ವಿನೇಶ್ ಪೋಗಟ್ ಅನರ್ಹತೆ ತೀರ್ಪು ಆಗಸ್ಟ್ 16ಕ್ಕೆ ಮುಂದೂಡಿಕೆ ಮಾಡಲಾಗಿದೆ.
100 ಗ್ರಾಂ ತೂಕ ಹೆಚ್ಚು ಬಂದ ಹಿನ್ನೆಲೆ ಕುಸ್ತಿ ಫೈನಲ್ ಪಂದ್ಯದಲ್ಲಿ ವಿನೇಶ್ ಪೋಗಟ್ ಅನರ್ಹಗೊಂಡಿದ್ದರು. ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಘಾತಕಾರಿ ಎದುರಿಸಿದ ಅನರ್ಹತೆಯ ಕುರಿತ ವ್ಯಾಜ್ಯದ ತೀರ್ಪನ್ನು ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ ಮತ್ತಷ್ಟು ಮುಂದೂಡಿಕೆ ಮಾಡಿದೆ.
ಕ್ರೀಡಾ ನ್ಯಾಯಾಲಯವು ಈ ವಿಷಯದ ಬಗ್ಗೆ ವಿಸ್ತರಣೆಯನ್ನು ಕೇಳಿರುವುದು ಇದು ಮೂರನೇ ಬಾರಿ. ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ನ ಫೈನಲ್ಗೆ ಮೊದಲು ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿದ್ದರು.
ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಭಾರತೀಯ ಕ್ರೀಡಾಭಿಮಾನಿಗಳು ತೀರ್ಪಿಗಾಗಿ ಮತ್ತಷ್ಟು ಕಾಯುವಂತಾಗಿದೆ.
ಫೋಗಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ನಡುವಿನ ಪ್ರಕರಣದ ತೀರ್ಪನ್ನು ಮತ್ತಷ್ಟು ವಿಳಂಬಗೊಳಿಸುವುದಾಗಿ ನ್ಯಾಯಾಲಯ ಮಂಗಳವಾರ ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಕಟಿಸಿದೆ.