ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಔಟ್ ಆಗಿದ್ದು, ಎಲ್ಲರಿಗೂ ಶಾಕ್ ಆಗಿದೆ. ಕಪ್ ಗೆಲ್ಲಬೇಕು ಎನ್ನುವ ಕನಸು ಕಂಡು ದೊಡ್ಮನೆಗೆ ಹೋದವರು ವಿನಯ್ ಗೌಡ. ಆದರೆ, ಅವರ ಕನಸು ನನಸಾಗಲೇ ಇಲ್ಲ. ಟಾಪ್ ಆರರ ಪೈಕಿ ಮೂರನೇ ವ್ಯಕ್ತಿ ಆಗಿ ಅವರು ಎಲಿಮಿನೇಟ್ ಆಗಿದ್ದಾರೆ. ಇದು ವಿನಯ್ ಗೌಡ ಅವರಿಗೆ ಶಾಕಿಂಗ್ ಆಗಿತ್ತು. ಅವರು ಹೊರ ಹೋಗಿದ್ದರಿಂದ ಅವರ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಟಾಪ್ ಎರಡರಲ್ಲಿ ಅವರು ಇರಬಹುದು ಎನ್ನುವ ಊಹೆ ತಪ್ಪಾಗಿದೆ.
ಟಾಪ್ ಆರರ ಪೈಕಿ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ನಿಂದ ಮೊದಲು ಔಟ್ ಆದರು. ಆ ಬಳಿಕ ಔಟ್ ಆಗಿದ್ದು ವರ್ತೂರು ಸಂತೋಷ್. ಮೂರನೇ ರನ್ನರ್ಅಪ್ ಆಗಿ ವಿನಯ್ ಗೌಡ ಹೊರ ಬಂದರು. ವಿನಯ್ ಅವರಿಗೆ ಈ ವಿಚಾರ ಕೇಳಿ ನಿಜಕ್ಕೂ ಶಾಕ್ ಆಗಿದೆ. ‘ನಾವೇ ಟಾಪ್ನಲ್ಲಿ ಬರೋದು’ ಎಂದು ವಿನಯ್ ಗೌಡ ಆ್ಯಂಡ್ ಟೀಂ ಹೇಳಿತ್ತು. ಈಗ ಅವರ ಟೀಂನ ಎಲ್ಲರೂ ಔಟ್ ಆದಂತೆ ಆಗಿದೆ.
ವಿನಯ್ ಗೌಡ ಆರಂಭದಲ್ಲಿ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದರು. ಅವರೇ ಕಪ್ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಅವರು ಮೊದಲಿನಷ್ಟು ಅಗ್ರೆಸ್ ಆಗಿ ಕಾಣಿಸಿಕೊಂಡಿರಲಿಲ್ಲ. ಪ್ರತಾಪ್ ಸೇರಿ ಅನೇಕರ ಜೊತೆ ಅವರು ಜಗಳ ಆಡಿ ಮೈಲೇಜ್ ಕಳೆದುಕೊಂಡಿದ್ದಾರೆ. ಇದೆಲ್ಲ ಅವರ ಗೇಮ್ ಮೇಲೆ ಪ್ರಭಾವ ಬೀರಿದೆ. ಅವರು ಅಂದುಕೊಂಡಷ್ಟು ವೋಟ್ ಪಡೆಯಲು ಸಾಧ್ಯವಾಗಲೇ ಇಲ್ಲ.
ವಿನಯ್ ಗೌಡ ಅವರಿಗೆ ಅನೇಕ ಸೆಲೆಬ್ರಿಟಿಗಳು ಈ ಬಾರಿ ಬೆಂಬಲ ಸೂಚಿಸಿದ್ದರು. ವೋಟ್ ಮಾಡುವಂತೆ ಅವರು ಕೋರಿಕೊಂಡಿದ್ದರು. ಆದರೆ, ಅವರಿಗೆ ಅಂದುಕೊಂಡಷ್ಟು ವೋಟ್ ಬೀಳಲೇ ಇಲ್ಲ. ಹೀಗಾಗಿ ಅವರು ಹೊರ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ.