ಚಾಮರಾಜನಗರ: ಕಲುಷಿತ ನೀರು ಸೇವಿಸಿ ನಾಲ್ವರು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ 23 ನೇ ವಾರ್ಡ್ನಲ್ಲಿ ನಡೆದಿದೆ.
ಪಿಯುಸಿ ಪಾಸ್ ಆದವರಿಗೆ ಗುಡ್ ನ್ಯೂಸ್: ಕರ್ನಾಟಕ ಲೋಕಾಯುಕ್ತದಲ್ಲಿದೆ ಭರ್ಜರಿ ಉದ್ಯೋಗಾವಕಾಶ – ಇಂದೇ ಅರ್ಜಿ ಸಲ್ಲಿಸಿ
ಕೊಳ್ಳೇಗಾಲ ಪಟ್ಟಣದ ನೂರ್ ಮೊಹಾಲ್ಲಾ 7 ನೇ ಕ್ರಾಸ್ ವಾಸಿಗಳಾದ ಆಯಾನ್ ಷರೀಪ್ (5), ರಿಜ್ವಾನ್ ಖಾನ್(19) ಐಷಾ(15) ಸಿಮ್ರಾನ್(22) ರವರುಗಳು ವಾಂತಿ ಬೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿಯುವ ನೀರಿನ ತೊಂದರೆಯಾಗಿ ಅಯಾಜ್ ಷರೀಪ್, ಐಷಾ ರವರನ್ನು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.