ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತರಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಲಿನಾಥ ಸ್ವಾಮಿಜಿ ಹೇಳಿದರು. ಈ ಕುರಿತು ವಿಜಯಪುರ ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕಲ್ಲಿನಾಥ ಸ್ವಾಮಿಜಿ ವರ್ಷಕ್ಕೆ 40 ಸಾವಿರ ಕೋಟಿಯಂತೆ ಐದು ವರ್ಷದಲ್ಲಿ 2 ಲಕ್ಷ ಕೋಟಿ ಹಣ ಒದಗಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತ ಪೂರ್ಣಗೊಳಿಸಬೇಕು. ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಭೂ ಸ್ವಾಧೀನಕ್ಕೆ ಹಿಂದಿನ ಸರ್ಕಾರ ನಿಗದಿಪಡಿಸಿದ ಬೆಲೆ ಏಕ ಪಕ್ಷೀಯವಾಗಿದೆ, ಆದನ್ನು ಮರು ಪರಿಶೀಲನೆ ಮಾಡಿ ಹೆಚ್ಚಿನ ಹಣ ನೀಡಬೇಕು. ಹಿನ್ನೀರಿನಿಂದ ಸುತ್ತುವರೆದ ನಡುಗಡ್ಡೆಗಳಾಗುವ ಜಮೀನು ಹಾಗೂ ಮನೆಗಳನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರ ಕೊಡಬೇಕು. ಆಲಮಟ್ಟಿ ಜಲಾಶಯದ ಎತ್ತರ ವಿಚಾರವಾಗಿ ಯಾವೊಂದು ಸರ್ಕಾರ ಗಮನಹರಿಸುತ್ತಿಲ್ಲ,
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಇವರು ಚಿಂತೆ ಮಾಡುತ್ತಿಲ್ಲ ಹಾಗಿದ್ದರೆ ಈ ಭಾಗದ ಅಭಿವೃದ್ಧಿ ಮಾಡಲು ಆಗದಿದ್ದರೆ ದಕ್ಷಿಣ ಕರ್ನಾಟಕ ಭಾಗದ ಮುಖ್ಯ ಮಂತ್ರೀಗಳು ಎಂದು ಘೋಷಣೆ ಮಾಡಿಕೊಳ್ಳಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ತಾವು ಇನ್ನೂ ಮಾಡದೇ ಹೋದರೆ ನಾವು ರೈತರು ಪ್ರಾಣ ತ್ಯಾಗಕ್ಕೂ ಸಿದ್ದರಿದ್ದರೆ ನಮ್ಮಬೇಡಿಕೆ ಇಡೇರಿಕೆಗೆ ಬಾಗಲಕೋಟೆಯಲ್ಲಿ ನಾಳೆಯಿಂದ ಧರಣಿ ಸತ್ಯಾಗ್ರಹ ಆರಂಭ ಮಾಡುತ್ತೇವೆ ಎಂದರು..