ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಸೀಸನ್ಗಾಗಿ ದೆಹಲಿಯ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೌದು ಕೇವಲ ಐಪಿಎಲ್ನಲ್ಲಿ ಮಾತ್ರ ಆಡುತ್ತಾ, ದೇಶಿ ಕ್ರಿಕೆಟ್ ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗರು ಟೀಕಿಸುತ್ತಿದ್ದರು.
ಹೆಡ್ ಕೋಚ್ ಗಂಭೀರ್ ಕೂಡ ಸರಣಿ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಇಲ್ಲದ ಸಮಯದಲ್ಲಿ ದೇಶಿಯ ಟೂರ್ನಿಗಳು ನಡೆಯುತ್ತಿದ್ದರೆ, ಎಲ್ಲಾ ಆಟಗಾರರು ಆಡಲೇಬೇಕು, ಟೆಸ್ಟ್ ತಂಡದಲ್ಲಿ ಉಳಿಯಬೇಕೆಂದರೆ ಯಾರೇ ಆದರೂ ರಣಜಿ ಕ್ರಿಕೆಟ್ ಆಡಬೇಕು ಎಂದು ಹೇಳಿದ್ದರು. ಇದೀಗ ಬಹುತೇಕ ಆಟಗಾರರು ರಣಜಿಯಲ್ಲಿ ಪಾಲ್ಗೊಳ್ಳಲು ಸಿದ್ಧರಾಗುತ್ತಿದ್ದಾರೆ.
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಇದಕ್ಕೆ ಪೂರಕವಾಗಿ ಇದೀಗ ದೆಹಲಿ ತನ್ನ ರಣಜಿ ಟ್ರೋಫಿ ತಂಡವನ್ನು ಅಂತಿಮಗೊಳಿಸಿದ್ದು, ಈ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ 13 ವರ್ಷಗಳ ಬಳಿಕ ಕೊಹ್ಲಿ ದೆಹಲಿ ರಣಜಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅವರಲ್ಲದೆ, ರಿಷಬ್ ಪಂತ್ ಕೂಡ ದೆಹಲಿ ತಂಡದಲ್ಲಿದ್ದು, ಅವರು ಕೂಡ 8 ವರ್ಷಗಳ ನಂತರ ಈ ಪಂದ್ಯಾವಳಿಯನ್ನು ಆಡುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಅತ್ಯಂತ ಕಿರಿಯ ಕ್ರಿಕೆಟಿಗನ ನಾಯಕತ್ವದಲ್ಲಿ ಆಡಲಿದ್ದಾರೆ ಎಂಬುದು ದೊಡ್ಡ ಸುದ್ದಿ. ವಾಸ್ತವವಾಗಿ, ದೆಹಲಿಯ ರಣಜಿ ತಂಡದ ನಾಯಕತ್ವವನ್ನು ಆಯುಷ್ ಬದೋನಿಗೆ ಹಸ್ತಾಂತರಿಸಲಾಗಿದೆ.
ಆದ್ರೆ ವಿರಾಟ್ ಕೊಹ್ಲಿ ಅವರ ಹೆಸರನ್ನು ತಂಡದಲ್ಲಿ ಸೇರಿಸಲಾಗಿದೆಯಾದರೂ ಅವರು ಸೌರಾಷ್ಟ್ರ ವಿರುದ್ಧ ಆಡುತ್ತಾರೆ ಎಂಬುದು ಖಚಿತವಾಗಿಲ್ಲ. ವಾಸ್ತವವಾಗಿ, ಸಿಡ್ನಿ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿಯ ಕುತ್ತಿಗೆ ಉಳುಕಿತ್ತು. ಹೀಗಾಗಿ ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದಕ್ಕಾಗಿ ವಿರಾಟ್ ಇಂಜೆಕ್ಷನ್ ಕೂಡ ತೆಗೆದುಕೊಂಡಿದ್ದಾರೆ. ವಿರಾಟ್ ಫಿಟ್ ಆಗದೇ ಇದ್ದರೆ ಈ ಪಂದ್ಯದಲ್ಲಿ ಆಡುವುದಿಲ್ಲ ಆದರೆ ತಂಡದೊಂದಿಗೆ ಅವರು ರಾಜ್ ಕೋಟ್ನಲ್ಲಿ ಇರೋದು ಖಚಿತ. ಮತ್ತೊಂದೆಡೆ ಪಂತ್ ಈ ಪಂದ್ಯ ಆಡುವುದು ಖಚಿತವಾಗಿದೆ.