ವಿಜಯಪುರ:- ಹೊಸ ವರ್ಷಾಚರಣೆ ಹಿನ್ನಲೆ ವಿಜಯಪುರದಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ ನಿಯೋಜನೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾ ಎಸ್ ಪಿ ಋಷಿಕೇಶ ಸೋನಾವಣೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಇಂದು ಸಂಜೆಯಿಂದಲೇ ಪೋಲಿಸ್ ರೌಂಡ್ಸ್ ಮಾಡಲಾಗುತ್ತದೆ. ಕೆಲವೆಡೆ ಒಳಾಂಗಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂತಹ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಪೋಲಿಸ್ ಬಂದೋ ಬಸ್ತ ನಿಯೋಜನೆ ಮಾಡಲಾಗಿದೆ. ಕುಡಿದು ವಾಹನ ಚಲಾವಣೆ ಮಾಡುವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದು.
ರಾತ್ರೀ ತ್ರೀಬಲ್ ರೈಡಿಂಗ್ ವಾಹನ ಸವಾರರ ಮೇಲೆ ಕೇಸ್ ಹಾಕುವದರ ಜೊತೆಗೆ ಅಂತಹ ವಾಹನಗಳನ್ನು ಸೀಜ್ ಮಾಡುತ್ತೇವೆ. ಯಾವದಾದರೂ ಬಡಾವಣೆಯಲ್ಲಿ ಶಬ್ದ ಮಾಲಿನ್ಯ ಉಂಟು ಮಾಡಿದರೆ ಯಾರಾದರೂ ದೂರು ನೀಡಿದರೆ ತಕ್ಷಣ ಕ್ರಮ ಜರುಗಿಸಲಾಗುವದು. ಜಿಲ್ಲೆಯಾದ್ಯಂತ ಅಧಿಕಾರಿಗಳು ನಿರಂತರ ರೌಂಡ್ಸ್ ನಲ್ಲಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮ ಜರುಗಿಸಲಾಗುವದು. ಪ್ರತಿ ಸ್ಟೇಷನ್ ವ್ಯಾಪ್ತಿಯಲ್ಲಿ ಬಂದೋ ಬಸ್ತ ನಿಯೋಜನೆ ಮಾಡಲಾಗಿದ್ದು ನಗರ ಪ್ರದೇಶದಲ್ಲಿ ಹೆಚ್ಚಿನ ಬಂದೋ ಬಸ್ತ ನಿಯೋಜನೆ ಮಾಡಲಾಗಿದೆ ಎಂದು ಎಸ್ ಪಿ ಋಷಿಕೇಶ ಸೋನಾವಣೆ ಹೇಳಿಕೆ ನೀಡಿದ್ದಾರೆ.