ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಿವೋ Y200e 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಇದು 6GB + 128GB ಸ್ಟೋರೇಜ್ ಗೆ 19,999ರೂ ಬೆಲೆಯಾಗಿದ್ದು, 8GB + 128GB ಸ್ಟೋರೇಜ್ 20,999ರೂ ಬೆಲೆಯಾಗಿದೆ.
ಈ ಸ್ಮಾರ್ಟ್ಪೋನ್ ಬ್ಲ್ಯಾಕ್ ಡೈಮಂಡ್ ಮತ್ತು ಕೇಸರಿ ಕಿತ್ತಳೆ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್ಫೋನ್ ಪ್ರಸ್ತುತ ವಿವೋ ಇಂಡಿಯಾ ವೆಬ್ಸೈಟ್, ಫ್ಲಿಪ್ಕಾರ್ಟ್ ಮತ್ತು ಭಾರತದಲ್ಲಿನ ಆಫ್ಲೈನ್ ಸ್ಟೋರ್ಗಳ ಮೂಲಕ ಮುಂಗಡ-ಆರ್ಡರ್ಗಳಿಗೆ ಲಭ್ಯವಿದೆ. ಇದು ಫೆಬ್ರವರಿ 27 ರಿಂದ ಖರೀದಿಗೆ ಲಭ್ಯವಿರುತ್ತದೆ.
ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಎಲ್ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
Vivo Y200e 5G ಸ್ಮಾರ್ಟ್ಫೋನ್ 6.67 ಇಂಚಿನ ಸ್ಯಾಮ್ಸಂಗ್ E4 AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದ್ದು, 1800 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ನೀಡಲಿದೆ. ಜೊತೆಗೆ 100% DCI-P3 ಮತ್ತು 107% NTSC ಕಲರ್ ಗ್ಯಾಮಟ್ ಅನ್ನು ಹೊಂದಿದೆ. ಇದಲ್ಲದೆ ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಿದೆ.
6GB RAM ಮತ್ತು 128 GB ಹಾಗೂ 8GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ. ಇದಲ್ಲದೆ 8GB ವರೆಗಿನ ವರ್ಚುವಲ್ RAM ಅನ್ನು ಸಹ ಪಡೆದಿದೆ. ಇದರಲ್ಲಿ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
Vivo Y200e 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯಲ್ಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಫ್ಲಿಕರ್ ಸೆನ್ಸಾರ್ನಲ್ಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.