ಆ್ಯಪಲ್ ತನ್ನ ಗ್ರಾಹಕರಿಗಾಗಿ ನೂತನ ಮಾದರಿಯಲ್ಲಿ ಐಫೋನ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಗ್ರಾಹಕರ ಸದಾಭಿರುಚಿಯನ್ನು ಗಮನಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಆ್ಯಂಡ್ರಾಯ್ಡ್ಗೆ ಹೋಲಿಸಿದರೆ ಐಫೋನ್ ಖರೀದಿಸುವವರ ಸಂಖ್ಯೆಯೇ ಬೇರೆಯೇ ಇದೆ. ಇನ್ನು ಹಲವರು ಐಫೋನ್ ಖರೀದಿಸಲು ಪ್ಲಾನ್ ಹಾಕಿಕೊಂಡಿರುತ್ತಾರೆ. ಆದರೆ ಅದರ ಬೆಲೆ ಇಳಿಕೆಗಾಗಿ ಕಾಯುತ್ತಿರುತ್ತಾರೆ. ಇದೀಗ ಅಂತವರಿಗೆ ಖರೀದಿಸುವ ಸಮಯ ಬಂದಿದೆ. ಕಡಿಮೆ ಬೆಲೆಗೆ ಐಫೋನ್ 15 ಖರೀದಿಸಬಹುದಾಗಿದೆ.
post office schemes: ಪೋಸ್ಟ್ ಆಫೀಸ್ʼನಲ್ಲಿ ಉತ್ತಮ ಬಡ್ಡಿದರ ಸಿಗುವ ಸ್ಕೀಂಗಳು ಇಲ್ಲಿವೆ!
ಜನಪ್ರಿಯ ಇ-ಕಾಮರ್ಸ್ ಮಳಿಗೆಯಾದ ಅಮೆಜಾನ್ ಆ್ಯಪಲ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಐಫೋನ್ 15 ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 79,900 ರೂಪಾಯಿ ಮುಖ ಬೆಲೆಯ ಐಫೋನ್ ಮೇಲೆ ಶೇ.11 ರಷ್ಟು ರಿಯಾಯಿತಿ ನೀಡಿದೆ. ಹಾಗಾಗಿ 70,999 ರೂಪಾಯಿಗೆ ಸಿಗುತ್ತಿದೆ.
ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಫೋನನ್ನು ಎಕ್ಸ್ಚೇಂಜ್ ಮಾಡುವ ಮೂಲಕ ಐಫೋನ್ 15 ಖರೀದಿಸಬಹುದಾಗಿದೆ. ಒಂದು ವೇಳೆ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ 44,925 ರೂಪಾಯಿವರೆಗೂ ಉಳಿಸಬಹುದಾಗಿದೆ. ಅಂದರೆ ಗ್ರಾಹಕರು 26.074 ರೂಪಾಯಿಗೆ ಐಫೋನ್ 15 ಖರೀದಿಸಬಹುದಾಗಿದೆ.
ಇದಲ್ಲದೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು 5,924 ರೂಪಾಯಿವರೆಗಿನ ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ. ಹೀಗಾಗಿ ಐಫೋನ್ 15ನನ್ನು 20,150ಗೆ ಖರೀದಿಸಬಹುದಾಗಿದೆ.
ಹಳೆಯ ಫೋನನ್ನು ಎಕ್ಸ್ಚೇಂಜ್ ಮಾಡುವ ಮುನ್ನ ಕೆಲವೊಂದು ವಿಚಾರಗಳು ಗ್ರಾಹಕರು ಗಮನದಲ್ಲಿರಬೇಕಿದೆ. ಎಕ್ಸ್ಚೇಂಜ್ ವೇಳೆ ಫೋನ್ ಕಾರ್ಯ ನಿರ್ವಹಿಸುತ್ತಿರಬೇಕು, ಐಎಮ್ಇಐ ಸಂಖ್ಯೆಯು ಹೊಂದಾಣಿಕೆಯಾಗಬೇಕು. ಸ್ಕ್ರೀನ್ ಲಾಕ್, ಐಕ್ಲೌಡ್ ಕೆಲಸ ಮಾಡುವಂತಿರಬೇಕು. ಫೋನ್ ಮೇಲ್ಭಾಗ ಯಾವುದೇ ಹಾನಿಯಾಗಿರಬಾರದು