ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್ಗೆ ತೆರಳಿ ವಿರಾಟ್ ಕೊಹ್ಲಿ ನೆಲೆಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.
ಜೂನ್ 29ರಂದು ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗೆದ್ದ ತಕ್ಷಣವೇ ಕೊಹ್ಲಿ 20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಲಂಡನ್ಗೆ ತೆರಳಿರುವ ಅವರು ಭವಿಷ್ಯದಲ್ಲಿ ಕಾಯಂ ಅಲ್ಲೇ ನೆಲೆಗೊಳ್ಳಲಿದ್ದರೆ ಎಂಬುದಾಗಿ ಹೇಳಲಾಗಿದೆ
ಈ ಬೀಚ್ ಗಳಲ್ಲಿ ಬೆತ್ತೆಲೆಯಲ್ಲೇ ತಿರುಗಾಡಬಹುದು: ಎಸ್ ಇದು ನಿಜ, ಎಲ್ಲಿ ಅಂತೀರಾ!?..ಈ ಸ್ಟೋರಿ ನೋಡಿ!
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ (Virat Kohli) ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ತಮ್ಮ ಇಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜತೆ ಲಂಡನ್ನಲ್ಲಿದ್ದಾರೆ. ಬಾರ್ಬಡೋಸ್ನಿಂದ ಭಾರತಕ್ಕೆ ಮರಳಿದ ವಿರಾಟ್ ಕೊಹ್ಲಿ ತಕ್ಷಣವೇ ಲಂಡನ್ಗೆ ಹೋಗಿದ್ದಾರೆ.
ಇನ್ನೂ ಅನುಷ್ಕಾ ಮತ್ತು ವಿರಾಟ್ ಆಗಾಗ್ಗೆ ಲಂಡನ್ಗೆ ಭೇಟಿ ನೀಡುತ್ತಿರುವ ಕಾರಣ ಈ ಊಹಾಪೋಹಗಳು ಎದ್ದಿವೆ. . 2023 ರಲ್ಲಿ, ವಿರಾಟ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡು ಲಂಡನ್ನಲ್ಲಿ ಅನುಷ್ಕಾ ಅವರೊಂದಿಗೆ ಸ್ವಲ್ಪ ಸಮಯ ಕಳೆದರು. ವೈರಲ್ ಫೋಟೋದಲ್ಲಿ ಅನುಷ್ಕಾ ಮತ್ತು ವಿರಾಟ್ ಲಂಡನ್ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದರು. ಅಕಾಯ್ ಅವರ ಜನನವನ್ನು ಘೋಷಿಸಿದ ಕೆಲವು ದಿನಗಳ ನಂತರ ವಿರಾಟ್ ಲಂಡನ್ನ ರೆಸ್ಟೋರೆಂಟ್ನಲ್ಲಿ ವಮಿಕಾ ಅವರೊಂದಿಗೆ ಕಾಣಿಸಿಕೊಂಡಿದ್ದರು.