ವಿನೇಶ್ ಫೋಗಟ್ ದೆಹಲಿಯ ನಡುಬೀದಿಯಲ್ಲಿ ಕುಳಿತು ನೆಲಕ್ಕಿಳಿಸಿದ್ದ ಕಣ್ಣೀರನ್ನು ಯಾರು ಗಮನಿಸಿದ್ದರೋ ಗೊತ್ತಿಲ್ಲ ಆದರೆ, ಇಂದು ಇಡೀ ದೇಶದ ಜನರ ಚಿತ್ತವಿರುವುದು ಮಾತ್ರ ಫೋಗಟ್ ಅವರತ್ತ. ಪ್ಯಾರಿಸ್ ಒಲಿಂಪಿಕ್ಸ್ನ 50 ಕೆ.ಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯ ಫೈನಲ್ಗೆ ಲಗ್ಗೆ ಇಟ್ಟಿರುವ ಈ ಛಲಗಾತಿಗೆ ಬೆಳ್ಳಿ ಪದಕವಂತೂ ಕನ್ಫರ್ಮ್ ಆಗಿದೆ. ಬಟ್ ಚಿನ್ನ ಗೆದ್ದೇ ಬರುತ್ತಾರೆ ಎಂಬ ಕಾನ್ಫಿಡೆಂಟ್ ಇಡೀ ದೇಶದ ಕ್ರೀಡಾಭಿಮಾನಿಗಳಲ್ಲಿದೆ.
ಒಲಿಂಪಿಕ್ಸ್ನಲ್ಲಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಅವರು ಕೇವಲ 100 ಗ್ರಾಂ ತೂಕದಿಂದ ಪದಕ ವಂಚಿತರಾಗಿದ್ದಾರೆ. 50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಿನ್ನೆ ವೀರಾವೇಶದ ಆಟ ಪ್ರದರ್ಶಿಸಿ ವಿನೇಶ್ ಫೈನಲ್ ಪ್ರವೇಶಿಸಿದ್ದರು. ಆದರೆ ನಿನ್ನೆ 50 ಕೆ.ಜಿಯ ಒಳಗಡೆ ತೂಕವನ್ನ ಹೊಂದಿದ್ದ ವಿನೇಶ್ ಫೋಗಟ್ ಅವರು ಇವತ್ತು ಬೆಳಗ್ಗೆ ಪರಿಶೀಲನೆಯ ವೇಳೆ 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಜಸ್ಟ್ 100 ಗ್ರಾಂ ತೂಕ ಹೆಚ್ಚಳದಿಂದಾಗಿ ವಿನೇಶ್ ಫೋಗಟ್ ಅವರು ಒಲಿಂಪಿಕ್ ಪದಕದಿಂದ ಮಿಸ್ ಆಗಿದ್ದಾರೆ.
PM Narendra Modi: ಪ್ಯಾರಿಸ್ ಒಲಿಂಪಿಕ್ಸ್ʼನಿಂದ “ವಿನೇಶ್ ಫೋಗಟ್ ಅನರ್ಹ”: ಪ್ರಧಾನಿ ಮೋದಿ ಹೇಳಿದ್ದೇನು..?
ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಕೂಡ. ಪ್ರಿಕ್ವಾರ್ಟರ್ ಫೈನಲ್ನಲ್ಲಿ ಫೋಗಟ್ ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ಹಾಲಿ ಗೋಲ್ಡ್ ಮೆಡಾಲಿಸ್ಟ್, ಸೋಲೇ ಕಾಣದ ಜಪಾನ್ನ ಯೂಯಿ ಸುಸಾಕಿ ಅವರನ್ನು ಮಣಿಸಿದಾಗಲೇ ಇಡೀ ಭಾರತ ಚಿನ್ನ ಗೆದ್ದಷ್ಟೇ ಸಂಭ್ರಮಿಸಿತ್ತು. ಬಳಿಕ ಕ್ವಾರ್ಟರ್ ಫೈನಲ್ನಲ್ಲಿ 7-5 ಪಾಯಿಂಟ್ಗಳಿಂದ ಉಕ್ರೇನ್ನ ಒಕ್ಸಾನಾ ಲಿವಾಚ್ ಅವರ ಮಗ್ಗಲು ಮುರಿದು, ಸೆಮಿಫೈನಲ್ನಲ್ಲಿ ಕ್ಯೂಬಾದ ಯೂಸ್ನೆಲಿಸ್ ಗುಜ್ಮನ್ ಲೊಪೆಜ್ ಎದುರು ವಿನೇಶ್ ಫೋಗಟ್ 5-0 ಪಾಯಿಂಟ್ಗಳಿಂದ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ವಿನೇಶ್ ಫೋಗಟ್ ಅವರು ನಿನ್ನೆ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಆಡುವಾಗ 50 ಕೆಜಿ ತೂಕ ಇದ್ದರು. ನಿನ್ನೆ ರಾತ್ರಿ 50 ಕೆಜಿ ಇದ್ದ ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದು ಹೇಗೆ ಅನ್ನೋದು ನಿಗೂಢವಾಗಿದೆ. ಕಳೆದ ರಾತ್ರಿ ಫೈನಲ್ ಪ್ರವೇಶಿಸಿದ ಖುಷಿಯಲ್ಲಿ ಒಂದೆರಡು ಸ್ಲೈಸ್ ಬ್ರೆಡ್ ಹಾಗೂ ಒಂದೆರಡು ಸಿಹಿ ತಿಂಡಿ ಜಾಸ್ತಿ ತಿಂದಿದ್ದರೂ ತೂಕ ಜಾಸ್ತಿ ಆಗುವ ಸಾಧ್ಯತೆ ಇದೆ. ಅಥವಾ ಊಟದಲ್ಲಿ ಚಪಾತಿ, ರೊಟ್ಟಿ ತರಹದ ಕಾರ್ಬೋಹೈಡ್ರೇಡ್ ಅಂಶಗಳ ಸೇವನೆಯಿಂದಲೂ ತೂಕ ಜಾಸ್ತಿಯಾಗಿರಬಹುದು. ವಿನೇಶ್ ಫೋಗಟ್ ಅವರ 100 ಗ್ರಾಂ ತೂಕದ ಬಗ್ಗೆ ಮತ್ತಷ್ಟು ನಿಖರ ಮಾಹಿತಿ ಹೊರಬರಬೇಕಿದೆ.
2016ರ ರಿಯೊ ಒಲಿಂಪಿಕ್ಸ್ನಲ್ಲಿ ಗಾಯಗೊಂಡಿದ್ದ ವಿನೇಶ್ ಫೋಗಟ್ ಮತ್ತೆ ಕಣಕ್ಕಿಳಿದಿದ್ದೇ ರಣರೋಚಕ. ಟೋಕಿಯೊ ಒಲಿಂಪಿಕ್ಸ್ ಬಳಿಕ ಒಮ್ಮೆ ಅಮಾನತು ಶಿಕ್ಷೆಗೂ ಒಳಗಾಗಿದ್ದರು. ಕಂಪನಿಯೊಂದಿಗಿನ ಒಪ್ಪಂದವೂ ಕಳಚಿ ಬಿದ್ದಿತ್ತು.