ಜನರು ತಲೆ ಕೂದಲಿನ ಬೆಳವಣಿಗೆಗೆ ಏನೆಲ್ಲಾ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಸೋತಿರುತ್ತಾರೆ. ಬಹಳ ಉದ್ದವಾದ ಕೂದಲು ಬೇಕು ಎಂದು ಬಯಸದೆ ಇದ್ದರೂ ಇರುವ ಕೂದಲನ್ನು ತಮಗೆ ಬೇಕಾದ ಹಾಗೆ ಸೊಂಪಾಗಿ, ದಟ್ಟವಾಗಿ ಬೆಳೆಸಬೇಕು ಎಂಬುದು ಹೆಚ್ಚಿನ ಜನರ ಆಶಯ ಆಗಿರುತ್ತದೆ. ನೀವು ಕೂಡ ಹಾಗೆ ಬಯಸುತ್ತೀರಾ ಎಂದಾದರೆ ಈ ಕೆಲವು ಟಿಪ್ಸ್ ಫಾಲೋ ಮಾಡಿ ವ್ಯತ್ಯಾಸ ಕಂಡುಕೊಳ್ಳಿ..
ಕೆಲವು ತಾಯಂದಿರ ಕೂದಲು ಈಗಲೂ ದಪ್ಪ ಮತ್ತು ಸುಂದರವಿರುತ್ತದೆ. ಅವರು ತಮ್ಮ ಕೂದಲಿಗೆ ಏನು ಬಳಸುತ್ತಾರೆ ಎಂಬುದು ಈಗಿನ ಹುಡುಗಿಯರಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ರೇಖಾ ಪಾಂಡೆ ಉತ್ತರವನ್ನು ಕಂಡುಕೊಂಡಿದ್ದಾರೆ ಹಾಗೂ ಅದರ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ತಾಯಿ ತಯಾರಿಸುವ ಲೇಪನ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಪೇಸ್ಟ್ನಲ್ಲಿ ಯಾವ ಗಿಡಮೂಲಿಕೆಗಳನ್ನು ಬಳಸಲಾಗಿದೆ ಮತ್ತು ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಯೋಣ.
ಈ ಲೇಪನ ತಯಾರಿಕಾ ವಿಧಾನದಲ್ಲಿ, 8 ವಿಭಿನ್ನ ರೀತಿಯ ಗಿಡಮೂಲಿಕೆ ಅನ್ನು ಬಳಸಲಾಗಿದೆ ಮತ್ತು ಅವೆಲ್ಲವೂ ಕೂದಲಿಗೆ ತುಂಬಾ ಪ್ರಯೋಜನಕಾರಿ. ಈ ಲೇಪನ ಆಮ್ಲಾ, ಸೀಗೆಕಾಯಿ ಮತ್ತು ಜಟಮಾನ್ಸಿಯಂತಹ ಅನೇಕ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಇದು ನಿಮ್ಮ ಕೂದಲಿಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ಅಂಟುವಾಳ ಕಾಯಿ ಪುಡಿ – 3 ಚಮಚ
ಸೀಗೆಕಾಯಿ ಪುಡಿ – 3 ಚಮಚ
ನೆಲ್ಲಿಕಾಯಿ ಪುಡಿ – 2 ಚಮಚ
ಭೃಂಗರಾಜ ಪುಡಿ – 1 ಚಮಚ
ಜಟಾಮಾನ್ಸಿ – 1 ಚಮಚ
ಮೆಂತ್ಯ ಬೀಜಗಳ ಪುಡಿ – 1 ಟೀಸ್ಪೂನ್
ಬ್ರಾಹ್ಮಿ ಪುಡಿ – 1 ಟೀ ಚಮಚ
ಕಪೂರ್ ಕಾಂಚಲಿ – 1
ನೀರು – ಅಗತ್ಯಕ್ಕೆ ತಕ್ಕಷ್ಟು
ಮೊದಲನೆಯದಾಗಿ, ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಮೇಲೆ ತಿಳಿಸಿದ ಎಲ್ಲಾ ಗಿಡಮೂಲಿಕೆಗಳನ್ನು ಒಂದೊಂದಾಗಿ ಮಿಶ್ರಣ ಮಾಡಿ. ಈಗ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ. ಕೂಡಲೇ ಹಚ್ಚಿಕೊಳ್ಳಲು ಹೋಗಬೇಡಿ ಏಕೆಂದರೆ ಅದು ನಿಮ್ಮ ಕೂದಲಿನ ಮೇಲೆ ನಿಲ್ಲುವುದಿಲ್ಲ.
ಪೇಸ್ಟ್ ತಯಾರಿಸಿದ ನಂತರ ಅದನ್ನು ತಟ್ಟೆಯಿಂದ ಮುಚ್ಚಿ 1 ಗಂಟೆ ಪಕ್ಕಕ್ಕೆ ಇರಿಸಿ. ನಂತರ ಈ ಗಿಡಮೂಲಿಕೆಗಳ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ ಮತ್ತು 15-20 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ ಮತ್ತು ಕೂದಲನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅತಿಯಾಗಿ ಬೆಚ್ಚಗಿರುವ ನೀರನ್ನು ಬಳಸಬೇಡಿ.