ಇಡೀ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿರುವ ವಿರಾಟ್ ಕೊಹ್ಲಿಗೆ ಸೋಶಿಯಲ್ ಮೀಡಿಯಾದಲ್ಲೂ ಅಸಂಖ್ಯಾತ ಫಾಲೋವರ್ಸ್ಗಳಿದ್ದಾರೆ.
Breaking News: ಮದ್ಯ ಪ್ರಿಯರ ಗಮನಕ್ಕೆ: ಎಣ್ಣೆ ಪ್ರಿಯರಿಗೆ ಬಂದು ಹೊಸ ರೂಲ್ಸ್!? ಏನದು!?
ಅಬ್ಬಾ ಅವರ ಎನರ್ಜಿ, ಅವರ ಲುಕ್, ಅವರ ಖದರ್ ಅಭಿಮಾನಿಗಳು ಫಿದಾ ಆಗದೇ ಇರಲಾರರು. ಹೀಗಾಗಿ ವಿರಾಟ್ ಕೊಹ್ಲಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಪೋಸ್ಟ್ ಹಂಚಿಕೊಂಡರು ಅದು ಕ್ಷಣ ಮಾತ್ರದಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಹಾಗೆಯೇ ದಾಖಲೆಯನ್ನು ನಿರ್ಮಿಸುತ್ತದೆ. ಹೀಗಾಗಿಯೇ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳಲು 15 ಕೋಟಿ ಗೂ ಹೆಚ್ಚಿನ ಮೊತ್ತವನ್ನು ಶುಲ್ಕವಾಗಿ ಪಡೆಯುತ್ತಾರೆ ಎಂಬ ವರದಿ ಇದೆ.
ಇದೆಲ್ಲದರ ನಡುವೆ ದಾಖಲೆಗಳ ಸರದಾರ ವಿರಾಟ್ ಮುಂದೆ 10 ಮಹತ್ವದ ದಾಖಲೆಗಳು ಇದ್ದು, ಅದನ್ನು ಮುರಿಯುವ ತವಕದಲ್ಲಿ ಕಿಂಗ್ ಕೊಹ್ಲಿ ಇದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಶುಕ್ರವಾರದಿಂದ ಆರಂಭವಾಗಲಿದೆ. ಈ ಸರಣಿಯ ಐದು ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳನ್ನು ಬರೆಯಲು ಉತ್ತಮ ಅವಕಾಶವಿದೆ. ಈ ಎಲ್ಲಾ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
ಅತ್ಯಧಿಕ ರನ್: ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ (1,809) ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ (1352) ಗೆ ಇನ್ನು ಕೇವಲ 458 ರನ್ಗಳ ಅಗತ್ಯವಿದೆ.
ಅತ್ಯಧಿಕ ಶತಕ: 2. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ 6 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಈ ಸರಣಿಯಲ್ಲಿ 4 ಸೆಂಚುರಿ ಸಿಡಿಸಿದರೆ, ಇಂಗ್ಲೆಂಡ್ನ ಜಾಕ್ ಹಾಬ್ಸ್ (9) ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆ ಮುರಿಯಬಹುದು.
ಅತಿ ಹೆಚ್ಚು ಟೆಸ್ಟ್ ರನ್: ಅಡಿಲೇಡ್ ಸ್ಟೇಡಿಯಂನೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವ ವಿರಾಟ್ ಕೊಹ್ಲಿ 2ನೇ ಟೆಸ್ಟ್ನಲ್ಲಿ 93 ರನ್ಗಳಿಸಿದರೆ, ಅಡಿಲೇಡ್ನಲ್ಲಿ ಅತ್ಯಧಿಕ ರನ್ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ರನ್ ಸರದಾರ: ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ಗಳ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ 74 ರನ್ಗಳಿಸಿದರೆ 3500 ರನ್ ಗಡಿಯನ್ನು ಮುಟ್ಟಬಹುದು.
ಸೆಂಚುರಿ ಸ್ಟಾರ್: ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಒಂದು ಶತಕದ ಅಗತ್ಯವಿದೆ. ಅದರಂತೆ ಅಡಿಲೇಡ್ನಲ್ಲಿ ಒಂದು ಸೆಂಚುರಿ ಸಿಡಿಸಿದರೆ ಈ ದಾಖಲೆ ಕಿಂಗ್ ಕೊಹ್ಲಿ ಪಾಲಾಗಲಿದೆ.
ಅತ್ಯಧಿಕ ಬೌಂಡರಿ: ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ (209) ಹೆಸರಿನಲ್ಲಿದೆ. ಇನ್ನು 59 ಬೌಂಡರಿಸಿದರೆ ಈ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಳ್ಳಬಹುದು.
ಅತ್ಯಧಿಕ ಪಂದ್ಯಗಳ ದಾಖಲೆ: ಒಂದು ರಾಷ್ಟ್ರದ ವಿರುದ್ಧ 100 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನಾಡಿದರೆ ಸಾಕು.
ಸೆಂಚುರಿ ವೀರ: ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ (20 ಶತಕ) ಸಾರ್ವಕಾಲಿಕ ದಾಖಲೆಯನ್ನು ಮೀರಿಸಲು ವಿರಾಟ್ ಕೊಹ್ಲಿಗೆ (16 ಶತಕ) 5 ಶತಕಗಳ ಅವಶ್ಯಕತೆಯಿದೆ.
ಅತಿ ಹೆಚ್ಚು ಕ್ಯಾಚ್ಗಳು: ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (66)ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ 70 ಸಂಖ್ಯೆಯ ಮಾರ್ಕ್ ಮುಟ್ಟಲು 4 ಕ್ಯಾಚ್ಗಳನ್ನು ಹಿಡಿದರೆ ಸಾಕು
ಬೌಂಡರಿ ಬ್ಯಾಟರ್: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಈವರೆಗೆ 496 ಬೌಂಡರಿಗಳನ್ನು ಬಾರಿಸಿದ್ದಾರೆ. ಇದೀಗ 4 ಬೌಂಡರಿಗಳನ್ನು ಸಿಡಿಸಿದರೆ 500ರ ಗಡಿ ತಲುಪಬಹುದು. ಇದರೊಂದಿಗೆ ಸಚಿನ್ ತೆಂಡೂಲ್ಕರ್ (764) ಮತ್ತು ಬ್ರಿಯಾನ್ ಲಾರಾ (550) ನಂತರ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.