ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಫಾಸ್ಟ್ ಬೌಲರ್ ವೈಶಾಖ್ ವಿಜಯ್ ಕುಮಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇದ್ದಾಗ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟ್ ಮೂಲಕ ಫಿಫ್ಟಿ ಬಾರಿಸಿ ಭಾರಿ ಸದ್ದು ಮಾಡಿದ್ದರು. ಅಂದಹಾಗೆ ಈಗ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಆರ್ಸಿಬಿ ತಂಡದ ಮತ್ತೊಬ್ಬ ಫಾಸ್ಟ್ ಬೌಲರ್ ಆಕಾಶ್ ದೀಪ್ ಕೂಡ, ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಂದ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದಾರೆ. ಆದರೆ, ತಮ್ಮ ಆರ್ಸಿಬಿ ಜೊತೆಗಾರನ ಹಾಗೆ ತಾವು ಕೊಹ್ಲಿ ಕೊಟ್ಟ ಬ್ಯಾಟನ್ನು ಬಳಕೆ ಮಾಡುವುದಿಲ್ಲ. ತಮಗೆ ಸಿಕ್ಕ ಅತ್ಯಂತ ವಿಶೇಷ ಉಡುಗೊರೆಯನ್ನು ಜೀವನದುದ್ದಕ್ಕೂ ಬಳಸದೇ ತಮ್ಮಲ್ಲೇ ಇಟ್ಟುಕೊಳ್ಳುವುದಾಗಿ ಆಕಾಶ್ ಹೇಳಿಕೊಂಡಿದ್ದಾರೆ.
ಸೆ.28ರಂದು ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದ ಆಕಾಶ್ ದೀಪ್, ಮೊದಲ ಇನಿಂಗ್ಸ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಮಿಂಚಿದ್ದರು. ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ಗಳ ಬೃಹತ್ ಗೆಲುವು ದಾಖಲಿಸಿತ್ತು. ಇದರ ಬೆನ್ನಲ್ಲೇ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಆಕಾಶ್ ದೀಪ್, ತಾವು ಕೇಳದೇ ಇದ್ದರೂ ಕೊಹ್ಲಿ ತಮ್ಮ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ಅವರ ಉಡುಗೊರೆ ಬಗ್ಗೆ ನನ್ನಲ್ಲಿ ನಗುವೊಂದೇ ಉತ್ತರವಾಗಿತ್ತು. ಅವರು ಬ್ಯಾಟ್ ಉಡುಗೊರೆ ನೀಡಿದರು. ಆದರೆ, ಈ ಬ್ಯಾಟನ್ನು ನಾನೆಂದಿಗೂ ಬಳಸುವುದಿಲ್ಲ. ವಿರಾಟ್ ಭಯ್ಯಾ ಕೊಟ್ಟ ಉಡುಗೊರೆಯನ್ನು ಹಾಗೇ ಇಟ್ಟುಕೊಳ್ಳುತ್ತೇನೆ. ನನ್ನ ಕೊಠಡಿಯ ಗೋಡೆ ಮೇಲೆ ಇದನ್ನು ಇಟ್ಟುಕೊಳ್ಳುತ್ತೇನೆ. ಆ ಬ್ಯಾಟ್ ಮೇಲೆ ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಕೂಡ ಹಾಕಿಸಿಕೊಂಡಿದ್ದೇನೆ,” ಎಂದು ಆಕಾಶ್ ದೀಪ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.