ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ವಿಜಯಪುರ ನಗರದ ರೇಡಿಯೋ ಕೇಂದ್ರ ಬಳಿ ಮಂಗಳವಾರ ರಾತ್ರಿ ನಡೆದಿದೆ.
BCCI ನಿಂದ ಕನ್ನಡಿಗನಿಗೆ ಅನ್ಯಾಯ: ಟೀಮ್ ಇಂಡಿಯಾದಿಂದ ಕೆ.ಎಲ್ ರಾಹುಲ್ಗೆ ಗೇಟ್ಪಾಸ್!?
ಎರಡು ದಶಕಗಳ ಹಿಂದೆ ಭೀಮಾತೀರದ ನಟೋರಿಯಸ್ ಹಂತಕನೆಂದೇ ಕುಖ್ಯಾತಿ ಪಡೆದಿದ್ದ ಚಂದಪ್ಪ ಹರಿಜನ ಅಪ್ಪಟ ಶಿಷ್ಯನಾಗಿದ್ದ ಬಾಗಪ್ಪ ಹರಿಜನನ ಮೇಲೆ ಈ ಹಿಂದೆಯು ಗುಂಡಿನ ದಾಳಿ ನಡೆದಿತ್ತು, ಕೆಲ ವರ್ಷಗಳ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ, ಸದ್ಯ ಆಗಂತುಕರ ಗುಂಡಿಗೆ ಬಲಿಯಾಗಿದ್ದಾನೆ.
ಮಾರಕಾಸ್ತ್ರಗಳಿಂದ ಬಾಗಪ್ಪನನ್ನು ಹತ್ಯೆಗೈದಿದ್ದು, ಬಾಗಪ್ಪನ ಎಡಗೈ ಮುಂಗೈ ಕಟ್ ಮಾಡಿದ್ದು, ಮುಖ ಹಾಗೂ ತಲೆಗೆ ಹೊಡೆದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದ್ದು, ಘಟನಾ ಸ್ಥಳಕ್ಕೆ ವಿಜಯಪುರ SP ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಬಾಗಪ್ಪ ಹರಿಜನ ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇನ್ನು ಈ ಬಾಗಪ್ಪ ಹರಿಜನ ಅನೇಕ ಪ್ರಕರಣದಲ್ಲಿ ಕೊಲೆ ಆರೋಪಿ ಆಗಿದ್ದ. ಬಳಿಕ ಜಾಮೀನ ಮೇಲೆ ಆಚೆ ಬರುತ್ತಿದ್ದ. ಕೊನೆ ಈ ಕ್ರೈಂ ಚಟುವಟಿಕೆಗಳಿಂದ ಆಚೆ ಬಂದು ಜೀವನ ಮಾಡಬೇಕೆಂದು ಬಾಗಪ್ಪ ಹೇಳಿಕೊಂಡಿದ್ದ ಎನ್ನಲಾಗಿದೆ.