ವಿಜಯಪುರ: ನೂರಕ್ಕೆ ನೂರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ನಮ್ಮ ಹೈಕಮಾಂಡ್ ಸಿದ್ದರಾಮಯ್ಯ ಜೊತೆಗೆ ಇದೆ. ಇದನ್ನು ನಮ್ಮ ಹೈಕಮಾಂಡ್ ಹೇಳಬೇಕು,
ಇವ್ರು ಯಾರು ಹೇಳೋಕೆ? ನಮ್ಮ ಪಕ್ಷದ ವಿಚಾರ ಹೇಳೋಕೆ ವಿಜಯೇಂದ್ರ ಯಾರು? ನೂರಕ್ಕೆ ನೂರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ.
Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ದೀಪಾವಳಿಗೆ ಡಬಲ್ ಧಮಾಕಾ ಆಫರ್ ಘೋಷಣೆ
ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಎಂದು ಕಿಡಿಕಾರಿದರು. ವಿಜಯೇಂದ್ರ ಸತೀಶ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನೀವು ಹೇಳುತ್ತಿದ್ದೀರಿ ನಾನು ಕೇಳುತ್ತಿದ್ದೀನಿ. ಮಾಹಿತಿ ತೆಗೆದುಕೊಂಡು ಹೇಳುತ್ತೇನೆ ಎಂದು ಹೇಳಿದರು.