ಕೋಲಾರ: ಕುಡಿಯುವ ನೀರಿಗೆ ಆಗ್ರಹಿಸಿ ನೀಲಕಂಠ ಅಗ್ರಹಾರ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಕಳೆದ 20 ವರ್ಷಗಳಿಂದ ನೀರಿಗಾಗಿ ಗ್ರಾಮದ ಮಹಿಳೆಯರು ಪರದಾಡುತ್ತಿದ್ದಾರೆ. ಮಾಲೂರು ನಗರಕ್ಕೆ ನೀಲಕಂಠ ಅಗ್ರಹಾರ ಗ್ರಾಮ ಹೊಂದಿಕೊಂಡಿದ್ದು, ಚುನಾವಣೆ ವೇಳೆ ಮಾತ್ರ ರಾಜಕಾರಣಿಗಳು ಗ್ರಾಮಕ್ಕೆ ಬರ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಮಹಿಳೆಯರ ಪ್ರತಿಭಟನೆ ಮಾಡಿದ್ದಾರೆ. ಮನೆ ಮನೆಗೆ ನೀರಿನ ನಲ್ಲಿ ವ್ಯವಸ್ಥೆ ಹೊದಗಿಸುವವರೆಗೂ ಮತದಾನ ಮಾಡದಿರುವುದಾಗಿ ಪಟ್ಟು ಹಿಡಿದಿದ್ದಾರೆ.
ಮತದಾನ ಬಹಿಷ್ಕಾರದ ಬ್ಯಾನರ್ ಪ್ರದರ್ಶಿಸಿ ಮಹಿಳೆಯರು ಘೋಷಣೆ ಕೂಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯನಾದ್ರೂ ಗ್ರಾಮಕ್ಕೆ ನೀರು ತರುವಲ್ಲಿ ವಿಫಲರಾಗಿದ್ದಾರೆ. ನೀರು ತರುವಲ್ಲಿ ವಿಫಲನಾದೆನೆಂದು ಗ್ರಾ.ಪಂ. ಸದಸ್ಯ ಶ್ಯಾಮಣ್ಣ ಆಳಲು ತೋಡಿಕೊಂಡಿದ್ದಾರೆ.