ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಚಿನ್ನಸ್ವಾಮಿ ಸ್ಟೇಡಿಯಂ ಮುಂಭಾಗದಲ್ಲಿರುವ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ & ರೆಸ್ಟೋರೆಂಟ್ಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ ಕಾನೂನು ನಿಯಮ ಉಲ್ಲಂ ಸಿರುವುದಕ್ಕೆ ನೋಟಿಸ್ ನೀಡುವ ವೇಳೆ ಇದು ಯಾರ ಮಾಲಿಕತ್ವದಲ್ಲಿದೆ ಎಂಬುದನ್ನು ನಾವು ನೋಡುವುದಿಲ್ಲ. ನಮ್ಮ ಖಾತೆಯಲ್ಲಿ ಅಥವಾ ಯಾರ ಹೆಸರಿನಲ್ಲಿ ಪರವಾನಗಿ ನೀಡಲಾಗಿದೆ ಎಂಬುದನ್ನು ನೋಡಿಕೊಂಡು ಆ ಪ್ರಕಾರ ನೋಟಿಸ್ ಕೊಡಲಾಗುತ್ತದೆ.
Cholesterol: ಒಂದೇ ತಿಂಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಆಗಬೇಕೇ.? ಬೆಳಗ್ಗೆ ಈ ಪಾನಿಯ ಕುಡಿಯಿರಿ
ಎಂ.ಜಿ. ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರುಗಡೆ ಕಟ್ಟಡವೊಂದರ ಮೇಲೆ ರೆಸ್ಟೋರೆಂಟ್ ನಡೆಯುತ್ತಿದೆ. ಕಟ್ಟಡದಲ್ಲಿ ನಿಯಮ ಉಲ್ಲಂ ಸಿದ್ದಕ್ಕೆ ನೋಟಿಸ್ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಪೀಲ್ಗಾಗಿ ನಮ್ಮ ಬಳಿ ಬಂದಿದ್ದಾರೆ. ಆ ಅಪೀಲ್ಗೆ ಸ್ಟೇ ಇದೆ ಎಂದು ತಿಳಿದು ಬಂದಿದೆ. ನಮ್ಮ ಬಳಿ ಅಪೀಲ್ ಇದ್ದರೆ, ಎಲ್ಲರಿಗೂ ಅನ್ವಯವಾಗುವಂತೆ ಅಪೀಲ್ನಲ್ಲಿ ಆರ್ಡರ್ ಪಾಸ್ ಮಾಡುತ್ತೇವೆ.
ಅಪೀಲ್ ವಿಚಾರಣೆ ನಡೆದ ಬಳಿಕ ನಾವು ಅಂತಿಮ ಆದೇಶ ನೀಡಲಾಗುವುದು. ಒಂದು ವೇಳೆ ಅಪೀಲ್ ರದ್ದುಪಡಿಸಿದರೆ ಸಂಬಂಧಿಸಿದ ಕಟ್ಟಡ ಒಡೆಯಲು ಕ್ರಮ ಕೈಗೊಳ್ಳಬೇಕು. ಅಪೀಲ್ ಸ್ವೀಕಾರವಾದರೆ ನಮ್ಮ ಸಿಬ್ಬಂದಿ ಅದರ ಪ್ರಕಾರ ನಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಗ್ನಿ ಶಾಮಕ ದಳದಿಂದ ನಕ್ಷೆ, ಪ್ರಮಾಣ ಪತ್ರ ಎನ್ಒಸಿ ಪರವಾನಿಗೆ ಪಡೆಯದೇ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ನೀಡಿದೆ. ಸಾಮಾಜಿಕ ಕಾರ್ಯಕರ್ತ ಹೆಚ್.ಎಂ ವೆಂಕಟೇಶ್ ಅನ್ನೋರು ಈ ಬಗ್ಗೆ ಬಿಬಿಎಂಪಿಗೆ ದೂರು ಕೊಟ್ಟಿದ್ದರು. ಇದನ್ನು ಆಧರಿಸಿ ಶಾಂತಿನಗರದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.