ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಯ ಬ್ಯಾಟ್ ರಿಂಕು ಸಿಂಗ್ ಪಾಲಿಗೆ ಅಪಶಕುನ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
C.T Ravi: ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ: ಸಿಎಂಗೆ ಸಿ.ಟಿ ರವಿ ಸವಾಲು
ಟೀಮ್ ಇಂಡಿಯಾ ಪರ ಕಳೆದ 7 ಇನಿಂಗ್ಸ್ಗಳಲ್ಲಿ ರಿಂಕು ಸಿಂಗ್ ಕಲೆಹಾಕಿರುವುದು ಕೇವಲ 91 ರನ್ಗಳು ಮಾತ್ರ. ಅಂದರೆ 15.16 ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದಾರೆ. ಅದರಲ್ಲೂ ಪ್ರಸ್ತುತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 28 ರನ್ಗಳು ಮಾತ್ರ. ಹೀಗಾಗಿ ಇದೀಗ ರಿಂಕು ಸಿಂಗ್ಗೆ ಭಾರತ ತಂಡದಿಂದ ಹೊರಬೀಳುವ ಆತಂಕ ಎದುರಾಗಿದೆ.
ಕುತೂಹಲಕಾರಿ ವಿಷಯ ಎಂದರೆ ಇಂತಹದೊಂದು ಕಳಪೆ ಫಾರ್ಮ್ ಶುರುವಾಗಿದ್ದು ಈ ಬಾರಿಯ ಐಪಿಎಲ್ ಬಳಿಕ. ಐಪಿಎಲ್ 2024 ರಲ್ಲಿ ರಿಂಕು, ವಿರಾಟ್ ಕೊಹ್ಲಿಯಿಂದ ಬ್ಯಾಟ್ ಪಡೆದಿದ್ದರು. ಇದಾದ ಬಳಿಕ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂಬುದು ಅಚ್ಚರಿ. ಹೀಗಾಗಿಯೇ ಇದೀಗ ರಿಂಕು ಸಿಂಗ್ ಪಾಲಿಗೆ ಕಿಂಗ್ ಕೊಹ್ಲಿಯ ಬ್ಯಾಟ್ ಅಪಶಕುನ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ಅಂಕಿ ಅಂಶಗಳನ್ನು ಸಹ ಮುಂದಿಟ್ಟಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭದಲ್ಲಿ ರಿಂಕು ಸಿಂಗ್ 46 ರ ಸರಾಸರಿಯಲ್ಲಿ ಮತ್ತು 165 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಆದರೀಗ ಅವರ ಸ್ಟ್ರೈಕ್ ರೇಟ್ 128.16 ಕ್ಕೆ ಬಂದು ನಿಂತಿದೆ. ಅಲ್ಲದೆ ಕಳೆದ 7 ಇನಿಂಗ್ಸ್ಗಳಲ್ಲಿ ಅವರ ರನ್ ಸರಾಸರಿ ಕೇವಲ 15.16 ಮಾತ್ರ.
ಅಲ್ಲದೆ ವಿರಾಟ್ ಕೊಹ್ಲಿಯ ಬ್ಯಾಟ್ ಪಡೆದ ಬಳಿಕ ರಿಂಕು ಸಿಂಗ್ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 4 ಇನ್ನಿಂಗ್ಸ್ಗಳಲ್ಲಿ 60 ರ ಸರಾಸರಿಯಲ್ಲಿ 60 ರನ್ ಮಾತ್ರ ಕಲೆಹಾಕಿದ್ದರು. ಇನ್ನು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 2 ಇನ್ನಿಂಗ್ಸ್ಗಳಲ್ಲಿ ಕಲೆಹಾಕಿದ್ದು 61 ರನ್ಗಳು ಮಾತ್ರ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 28 ರನ್ ಮಾತ್ರ ಗಳಿಸಿದ್ದಾರೆ.