ಚಳಿಗಾಲದ ಋತುವಿನಲ್ಲಿ ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ನಮ್ಮ ಚರ್ಮ ಮತ್ತು ತುಟಿಗಳ ಮೇಲು ಪರಿಣಾಮವನ್ನು ಬೀರುತ್ತದೆ. ಚಳಿಗಾಲ ಬಂತೆಂದರೆ ನಮ್ಮ ಮುಖ ಹೊಳಪು ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮವು ಚಪ್ಪಟೆಯಾಗುತ್ತದೆ. ತುಟಿಗಳು ಬಿರುಕು ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಹೈಡ್ರಿಟ್ ಅಗಿ ಇರಿಸಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶ ಹೊರ ಹೋಗುತ್ತವೆ.
ಇದು ರಕ್ತವನ್ನು ಶುಧ್ಧೀಕರಿಸುತ್ತದೆ. ಮತ್ತು ಇದು ಚರ್ಮದ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ಸಾಬೀತು ಪಡಿಸಿವೆ. ಇದರ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪೋಷಕಾಂಶಗಳನ್ನು ಪಡೆಯಲು ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಮುಖ್ಯವಾಗಿದೆ.
1. ಕ್ಯಾರೆಟ್ : ಕ್ಯಾರೆಟ್ ಆಯಂಟಿಒಕ್ಸಿಡೆಂಟ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಸೇರಿದಂದೆ ಹೆಚ್ಚಿನ ಪೋಷಕಾಂಶಗಳಿಂದ ತುಂಬಿದೆ. ಈ ಪೋಷಕಾಂಶಗಳು ಜೀವಾಣುಗಳನ್ನು ಹೊರ ಹಾಕಲು, ಕೊಲೆಜಿನ್ನ್ನು ಉತ್ಪಾದಿಸಲು ಮತ್ತು ಚರ್ಮವನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ಮತ್ತು ಒಳಗಿನಿಂದ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಕ್ಯಾರೆಟನ್ನು ತಾಜಾ ಅಥವಾ ಜ್ಯೂಸ್ ರೂಪದಲ್ಲಿ, ಸಲಾಡ್ ರೂಪದಲ್ಲೂ ಸೇವಿಸಬಹುದು.
2. ಪಾಲಕ್: ಪಾಲಕ್ ಎಲೆಗಳಲ್ಲಿ ಹಸಿರು ಪೋಷಕಾಂಶಗಳು ಹೇರಳವಾಗಿದೆ. ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಅಂಶಗಳಿವೆ. ಇದು ಚರ್ಮವನ್ನು ವಯಸ್ಸಾಗುವಿಕೆ, ಶುಷ್ಕತೆ, ಕಪ್ಪು ಕಲೆಗಳಿಂದ ರಕ್ಷಿಸುತ್ತದೆ. ಮತ್ತು ಇದು ಉರಿಯೂತಗಳಿಂದ ರಕ್ಷಣೆ ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪಾಲಕ್ನ್ನು ಸಬ್ಜಿ, ಪಾಲಕ್ ಪರಾಟಾ, ಸ್ಮೂದಿ, ಪಲ್ಯದ ರೂಪದಲ್ಲಿ ಸೇವಿಸಬಹುದು.
3. ದಾಳಿಂಬೆ : ದಾಳಿಂಬೆ ನಮ್ಮ ಚರ್ಮದ ಮೇಲೆ ಆಚಿಟಿಮೈಕ್ರೋಬಿಯಲ್ ಪರಿಣಾಮವನ್ನು ಬೀರುತ್ತವೆ ಎಂದು ತಿಳಿದು ಬಂದಿದೆ. ಇದು ಮೊಡವೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ದೇಹದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಚರ್ಮದ ಎಣ್ಣೆಯ ಅಂಶವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
4. ಕಿತ್ತಲೆ ಹಣ್ಣು: ಈ ಹಣ್ಣಿನಲ್ಲಿ ಆಯಂಟಿಒಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಚಲಿಗಾಲದಲ್ಲಿ ಸೇವಿಸಲು ಪರ್ಫೆಕ್ಟ್ ಹಣ್ಣು. ಇದು ವಿಟಮಿನ್ ಸಿ ಅಂಶಗಳಿಂದ ಕೂಡಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
5. ಪೇರಳೆ(ಸೀಬೆ ಹಣ್ಣು) : ಪೇರಳೆ ಹಣ್ಣು ವಿಟಮಿನ್ ಎ, ಸಿ, ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್ ಪೋಷಕಾಂಶಗಳಿಂದ ಕೂಡಿವೆ. ಈ ಪೋಷಕಾಂಶಗಳು ದೆಹದಲ್ಲಿ ಕೊಲಾಜಿನ್ ಅಂಶವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.