ರಾಮಲಾಲ ಪ್ರಾಣ ಪ್ರತಿಷ್ಠಾಕ್ಕಾಗಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಅಯೋಧ್ಯೆಗೆ ತಲುಪಿದ್ದಾರೆ.
ವಿರಾಟ್ ಜೊತೆಗೆ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಆರ್ ಅಶ್ವಿನ್, ಹರ್ಮನ್ಪ್ರೀತ್ ಕೌರ್ ಮತ್ತು ಮಿಥಾಲಿ ರಾಜ್ ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೊಹ್ಲಿಗೆ ಬಿಸಿಸಿಐ ಒಂದು ದಿನದ ರಜೆ ಕೂಡ ನೀಡಿದೆ. ರೋಹಿತ್ ಶರ್ಮಾ ಸದ್ಯ ಮುಂಬೈನಲ್ಲಿದ್ದು, ಇವರು ಆಗಮಿಸುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಅನುಭವಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ದೇವಾಲಯದ ಉದ್ಘಾಟನೆಗೆ ಅಯೋಧ್ಯೆ ತಲುಪಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ರವೀಂದ್ರ ಜಡೇಜಾ ಅಯೋಧ್ಯೆಗೆ ತಲುಪಿದ್ದಾರೆ ಎಂದು ವರದಿಗಳು ಹೇಳಿವೆ.