ಕ್ರಿಕೆಟ್ ವೃತ್ತಿ ಜೀವನದ ನಿವೃತ್ತಿ ಬಗ್ಗೆ ಭಾವನಾತ್ಮಕವಾಗಿ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಒಂದು ದೀರ್ಘ ವಿರಾಮ ಪಡೆದು ಯೋಚಿಸಿ ತದನಂತರ ಮುಂದಿನ ನಿರ್ಧಾರವನ್ನು ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
GT Vs SRH: ಪ್ಲೇ ಆಫ್ ಮೇಲೆ ಹೈದರಾಬಾದ್ ಕಣ್ಣು.. ಗುಜರಾತ್ ಗೆಲುವಿನ ಮೇಲೆ RCB ಫ್ಯಾನ್ಸ್ ಕಣ್ಣು..!
ಕಳೆದ ಒಂದು ದಶಕದಿಂದ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲ ಇಡೀ ಕ್ರೀಡಾ ಜಗತ್ತಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಮುಂದಿನ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೂ ಕ್ರಿಕೆಟ್ ಅನ್ನು ಸೇರಿಸಲಾಗಿದೆ. ಎಲ್ಲಾ ಸ್ವರೂಪದ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸುವ ಮೂಲಕ ವಿರಾಟ್ ಕೊಹ್ಲಿ ವಿಶ್ವದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಆರ್ಸಿಬಿಯ ರಾಯಲ್ ಗಲಾ ಡಿನ್ನರ್ ಶೋನಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ ಹಲವು ಅಂಶಗಳ ಬಗಗೆ ಮಾತನಾಡಿದ್ದಾರೆ.
ಒಬ್ಬ ಕ್ರೀಡಾಪಟುವಾಗಿ ತಮ್ಮ-ತಮ್ಮ ವೃತ್ತಿ ಜೀವನವನ್ನು ಮುಗಿಸಲು ಒಂದು ಕೊನೆಯ ದಿನಾಂಕವಿರುತ್ತದೆ. ಹಾಗಾಗಿ ನಾನು ಇದರ ಮೇಲೆ ಕೆಲಸವನ್ನು ಮಾಡುತ್ತಿದ್ದೇನೆ. ಅಚ್ಚರಿ ರೀತಿಯಲ್ಲಿ ನಾನು ನನ್ನ ವೃತ್ತಿ ಜೀವನವನ್ನು ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಆಯಾ ನಿರ್ದಿಷ್ಟ ದಿನದಂದು ನನ್ನ ಕಡೆಯಿಂದ ಎಷ್ಟು ಸಾಧ್ಯವೋ ಅದನ್ನು ಮಾಡುತ್ತೇನೆ. ಏಕೆಂದರೆ ಇದನ್ನು ನಾನು ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ನಾನು ಯಾವುದನ್ನು ಮಾಡಲಿಲ್ಲವಲ್ಲ ಎಂದು ನಾನು ಮುಂದೊಂದು ದಿನ ಪಶ್ಚಾತಾಪ ಪಡಬಾರದು,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ
ಭವಿಷ್ಯದಲ್ಲಿ ಏನು ಮಾಡಬೇಕೆಂಬ ಬಗ್ಗೆ ಚಿಂತಿಸಲು ದಿರ್ಘಾವಧಿ ವಿರಾಮ ಪಡೆಯುವ ಬಗ್ಗೆಯೂ ವಿರಾಟ್ ಕೊಹ್ಲಿ ಇದೇ ವೇಳೆ ಸುಳಿವು ನೀಡಿದ್ದಾರೆ. ಇದರ ಜೊತೆಗೆ ತಮ್ಮ ನಿವೃತ್ತಿಯ ಬಗ್ಗೆಯೂ ಮಾತನಾಡಿದ್ದಾರೆ. ತಾನು ಕ್ರಿಕೆಟ್ ಆಡುವವರೆಗೂ ಸಾಧ್ಯವಾದಷ್ಟು ತಂಡಕ್ಕೆ ಕೊಡುಗೆ ನೀಡಲು ಪ್ರಯತ್ನಿಸುವುದಾಗಿ ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ. ಒಮ್ಮೆ ನಾನು ಹೊರ ಹೋಗಲು ನಿರ್ಧರಿಸಿದರೆ, ಮತ್ತೆ ಆ ನಿರ್ಧಾರದಿಂದ ನಾನು ಹೊರ ಬರುವುದಿಲ್ಲ. ಅದೇ ಅಂತಿಮವಾಗಿರುತ್ತದೆ. ಹಾಗಾಗಿ ನಾನು ಕ್ರಿಕೆಟ್ ಆಡುವಷ್ಟು ದಿನಗಳ ಕಾಲ ನನ್ನಿಂದ ಸಾಧ್ಯವಾದದನ್ನು ಕೊಡಲು ಬಯಸುತ್ತೇನೆ. ಈ ಸಂಗತಿಗಳನ್ನು ಮಾತ್ರ ನನ್ನ ಮನಸಿನಲ್ಲಿರುತ್ತವೆ,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)