ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ವಿಜಯ ಶಕೆ ಆರಂಭವಾಗಿದೆ. ಬಿಜೆಪಿಯ ಯುವ ಅಧ್ಯಕ್ಷ ವಿಜಯೇಂದ್ರ (BY Vijayendra) ಮುಂದೆ ಸಾಲು ಸಾಲು ಸವಾಲುಗಳಿವೆ. ಲೋಕಸಭೆ ಚುನಾವಣಾ (Lok Sabha Election) ಟಾಸ್ಕ್ ರೀಚ್ ಆಗಲು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯ ತಂತ್ರಗಳನ್ನು ಹೆಣೆದಿದ್ದಾರೆ..

ವಿಜಯೇಂದ್ರ ಎದುರು ಮುಳ್ಳಿನ ಹಾದಿ ಇದ್ದು ಸದ್ಯ ಈಗ ಬಿಜೆಪಿ (BJP) ಮನೆ ಸಮಸ್ಯೆಗಳ ಗೂಡಾಗಿದೆ. ಪಕ್ಷದ ಹೀನಾಯ ಸೋಲು, ಬಣ ಸಂಘರ್ಷ, ಒಗ್ಗಟ್ಟಿಲ್ಲ, ನಾಯಕತ್ವದ ಕೊರತೆ, ಸೊರಗಿದ ಪಕ್ಷ ಸಂಘಟನೆ ಇಂಥಹ ಸಂದರ್ಭದಲ್ಲಿ ಪಕ್ಷಕ್ಕೆ ನೂತನ ಸಾರಥಿಯಾಗಿ ವಿಜಯೇಂದ್ರ ಎಂಟ್ರಿಯಾಗಿದ್ದಾರೆ.

ಇದೀಗ ವಿಜಯೇಂದ್ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮುಂದೆ ದೊಡ್ಡ ಸವಾಲಗಳ ರಾಶಿಯೇ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಪಕ್ಷವನ್ನು ಮೇಲೆತ್ತಬೇಕಿದೆ. ಮತ್ತೊಂದೆಡೆ ಸೋಲಿನಿಂದ ಹತಾಶೆಗೊಂಡು ಮನೆ ಸೇರಿರುವ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಹ ಮೂಡಿಸಿ ಮುನ್ನಲೆಗೆ ಕರೆದುಕೊಂಡು ಬರಬೇಕಿದೆ. ಅದರಲ್ಲೂ ಪ್ರಮುಖವಾಗಿ ಅಸಮಾಧಾನಗೊಂಡಿರುವ ಹಿರಿಯ ನಾಯಕರನ್ನು ಸಮಾಧಾನ ಮಾಡಬೇಕಿದೆ. ಹೀಗೆ ಹತ್ತು ಹಲವು ಸವಾಲುಗಳು ವಿಜಯೇಂದ್ರ ಮುಂದೆ ಇವೆ. ಇವೆಲ್ಲವುಗಳನ್ನು ಅದು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲ

ಮೊದಲಿಗೆ ಎಬಿವಿಪಿಯಲ್ಲಿ ಗುರುತಿಸಿಕೊಂಡು ಬಳಿಕ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಲವು ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆ ಸಂಬಂಧ ಹೈಕಮಾಂಡ್ ನೀಡಿದ್ದ ಟಾಸ್ಕ್ ಗಳನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆ ಪ್ರಬಲ ಸಮುದಾಯದ ನಾಯಕನ ಪುತ್ರ ಎನ್ನು ಒಂದು ಅಂಶವೂ ಸಹ ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ಒಲಿಯುವುದರಲ್ಲಿ ಸಹಾಯಕವಾಗಿದೆ.

ವಿಜಯೇಂದ್ರ ನಡೆದು ಬಂದ ಹಾದಿ
- 1973 ಆಗಸ್ಟ್ 6ರಂದು ವಿಜಯೇಂದ್ರ ಜನನ
- ರಾಜ್ಯದ ಪ್ರಮುಖ ಲಿಂಗಾಯತ ಸಮುದಾಯಕ್ಕೆ ಸೇರಿರುವ ವಿಜಯೇಂದ್ರ
- ತಂದೆ ಬಿ ಎಸ್ ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ
- ಸಹೋದರ ಬಿ ವೈ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಸಂಸದ
- ವಿಜೇಯಂದ್ರ ಅವರು ಕಾನೂನು ಪದವಿ ಪೂರ್ಣಗೊಳಿಸಿ ಒಂದಿಷ್ಟು ದಿನಗಳ ಕಾಲ ವಕೀಲಿಕಿ ಕೂಡ ಮಾಡಿದ್ದಾರೆ.
- ವಿದ್ಯಾಬ್ಯಾಸ ಮಾಡುತ್ತಿರುವಾಗಲೇ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.
- ತಂದೆ 1983ರಿಂದಲೂ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ 2023ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ.
- ಶಾಸಕರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
- ಪಕ್ಷದ ಉಪಾಧ್ಯಕ್ಷರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
- ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಜಯೇಂದ್ರ ಅವರು 25 ಸದಸ್ಯರ ಚುನಾವಣಾ ಪ್ರಚಾರ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
- 2020ರಲ್ಲಿ ಕೆ ಆರ್ ಪೇಟೆ ಮತ್ತು ಶಿರಾ ವಿಧಾನಸಭಾ ಉಪ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದರು. ಅಲ್ಲದೇ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.
- ಈ ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಲ್ಲಿ ವಿಜಯೇಂದ್ರ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
- ಉತ್ತಮ ಸಂಘಟಕ, ತಂತ್ರಗಾರ ಎಂದು ಹೈಕಮಾಂಡ್ ಗೆ ಮುಂದೆ ಸಾಬೀತು ಮಾಡಿದ್ದಾರೆ.