ಯಲಹಂಕ:- ಮಳೆ ನಿಂತರು ಹನಿಗಳು ನಿಲ್ಲಲ್ಲ ಎಂಬ ಮಾತನಿಂತೆ ಒಮ್ಮೆ ಅನುಮಾನ ಬಂದರೆ ಅದಕ್ಕೆ ಕೊನೆ ಇರುವುದಿಲ್ಲ.. ಟಿಕೆಟ್ ಸಿಗದಿದ್ದಾಗ ಯಲಹಂಕದಲ್ಲಿ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಸುಧಾಕರ್ ಎಂದು ಮಾಡಿದ್ದ ಪ್ರತಿಭಟನೆ ಮಾಡಿದ್ದರು. ಸಂಧಾನ ಆದರೂ ಪರಸ್ಪರ ಅನುಮಾನ ಕಡಿಮೆ ಆಗ್ತಿಲ್ಲ.. ಯಲಹಂಕ ಕಾರ್ಯಕರ್ತರ ಸಭೆಲಿ ವಿಶ್ವನಾಥ್ ಮಾತನಾಡಿ ನಾನು ಪ್ರಧಾನಿ ಹೆಸರಲ್ಲಿ ಓಟ್ ಕೇಳ್ತೇನೆ ಎಂದದ್ದು ಈಗ ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಭೀತುಪಡಿಸಿದೆ.
RCB ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್ – ತಂಡದ ನಾಯಕತ್ವ ಬದಲಾವಣೆ ಚರ್ಚೆ?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ವಿಶ್ವನಾಥ್ ಮಗ ಅಲೋಕ್ ನಡುವೆ ತೀವ್ರ ಪೈಪೋಟಿ ಇತ್ತು.. ಕೊನೆಗೆ ಡಾ.ಸುಧಾಕರ್ ಬಿಜೆಪಿ ಟಿಕೆಟ್ ಪಡೆದರು.. ನಂತರ ಯಲಹಂಕದಲ್ಲಿ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಸುಧಾಕರ್ ಎಂಬ ಪ್ರತಿಭಟನೆ ನಡೆಸಿದ್ದರು.. ಇದು ಡಾ.ಕೆ.ಸುಧಾಕರ್ ರಲ್ಲಿ ಅಸಮಾಧಾನ ಹೆಚ್ಚಿಸಿತ್ತು.. ನಂತರ ವಿಶ್ವನಾಥ್ ಮತ್ತು ಡಾ.ಕೆ.ಸುಧಾಕರ್ ನಡುವೆ ಸಂಧಾನವೂ ನಡೆದಿತ್ತು. ಎಲ್ಲವೂ ಸರಿ ಹೋಗ್ತಿದೆ ಎನ್ನುವಷ್ಟರಲ್ಲಿ ಇಂದು ಯಲಹಂಕ ಸಿಂಗನಾಯಕನಹಳ್ಳಿ ಬಳಿಕಾರ್ಯಕರ್ತರ ಸಭೆ ನಡೆಯಿತು.. ಈ ವೇಳೆ ವಿಶ್ವನಾಥ್ ಡಾ.ಕೆ.ಸುಧಾಕರ್ ಸಮ್ಮುಖದಲ್ಲೆ ನಾನು ಮೋದಿ ಹೆಸರಲ್ಲಿ ಓಟ್ ಕೇಳ್ತೇನೆ ಎಂದಿದ್ದಾರೆ.. ಇದು ಮತ್ತೆ ಡಾ.ಕೆ.ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಅಸಮಾಧಾನ ಮತ್ತು ಅನುಮಾನ ಇದೆ ಎನ್ನುವುದನ್ನು ಮತ್ತೆ ಸಾಭೀತು ಮಾಡುವಂತಿದೆ. ನನ್ನ ಮೇಲೆ ಅನುಮಾನ ವ್ಯಕ್ತವಾಗ್ತಿದೆ.. ಇದು ಮುಂದೆ ಸರಿಹೋಗಬೇಕು ಎಂದು ವಿಶ್ವನಾಥ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ..
ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಯಲಹಂಕ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.. ವಿಶ್ವನಾಥ್ ರವರ ಮೇಲೆ, ಯಲಹಂಕದ ಕಾರ್ಯಕರ್ತರ ಮೇಲೆ ತುಂಬಾ ವಿಶ್ವಾಸವಿದೆ.. ಹೆಚ್ಚು ಮಹುಮತ ನೀಡಿ ಗೆಲ್ಲಿಸುತ್ತಾರೆಂಬ ಹೆಚ್ಚಿನ ವಿಶ್ವಾಸವಿದೆ ಎಂದರು.. ಇದೇ ವೇಳೆ ಇನ್ನು ಕೆಲವು ಕಡೆ ಅಸಮಾಧಾನ ಪಕ್ಷಕ್ಕೆ ಹಿನ್ನಡೆಯಾಗಲ್ಲವಾ ಎಂದರೆ, ಚುನಾವಣೆ ಮುಗಿಯುವವರೆಗೂ ಈ ರೀತಿಯ ಅಸಮಾಧಾನ ಇರುತ್ತವೆ..ಈ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಬೇಡ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಡಾ.ಕೆ.ಸುಧಾಕರ್ ಇಂದು ಯಲಹಂಕ, ಗೌರಿಬಿದನೂರು ಮತ್ತು ಹೊಸಕೋಟೆಯ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಮತಯಾಚಿಸಿದರು.. ಯಲಹಂಕದಲ್ಲಿ ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿ.ನಾಗರಾಜ್ ಸುಧಾಕರ್ ಪರ ಮತಯಾಚಿಸಿದರು.. ಆದರೆ ಚಿಕ್ಕಬಳ್ಳಾಪುರದ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರ ನಡುವಿನ ಅಸಮಾಧಾನ ಬೂದಿಮುಚ್ಚಿದ ಕೆಂಡದಂತಾಗಿದ್ದು, ಯಾವಾಗ ಅಸಮಾಧಾನ ಮತ್ತು ಅನುಮಾನ ಸ್ಪೋಟಗೊಳ್ಳುತ್ತೋ..!? ಇದು ಪಕ್ಷದ ಹಿನ್ನಡೆಗೆ ಕಾರಣವಾಗುತ್ತದಾ..!? ಎನ್ನುತ್ತಿದೆ ಚಿಕ್ಕಬಳ್ಳಾಪುರದ ರಾಜಕೀಯ ಪಡಸಾಲೆ..