ನಿತ್ಯ ಬೆಳಿಗ್ಗೆ ನಾವು ಹಲ್ಲು ಸ್ವಚ್ಚಗೊಳಿಸುತ್ತೇವೆ. ಆದರೆ ಕೆಲವೊಮ್ಮೆ ಬ್ರಷ್ ಗಂಟಲಿನೊಳಗೆ ಹೋಗದಿದ್ದರೂ ಕೂಡ ನಿಮಗೆ ಪದೇ ಪದೇ ವಾಕರಿಕೆ, ವಾಂತಿ ಸಮಸ್ಯೆ ಕಾಡಿದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ಗಂಭೀರ ಕಾಯಿಲೆಯ ಲಕ್ಷಣವಂತೆ.
ನಿಮ್ಮ ದೇಹದಲ್ಲಿ ಪಿತ್ತರಸ ಹೆಚ್ಚಳವಾದರೆ ಗ್ಯಾಸ್, ಆಮ್ಲೀಯತೆ ಸಮಸ್ಯೆ ಉಂಟಾಗುತ್ತದೆ. ಇದರಿಂದ ನೀವು ಬ್ರಷ್ ಮಾಡುವಾಗ ವಾಂತಿಯಾಗುತ್ತದೆಯಂತೆ . ಅಲ್ಲದೇ ಲಿವರ್ ಸಂಬಂಧಿಸಿದ ಕಾಯಿಲೆಗಳಿಂದ ಕೂಡ ನಿಮಗೆ ಬ್ರಷ್ ಮಾಡುವಾಗ ವಾಂತಿಯಾಗುತ್ತದೆಯಂತೆ. ಅಲ್ಲದೇ ಹೊಟ್ಟೆಯಲ್ಲಿ ಹುಣ್ಣಿನ ಸಮಸ್ಯೆ ಇದ್ದರೆ ಕೂಡ ಈ ಸಮಸ್ಯೆ ಕಾಡುತ್ತದೆಯಂತೆ.
ಅಲ್ಲದೇ ಬ್ರಷ್ ಮಾಡುವಾಗ ವಾಂತಿಯಾಗುವುದು ಮೂತ್ರಪಿಂಡದ ಹಾನಿಯ ಲಕ್ಷಣವಾಗಿದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆ ಕಂಡುಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.