ಹೈದರಾಬಾದ್: ಜಿದ್ದಾಜಿದ್ದಿ ಕಣವಾಗಿರುವ ತೆಲಂಗಾಣ ರಾಜ್ಯದಲ್ಲಿಂದು ಮತದಾನ (Telangana Assembly Election 2023) ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ ವರೆಗೆ ಮತದಾನಕ್ಕೆ ಅವಕಾಶ ಸಿಗಲಿದೆ. 119 ವಿಧಾನಸಭಾ ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು 2,290 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi),
Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್ಗಳು ಯಾವುದು ಗೊತ್ತಾ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಸೇರಿ ಹಲವು ಪ್ರಭಾವಿ ನಾಯಕರು ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಿಜೋರಾಂಗಳಲ್ಲಿ ಈಗಾಗಲೇ ನ.7ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿಂದು ಮತದಾನ ನಡೆಯಲಿದ್ದು, ಈ ಮೂಲಕ ಪಂಚರಾಜ್ಯ ಚುನಾವಣೆಗೆ (Five State Election) ತೆರೆ ಬೀಳಲಿದೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.