ಧಾರವಾಡ: ಪ್ರತಿಯೊಂದು ಚುನಾವಣೆಯಲ್ಲಿ ಮತದಾನ ಪ್ರಮಾಣ ಕ್ಷಿಣಿಸುವುದು ಆಘಾತಕಾರಿ ಸಂಗತಿ. ಪ್ರಜ್ಞಾವಂತರು ತಪ್ಪದೇ, ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರೇಖಾ ಡೊಳ್ಳಿನವರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಚುನಾವಣಾ ಸಾಕ್ಷರತಾ ಕ್ಲಬ್, ಅಂಜುಮನ್ ಮಹಾವಿದ್ಯಾಲಯ, ಎನ್ನೆಸ್ಸೆಸ್ ಸಹಯೋಗದಲ್ಲಿ ತಾಲೂಕಿನ ಮರೇವಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸರ್ವರೂ ಹಕ್ಕು ಚಲಾಯಿಸಬೇಕು. ಕೆಲವರು ಮತದಾನ ಮಾಡದಿರಲು ಕಾರಣ ಇರಬಹುದು. ಅಂತವರಿಗೆ ಸರ್ಕಾರ ನೋಟಾ ಅವಕಾಶ ಕಲ್ಪಿಸಿದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಮತದಾನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕಡ್ಡಾಯ ಮಾತದಾನ ಮಾಡಬೇಕು. ಮುಖ್ಯವಾಗಿ 18 ವರ್ಷ ತುಂಬಿದ ಯುವಕ ಮತ್ತು ಯುವತಿಯರು ಪೋರ್ಟ್ಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಂ.ಮಕಾAದಾರ ಮಾತನಾಡಿ, ಸರ್ವರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಎಂದು ತಿಳಿಸಿದರು.
ದೇಶದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಅಭಿಪ್ರಾಯ ಹೊಂದಲು ಜನರು ಹಕ್ಕು ಚಲಾಯಿಸುವುದು ಮುಖ್ಯ. ಮೊದಲು ಯುವ ಜನಾಂಗ ಮತದಾನದಲ್ಲಿ ಪಾಲ್ಗೊಳ್ಳಬೇಕು. ಜತೆಗೆ ಕುಟುಂಬದ ಸದಸ್ಯರನ್ನು ತೊಡಗಿಸಬೇಕು ಎಂದು ಹೇಳಿದರು.
ಕವಿವಿ ಎನ್ನೆಸ್ಸೆಸ್ ಸಂಯೋಜಕ ಡಾ.ಮಹಾದೇವಪ್ಪ ದಳಪತಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿ ಮತಕ್ಕೂ ಮೌಲ್ಯವಿದೆ. 18 ವರ್ಷ ತುಂಬಿದ ಎಲ್ಲರೂ ತಪ್ಪದೇ, ಮತದಾನ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ನೀಲವ್ವ ವಗ್ಗರ, ನೋಡಲ್ ಅಧಿಕಾರಿ ಡಾ.ಎನ್.ವಿ.ಗುದಗನವರ್, ಪತ್ರಿಕೂದ್ಯಮದ ಮುಖ್ಯಸ್ಥ ಡಾ.ಎಸ್.ಎಸ್.ಅದೋನಿ, ಐಕ್ಯೂಎಸಿ ಡಾ.ಎನ್.ಬಿ.ನಾಲತವಾಡ, ಡಾ.ಎಫ್.ಎಚ್.ನದಾಫ್ ಅನೇಕರು ಇದ್ದರು.
ಕರಡಿ ಮಜಲು, ಶಾಲಾ ವಿದ್ಯಾರ್ಥಿಗಳ ಡ್ರಮ್ ಸೆಟ್, ಆರುತಿ ಮೇಳದ ಜೊತೆಗೆ ಎತ್ತುಗಳ ಕೊಂಬಿಗೆ ಕೊಡೆನ್ಸ್, ಗೊಂಡೆ, ರಿಬ್ಬನ್, ಜೂಲಾ, ಬಸವೇಶ್ವರರ ಭಾವಚಿತ್ರದ ಅಲಂಕೃತ ಚಕ್ಕಡಿ ಮತದಾನ ಜಾಗೃತಿ ಮೆರವಣಿಗೆ ನಡೆಯಿತು.
ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊAಡ ಮತದಾನ ಜಾಗೃತಿ ಅಭಿಯಾನಕ್ಕೆ ಜಿಪಂ ಯೋಜನಾಧಿಕಾರಿ ರೇಖಾ ಡೊಳ್ಳಿನವರ ಹಸಿರು ನಿಶಾನೆ ತೋರಿದ ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪನಃ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.