಡಾಲರ್
ಐಫೋನ್ 16 ಪ್ರೋ – 999 ಡಾಲರ್
ಐಫೋನ್ 16 ಪ್ರೋ ಮ್ಯಾಕ್ಸ್ – 1,199 ಡಾಲರ್ (256 ಜಿಬಿ ಸ್ಟೋರೇಜ್)
ಯುಎಇ
ಐಫೋನ್ 16 – 3,399 ದಿರ್ಹಮ್(77,705 ರೂ)
ಐಫೋನ್ 16 ಪ್ಲಸ್ – 3,799 ದಿರ್ಹಮ್
ಐಫೋನ್ 16 ಪ್ರೋ – 4,299 ದಿರ್ಹಮ್
ಐಫೋನ್ 16 ಪ್ರೋ ಮ್ಯಾಕ್ಸ್ – 5,099 ದಿರ್ಹಮ್ (256 ಜಿಬಿ ಸ್ಟೋರೇಜ್)
ಚೀನಾ
ಐಫೋನ್ 16 – 5,999 ಯುವಾನ್ (70,703 ರೂ.)
ಐಫೋನ್ 16 ಪ್ಲಸ್ – 6,999 ಯುವಾನ್
ಐಫೋನ್ 16 ಪ್ರೋ – 7,99 ಯುವಾನ್
ಐಫೋನ್ 16 ಪ್ರೋ ಮ್ಯಾಕ್ಸ್ – 9,999 ಯುವಾನ್ (256 ಜಿಬಿ ಸ್ಟೋರೇಜ್)
ಭಾರತದಲ್ಲಿ ಐಫೋನ್ ಬೆಲೆ ಜಾಸ್ತಿ ಯಾಕೆ?
ಭಾರತದಲ್ಲಿ ಐಫೋನ್ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಭರಿಸಲು ಕಂಪನಿಗಳು ದರವನ್ನು ಏರಿಕೆ ಮಾಡಿವೆ. ಫೋನ್ಗಳ ಮೇಲೆ ಶೇ.18 ಜಿಎಸ್ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ.
ಅಮೆರಿಕ ಮತ್ತು ಯುಎಇಗೆ ಹೋಲಿಸಿದರೆ ಭಾರತದಲ್ಲಿ ಐಫೋನ್ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.
ಆಪಲ್ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್ ದರಗಳು ಇಳಿಕೆಯಾದರೂ ಅಷ್ಟೊಂದು ದರ ಇಳಿಕೆಯಾಗುವುದಿಲ್ಲ.
ಡಾಲರ್ ಬೆಲೆ ಏರಿಕೆಯಾದಂತೆ ಇಲ್ಲೂ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣದಿಂದ ಭಾರತದಲ್ಲೂ ಐಫೋನ್ ದರ ಏರುತ್ತದೆ.
ಯುಎಇಯಲ್ಲಿ ಆಮದು ಸುಂಕ ಮತ್ತು ತೆರಿಗೆ ಕಡಿಮೆ ಇರುವುದರಿಂದ ದುಬೈನಲ್ಲಿ ಐಫೋನ್ ದರ ಭಾರತಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದೆ.