ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರರ ನೇಮಕ ಕಾರ್ಯಕರ್ತರಿಗೆ ಉತ್ಸಾಹ ಇಮ್ಮಡಿಗೊಳಿಸಿದೆ. ಅಷ್ಟೇಅಲ್ಲ ಹೊಸ ಅಲೆ ಸೃಷ್ಟಿಸಿದೆ ಅಂತ ಬಿಜೆಪಿ ರಾಜ್ಯ ವಕ್ತಾರ ಹಾಗೂ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಪಕ್ಷವನ್ನು ವ್ಯಾಪಕವಾಗಿ ಸಂಘಟಿಸುವ ಅದರಲ್ಲೂ ಕ್ರಿಯಾಶೀಲತೆ ಉಳ್ಳವರನ್ನು ನೇಮಕ ಮಾಡಬೇಕು ಅನ್ನೋದು ಕಾರ್ಯಕರ್ತರ ಬಹುದಿನಗಳ ಬಯಕೆ ಆಗಿತ್ತು. ಪಕ್ಷದ ವರಿಷ್ಠ ಮಂಡಳಿ ಈ ಮೂಲಕ ಸಾಕಾರಗೊಳಿದೆಯಲ್ಲದೇ ಒಬ್ಬ ಸೂಕ್ತ ಯುವ ನಾಯಕನಿಗೆ ಅಧ್ಯಕ್ಷರನ್ನಾಗಿ ಗುರುತಿಸಿದ್ದು ಕೂಡ ಒಂದು ಆಶಾದಾಯಕ ಸಂಗತಿ ಎಂದು ಮಾಧ್ಯಮ ಹೇಳಿಕೆಯಲ್ಲಿ ತೆಲ್ಕೂರ್ ತಿಳಿಸಿದ್ದಾರೆ.