ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದಲೂ ವಿನಯ್ ಮತ್ತು ಪ್ರತಾಪ್ ಮಧ್ಯ ಶೀತಲಸಮರ ನಡೆಯುತ್ತಲೇ ಇತ್ತು. ಅದು ಕೆಲವೊಮ್ಮೆ ಮಾತಿನ ಚಕಮಕಿಗೂ ಇಳಿದಿದ್ದಿದೆ. ಪ್ರತಾಪ್ ಅವರನ್ನು ಅವಕಾಶ ಸಿಕ್ಕಾಗೆಲ್ಲ ಟೀಕಿಸುತ್ತಿದ್ದ, ತೆಗಳುತ್ತಿದ್ದ ವಿನಯ್ ಇದೀಗ ಅವರನ್ನು ಹೊಗಳುತ್ತಿದ್ದಾರೆ. ‘ನಿನ್ನ ಬಗ್ಗೆ ಗೌರವ ಹೆಚ್ಚಾಗಿದೆ’ ಅನ್ನುತ್ತಿದ್ದಾರೆ.
ಹಾಗಾದರೆ ಅಂಥದ್ದೇನು ಬದಲಾವಣೆಯಾಗಿದೆ? ಇದು ಮನಸಾಳದಿಂದ ಹುಟ್ಟಿಕೊಂಡ ಮೆಚ್ಚುಗೆಯಾ ಅಥವಾ ಹೊಸದೊಂದು ಗೇಮ್ ಗೆ ಮುನ್ನುಡಿಯಾ? ಅರ್ಥ ಮಾಡಿಕೊಳ್ಳುವುದು ಕಷ್ಟವೇ.ಆದರೆ ಪ್ರತಾಪ್ ಅವರಿಗೆ ಇದು ಕಷ್ಟವೇನಲ್ಲ.
ಮೊದಲಿನಿಂದಲೂ ಚಾಣಾಕ್ಷತನದಿಂದಲೇ ಎಲ್ಲರನ್ನೂ ತೂಗಿಸಿಕೊಂಡು ಬಂದಿರುವ ಅವರು, ಈಗ ವಿನಯ್ ಮತ್ತು ಅವರ ತಂಡದಿಂದ ಬಂದಿರುವ ಪ್ರಶಂಸೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಕಾಯ್ದು ನೋಡೋಣ.