ಇಂಫಾಲ : ರಾಷ್ಟ್ರಪತಿ ಆಡಳಿತ ಜಾರಿಯಾದ ಮೇಲೂ ಸಹ ಮಣಿಪುರದಲ್ಲಿ ಹಿಂಸಾಚಾರ ನಡೆದಿದೆ. ಕಳೆದ ಶನಿವಾರ ಕಾಂಗ್ ಪೊಕ್ಪಿ ಜಿಲ್ಲೆಯ ವಿವಿದೆಡೆ ಕುಕಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಓರ್ವ ಪ್ರತಿಭಟನಾಕಾರರು ಸಾವನ್ನಪಿದ್ದು, ಮಹಿಳೆಯರು ಸೇರಿ 25 ಮಂದಿಗೆ ಗಾಯಗಳಾಗಿವೆ.
ಕೀಥೆಲ್ಮಂಬಿಯಲ್ಲಿ ನಡೆದ ಘರ್ಷಣೆಯ ವೇಳೆ 30 ವರ್ಷದ ಲಾಲ್ಗೌತಾಂಗ್ ಸಿಂಗ್ಸಿಟ್ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ
ಪ್ರತಿಭಟನಾಕಾರರು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಇಂಫಾಲ್ನಿಂದ ಸೇನಾಪತಿ ಜಿಲ್ಲೆಗೆ ಪ್ರಯಾಣಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ಹದಗೆಟ್ಟಿತು ಎಂದು ವರದಿಯಾಗಿದೆ.