ಬೆಂಗಳೂರು: ತಿಂಗಳ ವೇತನ ಪಡೆಯೋರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಇಪಿಎಫ್ ಖಾತೆಗೆ ಸೂಕ್ತ ಮೊಬೈಲ್ ಸಂಖ್ಯೆ ನೀಡೋದು ಅಗತ್ಯ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ. ಇದು ನಿಮ್ಮ ಸಂಬಳದಿಂದ ಸ್ವಯಂ ಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎನ್ನುವುದು ಈ ಯೋಜನೆಯ ಬಹು ದೊಡ್ಡ ಪ್ಲಸ್ ಪಾಯಿಂಟ್.
ಅಬ್ಬಬ್ಬಾ.. ಸೂಪರ್ ಯೋಜನೆ: ತಿಂಗಳಿಗೆ 1500 ರೂಪಾಯಿ ಉಳಿಸಿ, 31 ಲಕ್ಷ ಗಳಿಸಬಹುದು! ಹೇಗೆ ಗೊತ್ತಾ..?
ಜತೆಗೆ ತುರ್ತು ಅಗತ್ಯದ ಸಂದರ್ಭದಲ್ಲಿ ಒಂದಷ್ಟು ಮೊತ್ತ ಮರಳಿ ಪಡೆಯುವ ಸೌಲಭ್ಯವೂ ಇದೆ. ಈ ಅಕೌಂಟ್ಗೆ ನೀವು ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ. ಒಂದುವೇಳೆ ನೀವು ಆರಂಭದಲ್ಲಿ ನೀಡಿದ ನಂಬರ್ ಅನ್ನು ಬದಲಾಯಿಸಬೇಕೆಂದಿದ್ದರೆ ಅದಕ್ಕೂ ಅವಕಾಶ ಇದೆ. ಸುಲಭವಾಗಿ, ಮನೆಯಲ್ಲೇ ಕುಳಿತು ಮೊಬೈಲ್ ನಂಬರ್ ಬದಲಾಯಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಮೊಬೈಲ್ ನಂಬರ್ ಯಾವೆಲ್ಲ ಪ್ರಯೋಜನ ಲಭ್ಯ?
ನಿಮ್ಮ ಮೊಬೈಲ್ ನಂಬರ್ ಬಳಸಿ ಇಪಿಎಫ್ನ ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಬಹುದು.
- ಯುಎಎನ್ (UAN)ನ ಸ್ಥಿತಿಯ ಪರಿಶೀಲನೆ (ಸಕ್ರಿಯ ಅಥವಾ ನಿಷ್ಕ್ರೀಯ).
- ಇಪಿಎಫ್ನ ಸಂಪೂರ್ಣ ಮಾಹಿತಿ.
- ಎಸ್ಎಂಎಸ್ ಮೂಲಕ ಬ್ಯಾಲನ್ಸ್ ಪರಿಶೀಲನೆ.
- ಕ್ಲೈಮ್ ಮಾಡಿದ್ದರೆ ಅದರ ಮಾಹಿತಿ.
- ನಿಮ್ಮ ಖಾತೆಗೆ ಜಮೆ ಆಗುತ್ತಿರುವ ಮೊತ್ತದ ಮಾಹಿತಿ.
- ಹಣ ವರ್ಗಾವಣೆಯಾಗುತ್ತಿದ್ದರೆ ಅದರ ಮಾಹಿತಿ.
- ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎನ್ನುವುದರ ಪರಿಶೀಲನೆ.
- ವಿವಿಧ ಆನ್ಲೈನ್ ಸೇವೆಗಳ ಒಟಿಪಿ ಪಡೆದುಕೊಳ್ಳಲು.
ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?
ಒಂದುವೇಳೆ ನೀವು ಆರಂಭದಲ್ಲಿ ನೀಡಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಬೇಕು ಎಂದು ಬಯಸಿದರೆ ಸುಲಭವಾಗಿ, ಆನ್ಲೈನ್ನಲ್ಲೇ ಈ ಕೆಲಸ ಮಾಡಬಹುದು. ಅದು ಹೇಗೆ ಎನ್ನುವ ಹಂತ ಹಂತದ ಮಾಹಿತಿ ಇಲ್ಲಿದೆ.
- ಮೊದಲು https://unifiedportal-mem.epfindia.gov.in/memberinterface/ ವೆಬ್ಸೈಟ್ಗೆ ತೆರಳಿ.
- ಅಥವಾ ಇಲ್ಲಿ ಕ್ಲಿಕ್ ಮಾಡಿ.
- UAN ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ
- ‘Manage’ ಆಯ್ಕೆಯಲ್ಲಿನ ‘Contact Details’ ಆಪ್ಶನ್ ಕ್ಲಿಕ್ ಮಾಡಿ.
- ‘Change Mobile No.’ ಆಯ್ಕೆ ಸೆಲೆಕ್ಟ್ ಮಾಡಿ.
- ಎರಡು ಬಾರಿ ಹೊಸ ಮೊಬೈಲ್ ನಂಬರ್ ನಮೂದಿಸಿ. ಬಳಿಕ ‘Get Mobile OTP’ ಬಟನ್ ಕ್ಲಿಕ್ ಮಾಡಿ.
- ಹೊಸ ಮೊಬೈಲ್ ನಂಬರ್ಗೆ ಬಂದಿರುವ ಒಟಿಪಿಯನ್ನು ನಮೂದಿಸಿ.
- ಬಳಿಕ ನಿಮ್ಮ ಮೊಬೈಲ್ ನಂಬರ್ ಯಶಸ್ವಿಯಾಗಿ ಬದಲಾಗುತ್ತದೆ.
ಪಾಸ್ವರ್ಡ್ ಮರೆತು ಹೋಗಿದ್ದರೆ ಹೀಗೆ ಮಾಡಿ
ಒಂದು ವೇಳೆ ಪಾಸ್ವರ್ಡ್ ಮರೆತು ಹೋಗಿದ್ದರೆ ಮೊಬೈಲ್ ನಂಬರ್ ಬದಲಾಯಿಸಲು ಹೀಗೆ ಮಾಡಿ.
- ಮೊದಲು https://unifiedportal-mem.epfindia.gov.in/memberinterface/ ವೆಬ್ಸೈಟ್ಗೆ ತೆರಳಿ.
- ಅಥವಾ ಇಲ್ಲಿ ಕ್ಲಿಕ್ ಮಾಡಿ.
- ಬಲ ಬದಿಯಲ್ಲಿ ಕಾಣಿಸುವ, ಲಾಗಿನ್ ಬಾಕ್ಸ್ನ ಕೆಳಗಡೆ ಇರುವ ʼForgot Passwordʼ ಆಯ್ಕೆಯನ್ನು ಕ್ಲಿಕ್ ಮಾಡಿ.
- UAN, ಕ್ಯಾಪ್ಚಾ ನಮೂದಿಸಿ ʼSubmitʼ ಬಟನ್ ಕ್ಲಿಕ್ ಮಾಡಿ.
- ಹೆಸರು, ಹುಟ್ಟಿದ ದಿನಾಂಕ, ಲಿಂಗದ ವಿವರಗಳನ್ನು ಭರ್ತಿ ಮಾಡಿ ʼVerifyʼ ಬಟನ್ ಸೆಲೆಕ್ಟ್ ಮಾಡಿ.
- ಮತ್ತೊಮ್ಮೆ ಕ್ಯಾಪ್ಚಾ, ಆಧಾರ್ ನಂಬರ್ ನಮೂದಿಸಿ ʼVerifyʼ ಆಯ್ಕೆ ಕ್ಲಿಕ್ ಮಾಡಿ.
- ಆಧಾರ್ಗೆ ಲಿಂಕ್ ಆಗಿರುವ, ಹೊಸ ಮೊಬೈಲ್ ನಂಬರ್ ನಮೂದಿಸಿ, ಬಳಿಕ ‘Get OTP’ ಬಟನ್ ಕ್ಲಿಕ್ ಮಾಡಿ.
- ಹೊಸ ಮೊಬೈಲ್ ನಂಬರ್ಗೆ ಬಂದಿರುವ ಒಟಿಪಿ ನಮೂದಿಸಿ, ‘Verify’ ಬಟನ್ ಕ್ಲಿಕ್ ಮಾಡಿ.
- ಹೊಸ ಪಾಸ್ವರ್ಡ್ ಎರಡು ಬಾರಿ ನಮೂದಿಸಿ ‘Submit’ ಆಯ್ಕೆ ಕ್ಲಿಕ್ ಮಾಡಿ.
- ಈಗ ಪಾಸ್ವರ್ಡ್ ಮತ್ತು ಮೊಬೈಲ್ ನಂಬರ್ ಬದಲಾಗಿರುತ್ತದೆ.